ಅಕ್ಷರ ಅಲಂಕಾರಕ್ಕೆ ಚಿತ್ರಕಲೆ ಭದ್ರವಾದ ಬುನಾದಿ

`ನಾ ಕಂಡಂತೆ ಬಸವಣ್ಣ’ ಚಿತ್ರ ಬರೆಯುವ ಸ್ಪರ್ಧೆ ಸಮಾರಂಭದಲ್ಲಿ ಶ್ರೀ ಬಸವಪ್ರಭು ಸ್ವಾಮೀಜಿ

ದಾವಣಗೆರೆ, ಮೇ 5- ಚಿತ್ರ ಬರೆಯುವ ಹವ್ಯಾಸವನ್ನು ಮಕ್ಕಳು ಬಾಲ್ಯದಿಂದಲೇ ರೂಢಿಸಿಕೊಂಡರೆ ಅಕ್ಷರ ಅಲಂಕಾರಕ್ಕೆ ಭದ್ರವಾದ ಬುನಾದಿಯಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸದ ಹಂತದಲ್ಲೇ ಚಿತ್ರಕಲೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ  ನುಡಿದರು.

ಶ್ರೀ ಜಗದ್ಗುರು ಮುರುಘರಾಜೇಂದ್ರ ವಿರಕ್ತ ಮಠ ಹಾಗೂ   ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ  ಸಂಯುಕ್ತಾಶ್ರಯದಲ್ಲಿ 110ನೇ ವರ್ಷದ ಶ್ರೀ ಬಸವ ಜಯಂತ್ಯೋತ್ಸವದ ಅಂಗವಾಗಿ ನಗರದ  ಶ್ರೀ  ಶಿವಯೋಗ ಮಂದಿರದ ಒಳಾಂಗಣದಲ್ಲಿ ಮೊನ್ನೆ ಹಮ್ಮಿಕೊಳ್ಳಲಾಗಿದ್ದ `ನಾ ಕಂಡಂತೆ ಬಸವಣ್ಣ’ ಚಿತ್ರ ಬರೆಯುವ ಸ್ಪರ್ಧೆಯ ಉದ್ಘಾ ಟನಾ ಸಮಾರಂಭದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.  ಚಿತ್ರ ಬರೆಯುವ ಮೂಲಕ ಉದ್ಘಾಟನೆ ಮಾಡಿದ ಹಿರಿಯ ಚಿತ್ರ ಕಲಾವಿದ ಎ.ಮಹಾಲಿಂಗಪ್ಪ  ಮಾತನಾಡಿ, ಜೀವನದಲ್ಲಿ ವಿವಿಧ ಹಂತಗಳಲ್ಲಿ ಏನನ್ನಾದರೂ ಸಾಧನೆ ಮಾಡಬೇಕೆಂದರೆ ಅದು ಚಿಕ್ಕ ವಯಸ್ಸಿ ನಿಂದಲೇ ಶತಪ್ರಯತ್ನ ಮಾಡಬೇಕು ಎಂದರು.

ಕಲಾಕುಂಚದ ಸಂಸ್ಥಾಪಕ ಸಾಲಿಗ್ರಾಮ ಗಣೇಶ್ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿ, ವ್ಯಕ್ತಿಗಳ ವ್ಯಕ್ತಿತ್ವದ ವಿಕಸನಕ್ಕೆ ಸಾಂಸ್ಕೃತಿಕ, ಕಲಾ ಪ್ರಕಾರಗಳ ಚಟುವಟಿಕೆಗಳು ಜೀವನದ ಉತ್ಸಾಹಕ್ಕೆ ಸ್ಫೂರ್ತಿಯಾಗುತ್ತವೆ ಎಂದು ಹೇಳಿದರು.

ಕಲಾಕುಂಚದ ಅಧ್ಯಕ್ಷ ಕೆ.ಹೆಚ್.ಮಂಜುನಾಥ್, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಶ್ರೀಮತಿ ಜ್ಯೋತಿ ಗಣೇಶ್‍ಶೆಣೈ, ಗೌರವ ಅಧ್ಯಕ್ಷರಾದ ಶ್ರೀಮತಿ ವಸಂತಿ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಬಿ.ಜಿ.ಲೋಕೇಶ್, ಸಂಚಾಲಕ ಬೇಳೂರು ಸಂತೋ ಷ್‍ಕುಮಾರ್ ಶೆಟ್ಟಿ, ಚನ್ನಬಸವ ಶೀಲವಂತ್ ಮುಂತಾದವರು ಉಪಸ್ಥಿತರಿದ್ದರು. ಬಾಲಪ್ರತಿಭೆ ಕು. ನಿಹಾರಿಕಾ ಪ್ರಾರ್ಥನೆ ಮಾಡಿದರು.

ಫಲಿತಾಂಶ: ವಯಸ್ಸಿಗೆ ಅನುಗುಣವಾಗಿ ಮೂರು ವಿಭಾಗಗಳಾಗಿ ವಿಂಗಡಿಸಿದ್ದು, ಪ್ರಾಥಮಿಕ ವಿಭಾಗ ಪ್ರಥಮ ಬಹುಮಾನ ಆದ್ಯಾ ಬಿ.ಎಸ್., ದ್ವಿತೀಯ ನಿಹಾರಿಕಾ ಹೆಚ್.ಎನ್., ತೃತೀಯ ನಮ್ರತಾ ಎಂ.ಎಂ. ಸಮಾಧಾನಕರ ಬಹುಮಾನ ಸಮರ್ಥ ಎನ್.ಆರ್., ಪ್ರೌಢ ವಿಭಾಗ ಪ್ರಥಮ ಮಾಲತೇಶ ಜಿ.ಟಿ. ದ್ವಿತೀಯ, ಮೇಘರಾಜ ಕೆ.ಎಸ್. ತೃತೀಯ, ಕಿರಣ್‌ ಯಾದವ್ ಎನ್.ವಿ. ಸಮಾಧಾನಕರ ಬಹುಮಾನ ಅಪೂರ್ವ ವಿ., ಪ್ರೇರಣಾ ಎಂ.ಎನ್. ಕಾರ್ತಿಕ್ ಬಿ.ಎರೇಸೀಮೆ, ಪವನ್ ಎನ್.ವೈ.

ಹಿರಿಯ ವಿಭಾಗ ಪ್ರಥಮ ನವೀನ್ ಹೆಚ್.ಎಂ., ದ್ವಿತೀಯ ಮುರಳೀಕೃಷ್ಣ  ತೃತೀಯ ಶಿವಾ ನಂದಪ್ಪ ಮುರಿಗೆಪ್ಪ ಸಮಾಧಾನಕರ ಬಹುಮಾನ ಚೇತನ್ ಎಸ್.ಜಿ., ಜೆ.ಶೋಭಾ ಪಡೆದರು.

error: Content is protected !!