ಹರಪನಹಳ್ಳಿ: ವಿವಿಧ ಕಾಮಗಾರಿಗಳಿಗೆ ಶಾಸಕ ಕರುಣಾಕರ ರೆಡ್ಡಿ ಚಾಲನೆ

ಹರಪನಹಳ್ಳಿ, ಫೆ.22- ತಾಲ್ಲೂಕಿನ  ವಿವಿಧ ಗ್ರಾಮಗಳ ಸಿ.ಸಿ. ರಸ್ತೆ, ಕುಡಿಯುವ ನೀರಿನ ಓವರ್ ಟ್ಯಾಂಕ್ ಕಾಮಗಾರಿಗಳಿಗೆ ಶಾಸಕ ಕರುಣಾಕರ ರೆಡ್ಡಿ ಚಾಲನೆ ನೀಡಿದರು. ತಾಲ್ಲೂಕಿನ ಕಡತಿ ಕ್ಯಾಂಪಿನ ಎರಡು ಶಾಲಾ ಕೊಠಡಿಗಳನ್ನು ಉದ್ಘಾಟಿಸಿದರು. ನಂತರ ಕಂಡಿಕೇರಿ ತಾಂಡಾದಿಂದ ಕಡತಿ ಗ್ರಾಮಕ್ಕೆ ಸಂಪರ್ಕಿಸುವ ಎಸ್‍ಸಿಪಿ ಯೋಜನೆಯಲ್ಲಿ ಅಂದಾಜು 3 ಕೋಟಿ 77ಲಕ್ಷ ರೂ.ಗಳ ಸಿ.ಸಿ.ರಸ್ತೆ ಕಾಮಗಾರಿಗೆ ಭೂಮಿ ಪೂಜೆ ಮಾಡಲಾಯಿತು. 

ನಂತರ ಟಿಎಸ್‍ಪಿ ಯೋಜನೆಯಲ್ಲಿ ಅಂದಾಜು 2 ಕೋಟಿ 94 ಲಕ್ಷ ರೂ.ಗಳಲ್ಲಿ ತಲುವಾಗಲು ಹಾಗೂ ಗುರುಶಾಂತನಹಳ್ಳಿ ಮತ್ತು ಹರಪನಹಳ್ಳಿ ಸಂಪರ್ಕಿಸುವ ಸಿ.ಸಿ.ರಸ್ತೆ ಕಾಮಗಾರಿಗೆ, ಬಳಿಕ ಅಂದಾಜು 2 ಕೋಟಿ ವೆಚ್ಚದಲ್ಲಿ ಪಿ.ಆರ್.ನಿ.ಕೆ (ಪಿಆರ್‍ಎಎಂಸಿ) ಯೋಜನೆಯಲ್ಲಿ ಮುತ್ತಿಗಿಯಿಂದ ನಿಚ್ಚಾಪುರ ಮಾರ್ಗವಾಗಿ ಹರಪನಹಳ್ಳಿಗೆ ಸಂಪರ್ಕಿಸುವ ಸಿ.ಸಿ.ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ  ಜಿಲ್ಲಾ ಬಿಜೆಪಿ ಎಸ್.ಟಿ. ಘಟಕದ ಕಾರ್ಯದರ್ಶಿ ಆರ್.ಲೊಕೇಶ್, ಲೋಕಪಯೋಗಿ ಇಲಾಖೆ ಎಇಇ ಲಿಂಗಪ್ಪ, ಎಇ ಕುಬೇಂದ್ರನಾಯ್ಕ, ಪ್ರಕಾಶ್‍ನಾಯ್ಕ, ಅಶೋಕ, ನಾಗೇಶ್, ಕುಡಿಯುವ ನೀರಿನ ಎಇಇ ಸಿದ್ದರಾಜು, ಗುತ್ತಿಗೆದಾರರಾದ ರಾಜಪ್ಪ, ಬೋವಿ ಸಂಪತ್ತಕುಮಾರ, ನವೀನಪಾಟೀಲ್,  ಮುಖಂಡರುಗಳಾದ ಕೊಟ್ರೇಶ್ ಎಸ್, ಕಡತಿ ರಮೇಶ್, ತೆಲಿಗಿ ಅಂಜಿನಪ್ಪ, ಮಲ್ಲೇಶನಾಯ್ಕ, ಯು.ಪಿ.ನಾಗರಾಜ, ಸೇರಿದಂತೆ ಇತರರು ಇದ್ದರು.

error: Content is protected !!