ದಾವಣಗೆರೆ,ಮಾ.4- ನಗರದ ಚಿರಂತನ ಸಾಂಸ್ಕೃತಿಕ ಸಂಸ್ಥೆಯು ದೆಹ ಲಿಯ ಗುರುಗಾಂವ್ನಲ್ಲಿ ಯುಗಾದಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು, ಹಲವಾರು ನೃತ್ಯಗಳನ್ನು ಪ್ರಸ್ತುತಪಡಿಸಿ ಪ್ರೇಕ್ಷಕರ ಮನಸೂರೆಗೊಂಡಿತು. ವೈವಿ ಧ್ಯಮಯ ನೃತ್ಯಗಳನ್ನು ಪ್ರದರ್ಶಿಸುವ ಮುಖಾಂ ತರ ದಾವಣಗೆರೆಯ ಹೆಸರನ್ನು ದೆಹಲಿ ಯಲ್ಲಿ ಪ್ರತಿಧ್ವನಿಸುವಂತೆ ಮಾಡಿತು.
ಭರತನಾಟ್ಯ ಶಾಸ್ತ್ರೀಯ ಶೈಲಿಯಲ್ಲಿ ಪುಷ್ಪಾಂಜಲಿ ನೃತ್ಯದೊಂದಿಗೆ ಆರಂಭಿಸಿದ ಚಿರಂತನ, ನಂತರ ಡಿವಿಜಿ ಅವರ ಅಂತಃಪುರ ಗೀತೆಗಳಲ್ಲಿ ಒಂದಾದ ನಟನವಾಡಿದಳ್ ಗೀತೆಗೆ ಲಘು ಶಾಸ್ತ್ರೀಯ ಶೈಲಿಯಲ್ಲಿ ನೃತ್ಯವನ್ನು ಅಳವಡಿಸಿ ಪ್ರಸ್ತುತಪಡಿಸಿತು. ನಂತರ ರಾಷ್ಟ್ರಕವಿ ಕುವೆಂಪುರವರ ಆನಂದಮಯ ಈ ಜಗಹೃದಯ ಎಂಬ ಗೀತೆಗೆ ಲಘು ಶಾಸ್ತ್ರೀಯ ಶೈಲಿ ಯಲ್ಲಿ ನೃತ್ಯವನ್ನು ಪ್ರಸ್ತುತಪಡಿಸಿತು.
ಶಾಸ್ತ್ರೀಯ, ಲಘು ಶಾಸ್ತ್ರೀಯವ ಲ್ಲದೇ ಚಿರಂತನ ಹಳ್ಳಿಯ ಸೊಬಗನ್ನು ಚಿತ್ರಿಸುವಂತಹ ಜಾನಪದ ಶೈಲಿಯ ನೃತ್ಯಗಳನ್ನೂ ಪ್ರಸ್ತುತಪ ಡಿಸಿತು. ಅದ ರಲ್ಲಿ ಜೋಗತಿ ನೃತ್ಯವನ್ನು ಚಿರಂತನದ ಕಲಾವಿದೆಯರು ಬಹು ಸುಂದರವಾಗಿ ಪ್ರಸ್ತುತಪಡಿಸಿದರು. ಈ ನೃತ್ಯದಲ್ಲಿ ಕಲಾವಿದೆ ಅಲಂಕೃತಗೊಂಡ ದೇವಿಯ ಮೂರ್ತಿಯನ್ನು ಹೊತ್ತು ಕೊಂಡು ವೇದಿಕೆಗೆ ಬರುವಾಗ ಕನ್ನಡಿಗ ಪ್ರೇಕ್ಷಕರ ಕರತಾಡನ ಮುಗಿಲು ಮುಟ್ಟಿತ್ತು. ಇದ ರಂತೆಯೇ ಹಳ್ಳಿಯ ಸೊಬಗನ್ನು ಬಿಂಬಿ ಸುವ ನೃತ್ಯಕೂಡ ಪ್ರೇಕ್ಷಕರ ಮನಸೂರೆ ಗೊಂಡಿತು. ಸುಮಾರು ಒಂದೂವರೆ ಗಂಟೆಗಳ ಕಾಲ ಸತತವಾಗಿ ವಿಭಿನ್ನ ಶೈಲಿಗಳಲ್ಲಿ ನೃತ್ಯಗಳನ್ನು ಪ್ರಸ್ತುತಪಡಿಸಿ ಪ್ರೇಕ್ಷಕರನ್ನು ಮನರಂಜಿಸಿ, ಅವರ ಪ್ರಶಂಸೆ ಗಳಿಸಿದ್ದು ವಿಶೇಷವಾಗಿತ್ತು. ಚಿರಂತನ ಸಂಸ್ಥೆಯ ಮುಖ್ಯಸ್ಥೆ ಶ್ರೀಮತಿ ದೀಪ ಅವರನ್ನು ಗುರುಗಾಂವ್ ಕನ್ನಡ ಸಂಘದಿಂದದ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ಡೆಪ್ಯೂಟಿ ಕಮೀಷನರ್ ಆಫ್ ಪೊಲೀಸ್ ಆಂಟಿ ಕರೆಪ್ಷನ್ ಬಿ. ಎಲ್. ಸುರೇಶ್, ಅಲ್ಲದೆ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷ ನಾಗರಾಜ್, ಗುರುಗಾಂವ್ ಕನ್ನಡ ಸಂಘದ ಅಧ್ಯಕ್ಷ ಶಾಂತಕುಮಾರ್ ನಿಂಬಾಳ್ ಹಾಗೂ ಕಾರ್ಯದರ್ಶಿ ಸಂತೋಷ್ ಉಪಸ್ಥಿತರಿದ್ದರು.