ಯೋಗ ಒಂದು ತಪಸ್ಸು, ಅದರಿಂದ ಆತ್ಮಬಲ ವೃದ್ಧಿ

ಯೋಗ ಒಂದು ತಪಸ್ಸು, ಅದರಿಂದ ಆತ್ಮಬಲ ವೃದ್ಧಿ

ದಾವಣಗೆರೆ, ಮಾ. 27 – ಯೋಗ ಬಲದಿಂದ ಆತ್ಮಬಲ ಹೆಚ್ಚಾಗುತ್ತದೆ. ಆತ್ಮ ಬಲದಿಂದ ಸಂಕಷ್ಟಗಳು ನಿವಾರಣೆಯಾಗು ತ್ತವೆ. ಯೋಗದ ನಿರಂತರ ಅಭ್ಯಾಸದಿಂದ ಉತ್ತಮ ಆರೋಗ್ಯದ ಜೊತೆಗೆ ಅಧ್ಯಾತ್ಮದ ಅನುಭವವಾಗುತ್ತದೆ ಎಂದು ಪತಂಜಲಿ ಯೋಗ ಸಂಸ್ಥೆಯ ಕರ್ನಾಟಕ ರಾಜ್ಯ ಪ್ರಭಾರಿ ಭವರ್‌ಲಾಲ್ ಆರ್ಯ ಹೇಳಿದರು.

ಸ್ಥಳೀಯ ಶಿವಕುಮಾರ ಸ್ವಾಮಿ ಬಡಾವಣೆಯ ಸಂಜೀವಿನಿ ಆಂಜನೇಯ ಸ್ವಾಮಿ ದೇಗುಲದ ಆವರಣದಲ್ಲಿ  ಪತಂಜಲಿ ಯೋಗ ಸಮಿತಿಯ ವತಿಯಿಂದ ಇಂದು ಹಮ್ಮಿಕೊಳ್ಳಲಾಗಿದ್ದ ಸಹಯೋಗ ಶಿಕ್ಷಕರ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕರ್ನಾಟಕವನ್ನು ಯೋಗ ಮಯವನ್ನು ಮಾಡುವುದು ಬಾಬಾ ರಾಮ್‌ದೇವ್ ಗುರೂಜಿ ಆಶಯವಾಗಿದ್ದು, ರಾಜ್ಯದಲ್ಲಿ 1500 ಯೋಗ ಕೇಂದ್ರಗಳನ್ನು ಪ್ರಾರಂಭ ಮಾಡಲಾಗಿದೆ. ಇಡೀ ದಾವಣಗೆರೆಯನ್ನು ಯೋಗಮಯವಾಗಿ ಮಾಡುವುದು ನನ್ನ ಆಶಯವಾಗಿದೆ. ಯೋಗ ಶಿಕ್ಷಕರ ತರಬೇತಿಯನ್ನು ನಗರದಿಂದ ಆರಂಭ ಮಾಡಲಾಗಿದ್ದು, ಸುಮಾರು 167 ಜನ ಯೋಗ ಶಿಕ್ಷಕರನ್ನು ತಯಾರು ಮಾಡಲಾಗಿದೆ ಎಂದರು.

ಯೋಗ ಎನ್ನುವುದು ಒಂದು ತಪಸ್ಸು. ಇದರಲ್ಲಿ ಯಾವುದೇ ಜಾತಿ, ಧರ್ಮಗಳು ಇಲ್ಲ. ಯೋಗವನ್ನು ಎಲ್ಲರೂ ಕಲಿಯಬಹು ದಾಗಿದೆ. ಯೋಗ ಶಿಕ್ಷಕರು ತಾವು ಕಲಿತಿರುವ ಯೋಗವನ್ನು ಮತ್ತೊಬ್ಬರಿಗೆ ಕಲಿಸಿಕೊಡ ಬೇಕು. ಎಲ್ಲರಿಗೂ ಸಾಕಷ್ಟು ಒತ್ತಡದ ಜೀವನ ಇರುತ್ತದೆ. ಅದರ ಜೊತೆಯಲ್ಲಿ ಸಮಾಜಕ್ಕೆ ನಮ್ಮ ಕೊಡುಗೆಯೇನು ಎನ್ನುವುದು ಸಹ ಅರಿಯಬೇಕು ಎಂದರು.

ಯೋಗ ಶಿಬಿರದ ಅಧ್ಯಕ್ಷ  ಸುನೀಲ್‌ಕುಮಾರ್ ಮಾತನಾಡಿದರು.

ಈ ಸಂದರ್ಭದಲ್ಲಿ  ಹಿರಿಯ ಯೋಗ ಶಿಕ್ಷಕ ರುದ್ರಮುನಿಯಪ್ಪ, ಜಿಲ್ಲಾ ಪ್ರಭಾರಿ ಬಿ.ಕೆ. ನರಸಿಂಹಮೂರ್ತಿ, ಮಂಡಲ ಪ್ರಭಾರಿಗಳಾದ ಎನ್‌.ಎಸ್. ಷಣ್ಮುಖ, ದೇಗುಲ ಸಮಿತಿ ಸದಸ್ಯ ಟಿ. ಹನುಮಂತಪ್ಪ, ಚನ್ನಗಿರಿಯ ಯೋಗ ಶಿಕ್ಷಕ ವಸಂತ್, ಸುಜಾತ, ಹೊನ್ನಾಳಿಯ ರುದ್ರೇಶ್, ಶ್ರೀಕಾಂತ್, ಮಂಜುಳಾ ಪಾಟೀಲ್, ಗುಹೇಶ್ವರ್. ಕಲ್ಯಾಣಿ, ಇಂದ್ರ, ವಿನೋದ, ಸವಿತಾ, ಸುನೀಲ್‌ಕುಮಾರ್, ಪ್ರಭಾ, ಅಂಜಲಿ ಇತರರು ಹಾಜರಿದ್ದರು.  

error: Content is protected !!