ಮನುಷ್ಯ ಹಣದಲ್ಲಿ ಶ್ರೀಮಂತ, ನೆಮ್ಮದಿಯಲ್ಲಿ ಬಡವ

ದಾವಣಗೆರೆ, ಫೆ.25- ಆಧುನಿಕ ಒತ್ತಡದ ಯುಗದಲ್ಲಿ ಮನುಷ್ಯ ಅಧ್ಯಾತ್ಮಿಕ ವಿಚಾರಗಳ ಅರಿವಿಲ್ಲದೆ ದಾರಿ ತಪ್ಪುತ್ತಿದ್ದಾನೆ. ಇದರಿಂದ ಮಾನಸಿಕವಾಗಿ, ದೈಹಿ ಕವಾಗಿ ದುರ್ಬಲಗೊಳ್ಳುತ್ತಿದ್ದಾನೆ ಎಂದು ಸಿವಿಲ್ ಇಂಜಿನಿಯರ್ – ಲೇಖಕ ಹೆಚ್.ವಿ. ಮಂಜುನಾಥ ಸ್ವಾಮಿ ಆತಂಕ ವ್ಯಕ್ತಪಡಿಸಿದರು.

ಭಾವಸಾರ ವಿಜನ್‌ ಇಂಡಿಯಾ ದಾವಣಗೆರೆ ಸಂಸ್ಥೆ ವತಿಯಿಂದ ನಿನ್ನೆ ಏರ್ಪಾಡಾಗಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಶರವೇಗದಲ್ಲಿ ಓಡುತ್ತಿರುವ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ತನ್ನಲ್ಲಿ ಇರುವ ನೆಮ್ಮದಿ, ಸಂತೋಷ, ತೃಪ್ತಿಯ ಬದುಕನ್ನು ಕಳೆದುಕೊಳ್ಳುತ್ತಿದ್ದಾನೆ. ಮನುಷ್ಯನಿಗೆ ಇವತ್ತಿನ ದಿನ ಧ್ಯಾನ, ಯೋಗದಂತಹ ಅಧ್ಯಾತ್ಮಿಕ ಸತ್ಸಂಗಗಳು ಬಹಳ ಅವಶ್ಯಕತೆ ಇದೆ ಎಂದು ಅವರು ತಿಳಿಸಿದರು. 

ತಮ್ಮ ರಚನೆಯ ಕೃತಿ `ಬದುಕು, ಬಯಕೆ, ಭಾವನೆ’ ಯ ಕುರಿತು ಮಾತ ನಾಡಿದ ಮಂಜುನಾಥ ಸ್ವಾಮಿ, ಬದುಕಿನ ಮಾರ್ಮಿಕ ಸತ್ಯದ ಮಾತುಗಳಿಂದ ಮುದುಡಿದ ಮನಸ್ಸುಗಳನ್ನು ಅರಳುವಂತೆ ಮತ್ತು ಸ್ಫೂರ್ತಿದಾಯಕ ಅನೇಕ ವಿಷಯಗಳು ಈ ಕೃತಿಯಲ್ಲಡಗಿವೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಕು. ನಿಖಿತಾ ಹೆಬ್ಬಾರ್‌ ರಚಿಸಿದ `ಏಕ ವ್ಯಕ್ತಿ ಚಿತ್ರ ಪ್ರದರ್ಶನ’ವನ್ನು ಏರ್ಪಡಿಸಲಾಗಿತ್ತು.

ಭಾವಸಾರ ವಿಜನ್‌ ಇಂಡಿಯಾ ದಾವಣಗೆರೆ ಸಂಸ್ಥೆ ಅಧ್ಯಕ್ಷ ವಿಜಯಕುಮಾರ್‌ ಕೆ. ಟಿಕಾರೆ, ಕಾರ್ಯದರ್ಶಿ ನರೇಂದ್ರಕುಮಾರ್‌ ಟಿಕಾರೆ, ವಲಯ ರಾಜ್ಯಪಾಲರಾದ ಅರುಣ ಗುಜ್ಜಾರ್‌, ಡಾ. ಎಂ.ಆರ್‌. ಜಯಪ್ರಕಾಶ್‌, ಮಹೇಶ್‌ ಶೇಂಡಿಗಿ, ವಸಂತ್‌ ಪ್ರಕಾಳೆ, ಶ್ರೀಮತಿ ನಾಗವೇಣಿ, ಡಾ. ಶಿಲ್ಪಾ, ಡಾ. ಹುನ್ಮಿಲಾ, ಡಾ. ಸಂದೀಪ್‌, ಹಿರಾಸ್ಕರ್‌ ಅನಿಲ್‌ ಮಲಾಡ್ಕರ್‌ ಮತ್ತಿತರರು ಉಪಸ್ಥಿತರಿದ್ದರು.

ನಿಂಗೋಜಿ ರಾವ್‌ ಗುಜ್ಜಾರ್‌ ಕಾರ್ಯಕ್ರಮವನ್ನು ನಿರೂಪಿಸಿದರು.

error: Content is protected !!