ಕಣ್ಮನ ಸೆಳೆದ `ಸಣ್ತಿಮ್ಮಿ ಪಕ್ಷಿ ಪುರಾಣ’ ಏಕವ್ಯಕ್ತಿ ನಾಟಕ ಪ್ರದರ್ಶನ

ಕಣ್ಮನ ಸೆಳೆದ `ಸಣ್ತಿಮ್ಮಿ ಪಕ್ಷಿ ಪುರಾಣ’ ಏಕವ್ಯಕ್ತಿ ನಾಟಕ ಪ್ರದರ್ಶನ

ದಾವಣಗೆರೆ, ಮಾ. 27- ನಗರದ ವನಿತಾ ಸಮಾಜದ ಆವರಣದಲ್ಲಿರುವ ಶ್ರೀ ಸತ್ಯ ಸಾಯಿ ರಂಗಮಂದಿರದಲ್ಲಿ ಭೂಮಿಕ-ವನಿತಾ ರಂಗ ವೇದಿಕೆ ವತಿಯಿಂದ ವಿಶ್ವ ರಂಗಭೂಮಿ ದಿನಾಚರಣೆ ಪ್ರಯುಕ್ತ ಇಂದು ಸಂಜೆ ಹಮ್ಮಿಕೊಂಡಿದ್ದ `ಸಣ್ತಿಮ್ಮಿ ಪಕ್ಷಿ ಪುರಾಣ’ ಏಕ ವ್ಯಕ್ತಿ ನಾಟಕ ಪ್ರದರ್ಶನ ನೆರೆದಿದ್ದ ಪ್ರೇಕ್ಷಕರ ಕಣ್ಮನ ಸೆಳೆಯಿತು.

ರಂಗಭೂಮಿ, ಚಿತ್ರಕಲೆ, ಮಹಿಳಾ ಮತ್ತು ದಲಿತ ಚಳವಳಿ ಮುಂತಾದ ಸಾಮಾಜಿಕ ಚಟುವಟಿಕೆಗಳಲ್ಲಿ ಕ್ರಿಯಾಶೀಲವಾಗಿ ತೊಡಗಿಸಿಕೊಂಡಿರುವ ಹೋರಾಟಗಾರ್ತಿ, ಬರಹಗಾರ್ತಿ ದು. ಸರಸ್ವತಿ ಅವರೇ ರಚಿಸಿರುವ `ಸಣ್ತಿಮ್ಮಿ ಪಕ್ಷಿ ಪುರಾಣ’ ಏಕ ವ್ಯಕ್ತಿ ನಾಟಕದಲ್ಲಿ ಅವರ ಅಭಿನಯ ಮನೋಜ್ಞವಾಗಿತ್ತು. ನಾಟಕ ಪ್ರದರ್ಶನಕ್ಕೂ ಮುನ್ನ ಭೂಮಿಕ-ವನಿತಾ ರಂಗ ವೇದಿಕೆ ಕಲಾವಿದರು ರಂಗ ಗೀತೆಗಳನ್ನು ಪ್ರಸ್ತುತ ಪಡಿಸಿದರು. ನಾಟಕ ಪ್ರದರ್ಶನದ ನಂತರ ಸಂವಾದ ಕಾರ್ಯಕ್ರಮ ನಡೆಯಿತು.

ಭೂಮಿಕ-ವನಿತಾ ರಂಗ ವೇದಿಕೆಯ ಡಾ. ಅನುರಾಧ ಬಕ್ಕಪ್ಪ, ಬಿ.ಟಿ.ಜಾಹ್ನವಿ, ಹೆಚ್.ಎನ್.ಸುಧಾ, ಸತ್ಯಭಾಮ ಮಂಜುನಾಥ್, ಛಾಯಾ ಶ್ರೀಧರ್ ಸೇರಿದಂತೆ ಭೂಮಿಕ-ವನಿತಾ ರಂಗ ವೇದಿಕೆ ಹಾಗೂ ವನಿತಾ ಸಮಾಜದ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. 

error: Content is protected !!