ದಾವಣಗೆರೆ, ಫೆ. 22- ನಗರದ ಶ್ರೀ ಭಾವಸಾರ ಕ್ಷತ್ರಿಯ ತರುಣ ಮಂಡಳಿ ವತಿಯಿಂದ ಮಹಾರಾಜ ಪೇಟೆ ವಿಠ್ಠಲ ಮಂದಿರದಲ್ಲಿ ಶ್ರೀ ಶಿವ ಛತ್ರಪತಿ ಶಿವಾಜಿ ಮಹಾರಾಜ ಜಯಂತಿ ಆಚರಿಸಲಾಯಿತು.
ಅಧ್ಯಕ್ಷ ರಘು ಮುಸಳೆ ಮಾತನಾಡಿ, ಮೊಘಲರ ಸಾಮ್ರಾಜ್ಯ ಹಿಮ್ಮೆಟ್ಟಿಸಿ ಯುದ್ಧದ್ಲಲಿ ಗೆದ್ದು ಹಿಂದವಿ ಸ್ವರಾಜ್ಯ ಸ್ಥಾಪನೆ ಮಾಡಿರುವ ಶಿವಾಜಿ ಮಹಾರಾಜ ಇವರ ಇತಿಹಾಸ ಹೇಳುತ್ತದೆ. ಇದು ಕೇವಲ ಒಂದೇ ದಿನಕ್ಕೆ ಆಚರಣೆಯಾಗಬಾರದು. ಇವರ ಆದರ್ಶವನ್ನು ಎಲ್ಲಾ ಯುವಕರು ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು
ದೈವ ಮಂಡಳಿಯ ಗೌರವಾಧ್ಯಕ್ಷ ಡಾ. ಎಂ.ಆರ್. ಜಯಪ್ರಕಾಶ್ ಮಾಳದ್ಕರ್, ಕೋಶಾಧ್ಯಕ್ಷ ವಾಗೀಶ್ ಬಾಬು ಗುಜ್ಜರ್, ಶಂಕರ್ ರಾವ್ ನವಲೆ, ಭಜನಾ ಮಂಡಳಿ ಅಧ್ಯಕ್ಷ ನಿಂಗಸ್ವಾಮಿ ರಾವ್ ಖಮಿತ್ಕರ್, ಹ.ಭ.ಪ ಚಂದ್ರಕಾಂತ ವಾದೋನಿ, ವಿಜಯ ಕುಮಾರ್ ವಾದೋನಿ, ಮಾಲತೇಶ್ ಗುಜ್ಜರ್, ಲಖನ್ ಕುಮಾರ್ ಅಂಬೇಕರ್, ವಿನಯ್ ಜಿಂಗಾಡೆ, ವಿಶ್ವನಾಥ ಪುಟಾಣ್ ಕರ್, ರವಿ ಹೆಬ್ಬಾರೆ, ವಿನಾಯಕ ಟೀಕಾರೆ ಉಪಸ್ಥಿತರಿದ್ದರು.