ಹರಿಹರಕ್ಕೆ ನಾಳೆ ಮುಖ್ಯಮಂತ್ರಿ ಬೊಮ್ಮಾಯಿ 30 ಕೋಟಿ ರೂ.ಗಳ ತುಂಗಾರತಿ ಕಾಮಗಾರಿಗೆ ಚಾಲನೆ

ಮಠ ಆಯೋಜಿಸಿಲ್ಲ

ಈ ಕಾರ್ಯಕ್ರಮವನ್ನು ಶ್ರೀ ಪಂಚಮಸಾಲಿ ಪೀಠದ ಮಠದಿಂದ ಆಯೋಜಿಸಿರುವುದಿಲ್ಲ, ಮಠದ ಶ್ರೀಗಳ ಸಹಕಾರ, ಬಿಜೆಪಿ ಪಕ್ಷ ನೆರಳಾಗಿ ಈ ಕಾರ್ಯ ನಡೆಸಲಾಗುತ್ತದೆ. 

– ಚಂದ್ರಶೇಖರ್ ಪೂಜಾರ್

ಹರಿಹರಕ್ಕೆ ನಾಳೆ ಮುಖ್ಯಮಂತ್ರಿ ಬೊಮ್ಮಾಯಿ 30 ಕೋಟಿ ರೂ.ಗಳ ತುಂಗಾರತಿ ಕಾಮಗಾರಿಗೆ ಚಾಲನೆ - Janathavaniಹರಿಹರ, ಫೆ.18- ನಗರದಲ್ಲಿ ನಾಡಿದ್ದು ದಿನಾಂಕ 20  ರ ಭಾನುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತುಂಗಭದ್ರಾ ನದಿಯ ದಂಡೆಯ ಮೇಲೆ ತುಂಗಾರತಿ ಕಾರ್ಯಕ್ರಮದ ನಿಮಿತ್ತವಾಗಿ 30 ಕೋಟಿ ರೂ. ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಚಂದ್ರಶೇಖರ್ ಪೂಜಾರ್ ತಿಳಿಸಿದ್ದಾರೆ.

ನಗರದ ರಚನಾ ಕ್ರೀಡಾ ಟ್ರಸ್ಟ್ ಸಭಾಂಗಣ ದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶ್ರೀ ಪಂಚಮಸಾಲಿ ಗುರುಪೀಠಾಧ್ಯಕ್ಷ ರಾದ ಶ್ರೀ ವಚನಾನಂದ ಸ್ವಾಮಿಗಳ ಕಲ್ಪನೆ ಉತ್ತರ ಭಾರತದ ಗಂಗಾರತಿ ಆದಂತೆ ಈ ಭಾಗದ ದಕ್ಷಿಣ ಭಾರತದ ತುಂಗಭದ್ರಾ ನದಿಯ ದಂಡೆಯ ಮೇಲೆ ತುಂಗಾರತಿ ಕಾರ್ಯಕ್ರಮದ ಬಗ್ಗೆ  ಶ್ರೀಗಳು ತಮ್ಮ ಕಲ್ಪನೆಯನ್ನು ಮುಖ್ಯಮಂತ್ರಿಗಳ ಬಳಿ ಹಂಚಿಕೊಂಡಿದ್ದಾರೆ. 

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಸ್ಪಂದಿಸುವ ಮೂಲಕ ತುಂಗಭದ್ರಾ ನದಿ ದಂಡೆಯ ಮೇಲೆ ತುಂಗಾರತಿ ಕಾರ್ಯಕ್ಕೆ ಸಂಬಂಧಿಸಿದಂತೆ 30 ಕೋಟಿ ಹಣವನ್ನು ನೀರಾವರಿ ಇಲಾಖೆಯ ವತಿಯಿಂದ ಬಿಡುಗಡೆ ಮಾಡಿ ಟೆಂಡರ್ ಕೂಡ ಮಾಡಲಾಗಿದೆ. ಅದರಲ್ಲಿ ಮೊದಲ ಹಂತದಲ್ಲಿ ಹತ್ತು ಕೋಟಿ ಬಿಡುಗಡೆ ಮಾಡಿದ್ದು ಇದರ ಕಾಮಗಾರಿಗೆ ಚಾಲನೆ ನೀಡುವುದಕ್ಕೆ ಮುಖ್ಯಮಂತ್ರಿಗಳು ಆಗಮಿಸಲಿದ್ದಾರೆ.

ನಗರದ ರಾಘವೇಂದ್ರ ಸ್ವಾಮಿ ಮಠದ ಹಿಂಬದಿಯ ಆವರಣದಲ್ಲಿ ವಿವಿಧ ಕಟ್ಟಡಗಳ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ.  ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ್ ಭೈರತಿ, ಸಚಿವರಾದ ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ಸಂಸದರಾದ ಜಿ.ಎಂ. ಸಿದ್ದೇಶ್ವರ್, ಶಾಸಕ ಎಸ್. ರಾಮಪ್ಪ, ಮಾಜಿ ಶಾಸಕ ಬಿ.ಪಿ. ಹರೀಶ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಎಂ.  ವೀರೇಶ್ ಹನಗವಾಡಿ, ಸಿರಿಗೆರೆ ನಾಗನಗೌಡ್ರು ಸೇರಿದಂತೆ ಇತರೆ ಮುಖಂಡರು ಆಗಮಿಸಲಿದ್ದಾರೆ. 

ಈ ಸಂದರ್ಭದಲ್ಲಿ ನಗರಸಭೆ ಸದಸ್ಯ ರಜನಿಕಾಂತ್, ಹೆಚ್.ಎಸ್. ರಾಘವೇಂದ್ರ, ಪಾಟೀಲ್ ಚಂದ್ರು, ನಿರಂಜನ್ ಪಾಟೀಲ್, ರಾಘವೇಂದ್ರ ಕೊಂಡಜ್ಜಿ ಇತರರು ಹಾಜರಿದ್ದರು. 

ವೀರೇಶ್ ಹನಗವಾಡಿ ಸ್ಪಷ್ಟನೆ : ನಗರದಲ್ಲಿ 20 ರಂದು ನಡೆಯುವ ತುಂಗಾರತಿ ಕಾರ್ಯಕ್ರಮದ ಬಗ್ಗೆ ನಮಗೆ ಅಧಿಕೃತವಾಗಿ ಬಿಜೆಪಿ ರಾಜ್ಯ ಘಟಕದಿಂದ ಯಾವುದೇ ರೀತಿಯ ಆದೇಶವನ್ನು ಪಕ್ಷವು ನೀಡಿರುವುದಿಲ್ಲ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಸ್.ಎಂ‌ ವೀರೇಶ್ ಹನಗವಾಡಿ `ಜನತಾವಾಣಿ’ಗೆ ತಿಳಿಸಿದರು. 

ಚಂದ್ರಶೇಖರ್ ಪೂಜಾರ್ ಅವರಿಗೆ ಪಕ್ಷದಲ್ಲಿ ಯಾವ ಜವಾಬ್ದಾರಿ ಇದೆ? ಪಕ್ಷದಲ್ಲಿ ಏನಾಗಿದ್ದಾರೆ? ಎಂದು ಪ್ರಶ್ನಿಸಿರುವ  ವೀರೇಶ್ ಹನಗವಾಡಿ, ಕೆಲವರು ಅನಾವಶ್ಯಕವಾಗಿ ಪಕ್ಷದಲ್ಲಿ ಗೊಂದಲ ಸೃಷ್ಟಿ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

error: Content is protected !!