3 .7 ಕೋಟಿ ರೂ. ಲಾಭ ಗಳಿಸಿದ ಹರಿಹರ ತುಂಗಭದ್ರಾ ಕ್ರೆಡಿಟ್ ಕೋ-ಆಪ್ ಸೊಸೈಟಿ

3 .7 ಕೋಟಿ ರೂ. ಲಾಭ ಗಳಿಸಿದ ಹರಿಹರ ತುಂಗಭದ್ರಾ ಕ್ರೆಡಿಟ್ ಕೋ-ಆಪ್ ಸೊಸೈಟಿ - Janathavaniಅಧ್ಯಕ್ಷ ಡಿ.ಹೇಮಂತ್‌ರಾಜ್ ಸಂತಸ

ಹರಿಹರ, ಏ.4- ನಗರದ ತುಂಗಭದ್ರಾ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯು 2021-22ನೇ ಸಾಲಿನಲ್ಲಿ 3ಕೋಟಿ 70ಲಕ್ಷ ರೂ ಲಾಭ ಗಳಿಸಿದೆ ಎಂದು ಸಂಘದ ಆಡಳಿತ ಮಂಡಳಿ ಅಧ್ಯಕ್ಷ ಡಿ.ಹೇಮಂತ್‌ರಾಜ್ ಸಂತಸ ವ್ಯಕ್ತಪಡಿಸಿದ್ದಾರೆ. 

ಸೊಸೈಟಿಯ ಸಭಾಂಗಣದಲ್ಲಿ ನಡೆದ ಆಡಳಿತ ಮಂಡಳಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಷೇರು ಬಂಡವಾಳ 3.5 ಕೋಟಿ ರೂ.ಗಳು, ಕಾಯ್ದಿಟ್ಟ ನಿಧಿ 16.71 ಕೋಟಿ ರೂ.ಗಳು, ಠೇವಣಿಗಳು 54.42 ಕೋಟಿ ರೂ.ಗಳು, ಕೊಟ್ಟಿರುವ ಸಾಲಗಳು 68.47 ಕೋಟಿ ರೂ.ಗಳು ಎಂದು ಅಂಕಿ- ಅಂಶಗಳನ್ನು ವಿವರಿಸಿದರು. ಜಿಲ್ಲಾ ಮಟ್ಟದಲ್ಲಿ, ಸಹಕಾರ ಸಂಘದಲ್ಲಿ ಉತ್ತಮ ಸ್ಥಾನ ಗಳಿಸಲು  ಸಂಘದ ಠೇವಣಿದಾರರು, ಗ್ರಾಹಕರು, ಸರ್ವ ಸದಸ್ಯರು, ಆಡಳಿತ ಮಂಡಳಿಯ ಸಹಕಾರ ದೊಂದಿಗೆ, ಸಿಬ್ಬಂದಿ ವರ್ಗದ ಶ್ರಮ ಕಾರಣವಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಸಂಸ್ಥಾಪಕ ಅಧ್ಯಕ್ಷ ಎಂ.ಶಿವಾನಂದಪ್ಪ, ಉಪಾಧ್ಯಕ್ಷ ಆರ್‌.ಕೆ.ಮಂಜುನಾಥ್, ನಿರ್ದೇಶಕರಾದ
ಜಿ.ಎಸ್.ಚನ್ನಬಸಪ್ಪ, ಸೈಯದ್ ಇಫ್ತಿಖಾರ್ ಅಹ್ಮದ್, ಬಿ. ಮಂಜಪ್ಪ, ಪಿ. ಶಿವಣ್ಣ, ಎಂ.ಹನು ಮಂತಪ್ಪ, ಪ್ರಕಾಶ್ ದಿವಟೆ, ಕೆ.ಬಿ.ಮಂಜುನಾಥ್, ಸಂಜಯ್ ಮಂಜುನಾಥ್, ಎಲ್.ಪಿ. ಮಮತಾ ಮತ್ತು ಎ.ಬಿ.ಗಂಗಮ್ಮ ಹಾಗೂ ವಿಶೇಷ ಆಹ್ವಾನಿತರಾದ ರುದ್ರೇಶ್.ಕೆ.ವಿ ಮತ್ತು ಶಿವಪ್ರಕಾಶ್ ಶಾಸ್ತ್ರಿ, ಸಂಘದ ಕಾರ್ಯದರ್ಶಿ ಬಿ.ಜಿ.ಶರತ್ ಉಪಸ್ಥಿತರಿದ್ದರು.

error: Content is protected !!