ಕೊಟ್ಟೂರೇಶ್ವರ ರಥೋತ್ಸವ ರದ್ದು, ಧಾರ್ಮಿಕ ಪೂಜಾ ಕೈಂಕರ್ಯಕ್ಕೆ ಅವಕಾಶ

ಕೊಟ್ಟೂರು, ಫೆ.24 – ಬರುವ ಮಾರ್ಚ್ 7 ರಂದು ಕೊಟ್ಟೂರು ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವ ನಿಷೇಧಗೊಂಡಿದ್ದು, ವಿಧಿವಿಧಾನದಂತೆ ಎಲ್ಲಾ ಬಗೆಯ ಧಾರ್ಮಿಕ ಪೂಜಾ ಕೈಂಕರ್ಯಗಳು ಮಾತ್ರ ನಡೆಯಲು ಅವಕಾಶ ನೀಡಿದೆ ಎಂದು ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಹೇಳಿದರು.

ಇಲ್ಲಿನ ಹಿರೇಮಠದ ಬಳಿ ಇರುವ ಕಲ್ಯಾಣ ಮಂಟಪದಲ್ಲಿ ಧಾರ್ಮಿಕ ದತ್ತಿ ಇಲಾಖೆ ಇಂದು ಹಮ್ಮಿಕೊಂಡಿದ್ದ ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವದ ಪೂರ್ವ ಭಾವಿ ಸಿದ್ಧತಾ ಸಭೆಯ ನೇತೃತ್ವ ವಹಿಸಿ ಅವರು ಮಾತನಾಡಿದರು. 

ಶ್ರೀ ಗುರು ಕೊಟ್ಟೂರೇಶ್ವರ ಸ್ವಾಮಿಗೆ ಪೂಜಾ ವಿಧಿವಿಧಾನಗಳು ಮಾತ್ರ ನೆರವೇರಲಿದ್ದು, ಉಳಿ ದಂತೆ ಜಾತ್ರೋತ್ಸವ  ರದ್ದುಗೊಂಡಿದೆ. ಕೋವಿಡ್ ನಿಯಾಮವಳಿಗನುಸಾರವಾಗಿ ಶ್ರೀ ಸ್ವಾಮಿಗೆ ಪರಂಪರೆಯಂತೆ ಪೂಜೆ ಸೇವೆಗಳು ನಡೆಯಲಿದ್ದು, ಮೂಲಾ ನಕ್ಷತ್ರದ ವೇಳೆಗೆ ಅನುಗುಣವಾಗಿ ರಥೋತ್ಸವ ನಾಲ್ಕು ಹೆಜ್ಜೆ ಮಾತ್ರ ಸಾಗಲಿದೆ ಇದನ್ನು ಹೊರತು ಪಡಿಸಿ ಬೇರೆ ಯಾವ ಕಾರ್ಯಕ್ರಮಗಳು ನಡೆಯುವಂತಿಲ್ಲ ಎಂದು ಅವರು ಹೇಳಿದರು.

ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಎಲ್ಲೆಡೆ ಹರಡತೊಡಗಿದ್ದು, ಈ ರೋಗ ನಿಯಂ ತ್ರಣಕ್ಕೆ ಜನಸಂದಣೆ ಸೇರದಂತೆ ಕ್ರಮಕೈಗೊ ಳ್ಳಬೇಕಾಗಿರುವುದರಿಂದ ರಥೋತ್ಸವವನ್ನು ರದ್ದುಗೊಳಿಸಲಾಗಿದೆ. ಕೊಟ್ಟೂರಿನ ಪಟ್ಟಣದ ಜನತೆ ಬಿಟ್ಟು ಪರ ಊರಿನಿಂದ ಯಾವುದೇ ಭಕ್ತರು ಕೊಟ್ಟೂರಿನೊಳಗೆ ಪ್ರವೇಶಿಸದಂತೆ ನಿರ್ಬಂಧಿಸ ಲಾಗುವುದು ಎಂದು ಅವರು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಭೀಮಾ ನಾಯ್ಕ ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವ ಸಾಗಲು ಭಕ್ತರ ಸಂಖ್ಯೆಯನ್ನು ಸೀಮಿತಗೊಳಿಸಿ, ಕೋವಿಡ್ ನಿಯಾಮಾವಳಿಗಳಿಗನುಗುಣವಾಗಿ ಅನುಮತಿ ನೀಡುವಂತೆ ಜಿಲ್ಲಾಢಳಿತ ಪುನರ್ ಪರಿಶೀಲಿಸುವಂತೆ ಕೋರಿದರು. 

ಕೊರೊನಾ ಭೀತಿ ಎಲ್ಲರಿಗೂ ಅರಿವಾಗಿದ್ದು, ಸರ್ಕಾರ ಮತ್ತು ಜಿಲ್ಲಾ ಡಾಳಿತ ರೂಪಿಸುವ ನಿಯಾಮಾವಳಿಗಳನ್ನು ಖಂ ಡಿತ ಪಾಲಿಸುತ್ತೇವೆ. ಯಾವುದೇ ಹಂತದಲ್ಲಿ ನಿಯ ಮಾವಳಿಗಳು ಉಲ್ಲಂಘನೆಯಾಗದಂತೆ ಗಮನ ಹರಿಸಲಿದ್ದೇವೆ. ಕೊಟ್ಟೂರು ಜನತೆ ಮಾತ್ರ ರಥೋ ತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ. ಪರ ಊರಿನ ಭಕ್ತರನ್ನು ನಿರ್ಬಂಧಗೊಳಿಸಿ, ರಥೋತ್ಸವ ಸಾಗಲು ಇರುವ ಧಾರ್ಮಿಕ ಪರಂಪರೆಗೆ ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸುವೆ ಎಂದರು.

ಜಿ.ಪಂ ಸದಸ್ಯ ಎಂ.ಎಂ.ಜೆ.ಹರ್ಷವರ್ಧನ್ ಮಾತನಾಡಿ, ಜಿಲ್ಲಾಡಳಿತ ಸೂಚಿಸುವ ಮಾರ್ಗದರ್ಶಿ ನಿಯಾಮಾವಳಿಗಳಿಗನುಗುಣವಾಗಿ ಕೊಟ್ಟೂರೇಶ್ವರ ರಥೋತ್ಸವ ಸಾಗಲು ಅವಕಾಶ ಮಾಡಿಕೊಡಬೇಕೆಂದು ಒತ್ತಾಯಿಸಿದರು.

ಕ್ರಿಯಾ ಮೂರ್ತಿ ಶಂಕರ ಸ್ವಾಮೀಜಿ, ಧರ್ಮಕರ್ತ ಸಿ.ಹೆಚ್.ಎಂ.ಗಂಗಾಧರ, ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಎಂ.ಎಚ್.ಪ್ರಕಾಶ್ ರಾವ್, ಕಾರ್ಯನಿರ್ವಾಹಕ ಅಧಿಕಾರಿ ಗಂಗಾಧರ, ಜಿ.ಪಂ ಸದಸ್ಯ ಎಂ.ಎಂ.ಜೆ.ಹರ್ಷವರ್ಧನ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಪಿ.ಭಾರತಿ ಸುಧಾಕರ್ ಪಾಟೀಲ್, ತಾಲ್ಲೂಕು ಪಂಚಾ ಯಿತಿ ಅಧ್ಯಕ್ಷ ಗುರುಮೂರ್ತಿ ಶಾನುಭೋಗರ, ಪಟ್ಟಣ ಪಂಚಾಯಿತಿ ಸದಸ್ಯರಾದ ಮೊರಬದ ಕೊಟ್ರೇಶ್, ಹಳ್ಳಿ ವಿದ್ಯಾಶ್ರೀ, ವಿನಯ್ ಹೊಸಮನಿ, ತಿಪ್ಪೇಸ್ವಾಮಿ ಬೋರ್‍ವೆಲ್, ಜಿ.ಸಿದ್ದಯ್ಯ, ಕೆಂಗರಾಜ್, ಜಗದೀಶ್,ಮಾಜಿ ಸದಸ್ಯ ಮೊರಬದ ನಾಗರಾಜ, ಮುಖಂಡರಾದ ಪಿ.ಎಚ್,ದೊಡ್ಡ ರಾಮಣ್ಣ, ಸುಧಾಕರ್ ಪಾಟೀಲ್, ಸಾವಜ್ಜಿ ರಾಜೇಂದ್ರ ಪ್ರಸಾದ್, ರಾಜೇಶ್ ಕರ್ವಾ ಸರ್ಕಲ್ ಇನ್‍ಸ್ಪೆಕ್ಟರ್ ಹೆಚ್.ದೊಡ್ಡಪ್ಪ, ಸಬ್‍ಇನ್‍ಸ್ಪೆಕ್ಟರ್ ಹೆಚ್.ನಾಗಪ್ಪ, ಪಟ್ಟಣ ಪಂಚಾಯಿತಿ ಮುಖ್ಯಾಧಿ ಕಾರಿ ಟಿ.ಎಸ್.ಗಿರೀಶ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಇದ್ದರು.

error: Content is protected !!