ಮಾತಲ್ಲ, ನಮ್ಮ ಕಾರ್ಯ ಸಾಕ್ಷ್ಯವಾಗಬೇಕು

ನೀಲಗುಂದ ಗುಡ್ಡದ ವಿರಕ್ತ ಮಠದ ಶ್ರೀ ಚನ್ನಬಸವ ಶಿವಯೋಗಿ ಸ್ವಾಮೀಜಿ

ಎಂ.ಪಿ.ಪ್ರಕಾಶ್  ಅವರ  81ನೇ ಜನ್ಮ ದಿನೋತ್ಸವಕ್ಕೆ ಮಹಿಳೆಯರಿಗೆ ಉಡಿ ತುಂಬುವುದು, ಆಹಾರದ ಕಿಟ್,  ಮಾಸ್ಕ್, ಸ್ಯಾನಿಟೈಸರ್ ವಿತರಣೆ

ಹರಪನಹಳ್ಳಿ, ಜು.11- ಕುಂಬಾರ ಹುಳದಂತೆ ರಾಜಕೀಯ ರಂಗದಲ್ಲಿ ಅಪಾರ ಅನುಭವ ಹೊಂದಿದ್ದ ದಿ. ಎಂ.ಪಿ.ಪ್ರಕಾಶ್ ಅವರು ರಾಜಕಾರಣದಲ್ಲಿ ತಳ ಮಟ್ಟದಿಂದ ಬೆಳೆದ ವ್ಯಕ್ತಿಯಾ ಗಿದ್ದು, ಜನರ ಸೇವೆಗಾಗಿ ತಮ್ಮನ್ನು ತಾವು ತೊಡಗಿ ಸಿಕೊಂಡಿದ್ದರು ಎಂದು ನೀಲಗುಂದ ಗುಡ್ಡದ ವಿರಕ್ತ ಮಠದ ಶ್ರೀ ಚನ್ನಬಸವ ಶಿವ ಯೋಗಿ ಸ್ವಾಮೀಜಿ ಶ್ಲ್ಯಾಘಿಸಿದರು.

ಪಟ್ಟಣದ ಎಚ್‍ಪಿಎಸ್ ಕಾಲೇಜು ಆವರಣದಲ್ಲಿ ಮಾಜಿ ಉಪ ಮುಖ್ಯಮಂತ್ರಿ ಎಂ.ಪಿ.ಪ್ರಕಾಶ್  ಅವರ  81ನೇ ಜನ್ಮ ದಿನೋತ್ಸವದ ಅಂಗವಾಗಿ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ಆಹಾರದ ಕಿಟ್ ಮತ್ತು ಮಾಸ್ಕ್, ಸ್ಯಾನಿಟೈಸರ್ ವಿತರಣೆ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಮಾತು ಸಾಕ್ಷ್ಯವಾಗಬಾರದು ನಮ್ಮ ಕಾರ್ಯ ಸಾಕ್ಷ್ಯವಾಗಬೇಕು. ಅಂತಹ ವ್ಯಕ್ತಿಯ ಮೂರು ರತ್ನಗಳಲ್ಲಿ ವೀಣಾ ಮಹಾಂತೇಶ್ ಅವರು ಆಶಾ ಕಿರಣವಾಗಿ ಎಂ.ಪಿ.ಪ್ರಕಾಶ್ ರೀತಿ ಯಲ್ಲಿ ಜನರ ಸೇವೆಯಲ್ಲಿ ತೊಡಗಿ ದ್ದಾರೆ ಎಂದು ಶ್ರೀಗಳು ಹೇಳಿದರು.

ಎಂ.ಪಿ.ಪ್ರಕಾಶ್ ಸಮಾಜಮುಖಿ ಟ್ರಸ್ಟ್ ಅಧ್ಯಕ್ಷರಾದ ಶ್ರೀಮತಿ ಎಂ.ಪಿ.ವೀಣಾ ಮಹಾಂತೇಶ್ ಚರಂತಿಮಠ ಮಾತನಾಡಿ, ದಿ.ಎಂ.ಪಿ.ಪ್ರಕಾಶ್ ಅವರು ಸಜ್ಜನ ರಾಜಕಾರಣಿಯಾಗಿದ್ದರು. 

ಅವರು ರಾಜಕೀಯ ವೃತ್ತಿ ಜೀವನದಲ್ಲಿ ಜನಮಾನಸದಲ್ಲಿ ಉಳಿಯುವಂತಹ ಕೆಲಸಗಳನ್ನು ಮಾಡಿದ್ದಾರೆ. ಕಲ್ಲಿನಲ್ಲಿ ಕೆತ್ತಿದ ಶಾಸನಗಳೇ ಉಳಿದಿಲ್ಲ. ಇನ್ನು ಬ್ಯಾನರ್‍ನಲ್ಲಿ ಎಂ.ಪಿ.ರವೀಂದ್ರ ಅವರ ಹೆಸರು ಹಾಕದಿದ್ದರೆ ತಲೆ ಕೆಡಿಸಿಕೊಳ್ಳಬೇಡಿ. ಅವರು ಮಾಡಿದಂತಹ ಕೆಲಸ ಜನರ ಮನಸ್ಸಿನಲ್ಲಿದೆ ಎಂದರು. 

ಕೆಪಿಸಿಸಿ ವೈದ್ಯಕೀಯ ಘಟಕದ ಅಧ್ಯಕ್ಷ ಶ್ರೀನಿವಾಸ್, ಉಪಾಧ್ಯಕ್ಷ ಮಹಾಂತೇಶ್ ಚರಂತಿಮಠ ಮಾತನಾಡಿ, ರಾಜಕಾರಣದ ಜೊತೆ ಜೊತೆಯಲ್ಲಿ ನಾಟಕ, ಕಲೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ವಿವಿಧ ರಂಗಗಳಲ್ಲಿ ಅವಿಸ್ಮರಣೀಯ ಸೇವೆಯನ್ನು ದಿ.ಎಂ.ಪಿ. ಪ್ರಕಾಶ್ ನೀಡಿದ್ದಾರೆ ಎಂದರು.

ಮಹಿಳಾ ಸಂಘಟನೆಯ ರೇಣುಕಮ್ಮ, ಚಿಗಟೇರಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್, ಪುರಸಭೆ ಮಾಜಿ ಅಧ್ಯಕ್ಷೆ ಕವಿತಾ ವಾಗೀಶ್, ನ್ಯಾಯವಾದಿ ಸಿದ್ದಲಿಂಗ ಗೌಡ, ತಾಲ್ಲೂಕು ಯುವ ಕಾಂಗ್ರೆಸ್ ಉಪಾಧ್ಯಕ್ಷ ದಾದಾಪೀರ್ ಮಕರಬ್ಬಿ, ಮುಖಂಡರಾದ ತಿಮ್ಮಲಾಪುರದ ನಾಗರಾಜ, ಗಾಯತ್ರಮ್ಮ ಸೇರಿದಂತೆ ಇತರರು ಉಪಸ್ಥಿತರಿದ್ದರು.

error: Content is protected !!