ದಾವಣಗೆರೆ, ಜ.24- ನಗರಪಾಲಿಕೆ 25ನೇ ವಾರ್ಡಿನಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯಡಿಯಲ್ಲಿ 1 ಕೋಟಿ 70 ಲಕ್ಷ ರೂ.ಗಳ ಕಾಮಗಾರಿಗಳಿಗೆ ಸಂಸದ ಜಿ.ಎಂ. ಸಿದ್ದೇಶ್ವರ, ಶಾಸಕ ಎಸ್.ಎ. ರವೀಂದ್ರನಾಥ್, 30 ನೇ ವಾರ್ಡಿನ ಪಾಲಿಕೆ ಸದಸ್ಯರೂ, ಪೂಜ್ಯ ಮಹಾಪೌರರಾದ ಎಸ್.ಟಿ. ವೀರೇಶ್ ಅವರುಗಳು ಭೂಮಿ ಪೂಜೆ ನೆರವೇರಿಸುವುದರ ಮೂಲಕ ಕಾಮಗಾರಿಗಳಿಗೆ ಚಾಲನೆ ನೀಡಿದರು.
ಉಪಮಹಾಪೌರರಾದ ಶ್ರೀಮತಿ ಶಿಲ್ಪ ಜಯಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಎಲ್.ಡಿ. ಗೋಣೆಪ್ಪ, ಉಮಾ ಪ್ರಕಾಶ್, ಗೀತಾ ದಿಳ್ಯೆಪ್ಪ, ರೇಣುಕಾ ಶ್ರೀನಿವಾಸ್, ಪಾಲಿಕೆ ಸದಸ್ಯರಾದ ಯಶೋಧ ಹೆಗ್ಗಪ್ಪ, ದೂಡಾ ಅಧ್ಯಕ್ಷ ದೇವರಮನೆ ಶಿವಕುಮಾರ್, ಪಾಲಿಕೆ ಆಯುಕ್ತ ವಿಶ್ವನಾಥ್ ಪಿ. ಮುದಜ್ಜಿ, ಕಾರ್ಯಪಾಲಕ ಅಭಿಯಂತರ ಮನೋಹರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಸಚಿನ್, ಸತೀಶ್ ನಾಯ್ಕ್, ಮತ್ತಿತರರು ಉಪಸ್ಥಿತರಿದ್ದರು.
ವಾರ್ಡಿನ ನಾಗರಿಕ ಹಿತರಕ್ಷಣಾ ಸಮಿತಿ ಅಧ್ಯಕ್ಷ ತಿರುಮಲೆ, ವಾಮದೇವಪ್ಪ, ನಾಗರಾಜ್, ಗೋವಿಂದ ರೆಡ್ಡಿ, ಸಾಂಬೋಜಿ, ರಾಜು ಹುಲಿಕಟ್ಟೆ, ಶಿವನಪ್ಪ, ಶಾರದಮ್ಮ, ವೀರಭದ್ರಪ್ಪ ಅಕ್ಕಿ, ಬಸವರಾಜ ಅಂಗಡಿ, ಚನ್ನವೀರ ಶೆಟ್ರು, ರಘು ಸೈನ್ಸ್, ದಿವಾಕರ್, ಚಂದ್ರಪ್ಪ, ಬಸವರಾಜ, ಮಂಜುನಾಥ, ಸುಮಾ, ದೊಡ್ಡಮ್ಮ, ಪದ್ಮಪ್ರಿಯ ಮತ್ತು ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.