ಎಸ್.ಬಿ.ಸಿ. ಕಾಲೇಜಿನ ಕಸಾಪ ಕಾರ್ಯಕ್ರಮದಲ್ಲಿ ಡಾ. ದಾದಾಪೀರ್ ನವಿಲೇಹಾಳ್ ಕಳಕಳಿ
ದಾವಣಗೆರೆ, ಮಾ.21- ಮಹಿಳೆಯು ಅನಾದಿ ಕಾಲದಿಂದಲೂ ಅನ್ಯಾಯಕ್ಕೆ ಒಳಗಾಗಿದ್ದು, ಪೌರಾಣಿಕ ಹಿನ್ನೆಲೆಯ ಬೃಂದಾ ಹಾಗೂ ಅಹಲ್ಯಾ ಅವರ ತಪ್ಪಿಲ್ಲದಿದ್ದರೂ ಶಿಕ್ಷೆ ಅನುಭವಿಸುವ ಪುರುಷ ಧೋರಣೆ ಇದಕ್ಕೆ ಕಾರಣ. ಎಲ್ಲಾ ಧರ್ಮಗಳಲ್ಲೂ ಮಹಿಳೆಯನ್ನು ಎರಡನೇ ದರ್ಜೆ ಪ್ರಜೆಯನ್ನಾಗಿ ನೋಡುವ ಮನಸ್ಥಿತಿ ಇದೆ. ಇದು ಬದಲಾಗಬೇಕು ಎಂದು ಪ್ರಗತಿಪರ ಚಿಂತಕ ಡಾ. ದಾದಾಪೀರ್ ನವಿಲೇಹಾಳ್ ಹೇಳಿದರು.
ನಗರದ ಎಸ್.ಬಿ.ಸಿ. ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಶಾಲಾ-ಕಾಲೇಜು ಅಂಗಳದಲ್ಲಿ ಸಾಹಿ ತ್ಯೋತ್ಸವ’ದ ಅಂಗವಾಗಿ ಏರ್ಪ ಡಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ `ಮಹಿಳೆಯರ ಸವಾಲುಗಳು ಮತ್ತು ಪರಿಹಾರಗಳು” ಕುರಿತು ಮಾತನಾಡಿದರು.
ಹೆಣ್ಣು ಮಕ್ಕಳ ತಂದೆಯನ್ನು ಕಂಡೊಡನೆ ಎಲ್ಲಿಗೆ ಕೊಟ್ಟಿದ್ದೀಯಾ ನಿನ್ನ ಮಗಳನ್ನು ಎನ್ನುವ ಮನಸ್ಥಿತಿ, ಮಗನನ್ನು ಎಲ್ಲಿಗೆ ಕೊಟ್ಟಿದ್ದೀಯಾ ಎಂಬುದಾಗಿ ಬದಲಾಗುವುದು ಮುಖ್ಯ ಎಂದರು.
ಪುರುಷನ ಹಿಂದೆ ಮಹಿಳೆ ಇದ್ದಾಳೆ ಅನ್ನುವುದಕ್ಕಿಂತ ಜೊತೆ ಇದ್ದಾಳೆ ಎನ್ನುವುದು ಸೂಕ್ತ. ಪ್ರತಿ ಯೊಬ್ಬ ಮಹಿಳೆಯರನ್ನು ಸಮಾನ ವಾಗಿ ಪರಿಗಣಿಸಲು ಸಿದ್ಧರಾಗಿರ ಬೇಕು. ಪ್ರತಿ ಹಂತದಲ್ಲೂ ಅವರನ್ನು ಬೆಂಬಲಿಸಬೇಕು ಎಂದು ಹೇಳಿದರು.
ಎಸ್‌ಬಿಸಿ ಕಾಲೇಜಿನ ಪ್ರಾಚಾರ್ಯ ಡಾ. ಕೆ. ಷಣ್ಮುಖ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪರಿಮಳ ಜಗದೀಶ್, ಕಸಾಪ ತಾಲ್ಲೂಕು ಅಧ್ಯಕ್ಷರಾದ ಸುಮತಿ ಜಯಪ್ಪ, ಸಮಾಜ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಶ್ಯಾಗಲೆ, ರಾಜ್ಯಶಾಸ್ತ್ರ ವಿಭಾಗದ ವಿಶ್ವನಾಥ, ವಾಣಿಜ್ಯಶಾಸ್ತ್ರ ವಿಭಾಗದ ಅಧ್ಯಾಪಕರಾದ ಸೌಮ್ಯ, ಶಾಲಿನಿ, ಸ್ಫೂರ್ತಿ, ಕನ್ನಡ ವಿಭಾಗದ ಡಾ.ಮಂಜುನಾಥ್, ದೈಹಿಕ ಶಿಕ್ಷಣ ನಿರ್ದೇಶಕ ಅಣ್ಣಪ್ಪ, ಗ್ರಂಥಪಾಲಕ ಕೊಟ್ರೇಶ್ ಮತ್ತಿತರರು ಉಪಸ್ಥಿತರಿದ್ದರು.
ಶಿಕ್ಷಕ ರೇವಣಸಿದ್ಧಪ್ಪ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಾಣಿಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಭಾಗ್ಯಶ್ರೀ ಹುಬ್ಳೀಕರ್ ನಿರೂಪಿಸಿದರು. ಕನ್ನಡ ವಿಭಾಗದ ಸೌಮ್ಯ ವಂದಿಸಿದರು.