ಸಾವಿಗಾಗಿ ಹೋರಾಟ ನಡೆಸಿ ಗೆದ್ದ ಕರಿಬಸಮ್ಮ

ಸಾವಿಗಾಗಿ ಹೋರಾಟ ನಡೆಸಿ ಗೆದ್ದ ಕರಿಬಸಮ್ಮ

ಈ ನಿವೃತ್ತ ಶಿಕ್ಷಕಿ ಬಗ್ಗೆ ಪ್ರಪಂಚಕ್ಕೆ ತಿಳಿಯಬೇಕಿದೆ: ತೆಲುಗು ಚಿತ್ರ ನಟಿ ರೋಜಾ ರಮಣಿ

ದಾವಣಗೆರೆ, ಮಾ.4- ದಯಾಮರಣಕ್ಕಾಗಿ ಹೋರಾಟ ನಡೆಸಿ ಗೆದ್ದ ನಿವೃತ್ತ ಶಿಕ್ಷಕಿ ಕರಿಬಸಮ್ಮ ನವರ ಬಗ್ಗೆ ಪ್ರಪಂಚಕ್ಕೇ ತಿಳಿಯ ಬೇಕಿದೆ. ಇವರೊಬ್ಬ ಅಪರೂಪದಲ್ಲಿ ಅಪರೂಪದ ಮಹಿಳೆ ಎಂದು ತೆಲುಗು ಚಿತ್ರರಂಗದ ಹೆಸರಾಂತ ನಟಿ ರೋಜಾ ರಮಣಿ ಹೇಳಿದ್ದಾರೆ.

ಮಂಗಳವಾರ ರಾತ್ರಿ ಕರಿಬಸಮ್ಮ ನವರನ್ನು ಭೇಟಿ ಮಾಡಿ, ಕುಶಲೋ ಪರಿ ವಿಚಾರಿಸಿದ ನಂತರ ಅವರು ತಮ್ಮನ್ನು ಭೇಟಿಯಾದ `ಜನತಾ ವಾಣಿ’ ಯೊಂದಿಗೆ ಮಾತನಾಡಿದರು.

ಮೂರು ದಿನಗಳ ಹಿಂದಷ್ಟೇ ರಾತ್ರಿ ಕರಿಬಸಮ್ಮನವರ ಕುರಿತ ಸಂದರ್ಶನವೊಂದನ್ನು ಖಾಸಗಿ ವಾಹಿನಿಯಲ್ಲಿ ನೋಡಿದೆ. ನಿಜಕ್ಕೂ ಆಶ್ಚರ್ಯವಾಯಿತು. ಇಂತವರೂ ಭೂಮಿ ಮೇಲೆ ಇದ್ದಾರೆಯೇ? ಎನಿಸಿತು. ಆ ಕ್ಷಣದಿಂದಲೇ ಅವರನ್ನು ನೋಡುವ ತುಡಿತ ಹೆಚ್ಚಿತು.

ಅಂದೇ ನನ್ನ ಪತಿಯ ಬಳಿ ಪ್ರಸ್ತಾಪಿಸಿದೆ. ಅವರೂ ಸಹ ಭೇಟಿ ಮಾಡಲು ಒಪ್ಪಿಗೆ ಇತ್ತರು. ನಂತರ ಹೈದರಾಬಾದ್‌ನಿಂದ ಬೆಂಗಳೂರಿಗೆ ಬಂದು, ಅಲ್ಲಿಂದ ದಾವಣಗೆರೆಗೆ ಬಂದು ಅವರನ್ನು ಭೇಟಿ ಮಾಡಿದೆ. ತುಂಬಾ ಖುಷಿಯಾಗುತ್ತಿದೆ ಎಂದು ಹೇಳಿದರು.

ಮಾಜಿ ಪ್ರಧಾನಿ ಪ್ರಧಾನಿ ಇಂದಿರಾಗಾಂಧಿ, ಹಾಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಸಾಕ ಷ್ಟು ಸೆಲೆಬ್ರಟಿಗಳನ್ನು ನೋಡಿದ್ದೇನೆ. ಆದರೆ ಈ ರೀತಿಯ ಮಹಿಳೆಯನ್ನು ಜೀವನದಲ್ಲಿ ಇದೇ ಪ್ರಥಮ ಬಾರಿಗೆ ನೋಡುತ್ತಿದ್ದೇನೆ ಎಂದರು. 

ಅನಾರೋಗ್ಯ, ಮಾನಸಿಕ ಕಿರಿಕಿರಿ,  ಕ್ಯಾನ್ಸರ್‌ ನಂತಹ ಕಾಯಿಲೆಯ ನಡುವೆಯೂ ಅವರ ವಿಲ್‌ ಪವರ್ ಅತ್ಯುತ್ತಮವಾಗಿದೆ. 85 ಸಾಮಾನ್ಯವಾಗಿ ಜನರು ತಮ್ಮ ಬೇಡಿಕೆಗಾಗಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಾರೆ. ಆದರೆ ಇವರು ಸಾವಿನ ಕುರಿತು ಸರ್ಕಾರದೊಂದಿಗೆ ಹೋರಾಟ ನಡೆಸಿ ಗೆದ್ದಿದ್ದಾರೆ. ನಿಜಕ್ಕೂ ಇವರು ಗ್ರೇಟ್ ಎಂದು ಪ್ರಶಂಸಿಸಿದರು.

ಅಂದ ಹಾಗೆ ನಟಿ ರೋಜಾ ರಮಣಿ ಅವರು ಭಾರತೀಯ ನಟಿ. ಪ್ರಧಾನವಾಗಿ ಮಲಯಾಳಂ, ತಮಿಳು, ತೆಲುಗು ಹಾಗೂ ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಬಾಲ ನಟಿಯಾಗಿ 1967ರಲ್ಲಿ ತೆಲುಗಿನಲ್ಲಿ ಭಕ್ತ ಪ್ರಹ್ಲಾದ ಚಿತ್ರದಲ್ಲಿ ನಟಿಸಿದ್ದರು. ಇದಕ್ಕಾಗಿ ಅವರು ಅತ್ಯುತ್ತಮ ಬಾಲನಟಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಯನ್ನು ಪಡೆದರು. 

ಅವರು 1970 ಮತ್ತು 1980 ರ ದಶಕದ ಆರಂಭದಲ್ಲಿ ಜನಪ್ರಿಯರಾಗಿ ದ್ದ ಇವರು ಡಬ್ಬಿಂಗ್ ಕಲಾವಿದೆಯಾಗಿ 400ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ.  ಅಭಿನಯ ಮತ್ತು ಧ್ವನಿ ಡಬ್ಬಿಂಗ್‌ಗಾಗಿ 50 ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಪಡೆದಿದ್ದಾರೆ.

error: Content is protected !!