ಚನ್ನಗಿರಿ ರಂಗಪ್ಪ ಟ್ರಸ್ಟ್ ಕಟ್ಟಡದಲ್ಲಿ `ವೈದಿಕ ಭವನ’ ಪ್ರಾರಂಭ

ದಾವಣಗೆರೆ, ಫೆ.6- ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನ ಪಬ್ಲಿಕ್ ರಿಲೀಜಿಯಸ್ ಟ್ರಸ್ಟ್‍ನಿಂದ ನಗರದ ಎಸ್.ಕೆ.ಪಿ. ರಸ್ತೆಯ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಎದುರಿಗಿರುವ ಚನ್ನಗಿರಿ ರಂಗಪ್ಪ ಟ್ರಸ್ಟ್ ಕಟ್ಟಡದಲ್ಲಿ ಭಾನುವಾರ ಪೂಜಾ ವಿಧಿ-ವಿಧಾನಗಳೊಂದಿಗೆ ವೈದಿಕ ಭವನಕ್ಕೆ ಚಾಲನೆ ನೀಡಲಾಯಿತು.

ಗಾಂಧಿನಗರ ಪೊಲೀಸ್  ಠಾಣೆ ಪಿಎಸ್‍ಐ ಶ್ರೀಮತಿ ಹೆಚ್.ಪ್ರಮೀಳಮ್ಮ , ಆರ್ಯವೈಶ್ಯ ಸಮಾಜದ ಹಿರಿಯ ಮುಖಂಡರು ಹಾಗೂ ಬೆಸ್ಟ್ ಲೂಬ್ರಿಕೆಂಟ್ಸ್ ಮಾಲೀಕರಾದ ಬಿ.ವಿ.ಗಂಗಪ್ಪ ಶ್ರೇಷ್ಠಿ ಇವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.

 ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನ ಟ್ರಸ್ಟ್‍ನ ಅಧ್ಯಕ್ಷ ಸಿ.ಪಿ. ಸತೀಶ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ಟ್ರಸ್ಟ್‍ನ ಉಪಾಧ್ಯಕ್ಷ ಜೆ.ವಿ. ಗೋಪಾಲಕೃಷ್ಣ ಮಾತನಾಡಿ, ಶ್ರೀ ಚನ್ನಗಿರಿ ವಿರೂಪಾಕ್ಷಪ್ಪ ಟ್ರಸ್ಟ್‍ನ ಅಧ್ಯಕ್ಷರಾದ ವಿರೂಪಾಕ್ಷಪ್ಪನವರು ವೈದಿಕ ಭವನಕ್ಕೆ ಜಾಗ ಕೊಟ್ಟಿದ್ದರಿಂದ ನಮ್ಮ ಸಮಾಜಕ್ಕೆ ಅನುಕೂಲವಾಗಿದೆ ಎಂದರು.

 ಈ ಸಂದರ್ಭದಲ್ಲಿ ಟ್ರಸ್ಟ್‍ನ ಕಾರ್ಯದರ್ಶಿ ರಾಜೇಂದ್ರಕುಮಾರ್, ಖಜಾಂಚಿ ಎ.ಎಸ್. ರಘುನಾಥ್, ಜಂಟಿ ಕಾರ್ಯದರ್ಶಿ ಹಾಗೂ ವೈದಿಕ ಭವನದ ಆಡಳಿತಾಧಿಕಾರಿ ಎಸ್.ಆರ್. ಹುಚ್ಚುರಾಯಪ್ಪ ಶೆಟ್ಟಿ, ಟ್ರಸ್ಟಿಗಳಾದ ಸಿ.ಪಿ. ಶೇಷಾದ್ರಿ ಪ್ರಸಾದ್, ರಟ್ಟಿಹಳ್ಳಿ ಸತೀಶ್‍ಕುಮಾರ್, ಸಮಾಜದ ಮುಖಂಡರುಗಳಾದ ಕೃಷ್ಣಮೂರ್ತಿ, ಗೋಪಾಲಕೃಷ್ಣ, ಸಿ.ಕೆ.ಪ್ರಶಾಂತ್, ಚನ್ನಗಿರಿ ಭರತ್, ಚನ್ನಗಿರಿ ಶರತ್, ಆದಿತ್ಯ, ವ್ಯವಸ್ಥಾಪಕ ಹೆಚ್.ಎಲ್. ವೆಂಕಟೇಶ್ ಉಪಸ್ಥಿತರಿದ್ದರು.

error: Content is protected !!