ವಿದ್ಯುತ್ ಸರಬರಾಜು ಹೊರಗುತ್ತಿಗೆ ನೌಕರರ ಪ್ರತಿಭಟನೆಗೆ ಬೆಂಬಲ

ದಾವಣಗೆರೆ, ಫೆ.6- ಛತ್ತೀಸಘಡದಲ್ಲಿ ವಿದ್ಯುತ್ ಸರಬರಾಜು ಹೊರಗುತ್ತಿಗೆ ನೌಕರರ ಪ್ರತಿಭಟನೆಯನ್ನು ಬೆಂಬಲಿಸಿ ಅಖಿಲ ಭಾರತ ಪ್ರತಿಭಟನಾ ದಿನದ ಅಂಗವಾಗಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ಜಿಲ್ಲಾ ಸಮಿತಿಯಿಂದ ಸಮಿತಿಯ ಕಚೇರಿಯಲ್ಲಿ ಪ್ರತಿಭಟನೆ ನಡೆಸಿ ಪ್ರಧಾನ ಮಂತ್ರಿಗಳಿಗೆ ಜಿಲ್ಲಾ ಮುಖ್ಯ ಎಂಜಿನಿಯರ್ ಕೆಪಿಟಿಸಿಎಲ್ ಇವರ ಮೂಲಕ ಮನವಿ ಸಲ್ಲಿಸಲಾಯಿತು.

ಛತ್ತೀಸಗಡದಲ್ಲಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ ಹಾಗೂ ಆಲ್ ಇಂಡಿಯಾ ಪವರ್‍ಮೆನ್ಸ್ ಫೆಡರೇಷನ್ ಸಂಯುಕ್ತಾಶ್ರಯದಲ್ಲಿ ವಿದ್ಯುತ್ ಸರಬರಾಜು ಹೊರಗುತ್ತಿಗೆ ನೌಕರರು ಇಡೀ ರಾಜ್ಯವ್ಯಾಪಿ ಬಹುದಿನಗಳ ಬೇಡಿಕೆಗಳಾದ ವಿದ್ಯುತ್ ಖಾಸಗೀಕರಣ ವಿರೋಧಿಸಿ, ಹೊರಗುತ್ತಿಗೆ ನೌಕರರ ಉದ್ಯೋಗದ ಖಾಯಮ್ಮಾತಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೂ ಇಂತಹ ಪ್ರತಿಭಟನೆಗಳನ್ನು ಲೆಕ್ಕಿಸದ ಕೇಂದ್ರ ಸರ್ಕಾರವು ಇಂದಿನ ಕೇಂದ್ರ ಬಜೆಟ್ ನಲ್ಲಿ ಪುನಃ ವಿದ್ಯುತ್ ಖಾಸಗೀಕರಣಕ್ಕೆ ಮುನ್ನುಡಿ ಬರೆದಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.      

ಈ ನಿಯೋಗದಲ್ಲಿ ಜಿಲ್ಲಾ ಅಧ್ಯಕ್ಷ ಮಂಜುನಾಥ್ ಕೈದಾಳೆ, ಜಿಲ್ಲಾ ಉಪಾಧ್ಯಕ್ಷರುಗಳಾದ ತಿಪ್ಪೇಸ್ವಾಮಿ ಅಣಬೇರು, ಶಿವಾಜಿರಾವ್, ಕಾರ್ಮಿಕರಾದ ಪ್ರಭು ಮಾಯಕೊಂಡ, ಪರಶುರಾಮಪ್ಪ ಬಾವಿಹಾಳ್, ರಾಜು, ಲಕ್ಷ್ಮಣಪ್ಪ, ಚಂದ್ರು, ಪ್ರಕಾಶ್ ಇದ್ದರು.

error: Content is protected !!