ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಉತ್ತಮ ಆಡಳಿತ ಮುಖ್ಯ

ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಉತ್ತಮ ಆಡಳಿತ ಮುಖ್ಯ

ಐಎಎಸ್ ಆಸ್ಪಿರಂಟ್ ಕ್ಲಬ್ ಉಪನ್ಯಾಸ ಕಾರ್ಯಕ್ರಮದಲ್ಲಿ ಐಜಿಪಿ ಬಿ.ಆರ್. ರವಿಕಾಂತೇಗೌಡ

ದಾವಣಗೆರೆ, ಮಾ.2- ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಸಫಲರಾಗಿ ಆಡಳಿತಾತ್ಮಕವಾಗಿ ಸಮಾಜದ ಬದಲಾವಣೆ ತರುವ ನಿಟ್ಟಿನಲ್ಲಿ ಸ್ವಾಸ್ಥ್ಯ ಸಮಾಜ ನಿರ್ಮಿಸಲು ಮುಂದಾಗಬೇಕು ಎಂದು ಐಜಿಪಿ ಬಿ.ಆರ್. ರವಿಕಾಂತೇಗೌಡ ಕಿವಿಮಾತು ಹೇಳಿದರು.

`ದಿ ಹಿಂದೂ ಪತ್ರಿಕೆ ಗ್ರೂಪ್ ಮತ್ತು ಶಂಕರ್ ಐಎಎಸ್ ಅಕಾಡೆಮಿಯ ಸಹಯೋಗದಲ್ಲಿ ನಗರದ ಜಿಎಂ ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗಾಗಿ `ಐಎಎಸ್ ಆಸ್ಪಿರಂಟ್ ಕ್ಲಬ್ ಅತಿಥಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಆಡಳಿತ ಸದೃಢ ಹಾಗೂ ಉತ್ತಮವಾಗಿದ್ದರೆ ಸಮಾಜದಲ್ಲಿ ಗುಣಮಟ್ಟದ ಶಿಕ್ಷಣ, ಆರೋಗ್ಯ ಸೇವೆ ಮತ್ತು ಉತ್ತಮ ಬದುಕು ನಿರ್ಮಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.

ಈ ಹಿಂದೆ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸಲು ರಾಜ್ಯದಲ್ಲಿ ವ್ಯವಸ್ಥೆಗಳು ಇರಲಿಲ್ಲ. ಹಾಗಾಗಿ ಕಲಿಕೆಗಾಗಿ ದೆಹಲಿಗೆ ಹೋಗಬೇಕಾಗಿತ್ತು. ಆದರೆ ಈಗ ಕಾಲ ಬದಲಾಗಿದೆ. ರಾಜ್ಯದ ಯುವ ಪೀಳಿಗೆ ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ ತೆಗೆದು ಕೊಳ್ಳಲು ರಾಜ್ಯದಲ್ಲೇ ಅನೇಕ ಐಎಎಸ್ ಅಕಾಡೆಮಿ ಗಳು ತಲೆ ಎತ್ತಿವೆ ಎಂದರು. ಇಂದಿನ ಯುವಕರಿಗೆ ಉತ್ತಮ ಅವಕಾಶಗಳಿವೆ. ಜ್ಞಾನಾರ್ಜನೆ ದೃಷ್ಟಿ ಯಿಂದ ಕಲಿಕೆಗೆ ಸಹಾಯಕವಾಗುವ ಕಲಿಕಾ ಸಾಮಗ್ರಿ ಒದಗಿಸುತ್ತವೆ. ವಿದ್ಯಾರ್ಥಿಗಳು ಸದುಪ ಯೋಗ ಪಡಿಸಿಕೊಳ್ಳಬೇಕು ಎಂದು ತಿಳಿಸಿದರು.

`ಆರೋಗ್ಯ ಪೂರ್ಣ ಸಮಾಜ ನಿರ್ಮಾಣಕ್ಕೆ ಉತ್ತಮ ಆಡಳಿತ ಬಹುಮುಖ್ಯ ಎಂದು ಹೇಳಿದ್ದ ನಮ್ಮ ತಂದೆಯ ಮಾತಿನಿಂದಾಗಿ ನಾನು ಪೊಲೀಸ್‌ ಇಲಾಖೆಗೆ ಸೇರಿ ಜನ ಸೇವೆ ಮಾಡಲು ಮುಂದಾಗಿದ್ದೇನೆ’ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ದಿ ಹಿಂದೂ ಗ್ರೂಪಿನ ಪ್ರಧಾನ ವ್ಯವಸ್ಥಾಪಕ ಸಿ. ಶ್ರೀಧರ್, ಹಿರಿಯ ಪತ್ರಕರ್ತ ಗಿರೀಶ್, ಶಂಕರ್ ಐಎಎಸ್ ಅಕಾಡೆಮಿ ಪ್ರಾದೇಶಿಕ ಮುಖ್ಯಸ್ಥ ಪ್ರೇಮಾನಂದ, ಪತ್ರಕರ್ತ ಆನಂದ್ ಮಾಳಗಿ, ಜಿಎಂಯು ತರಬೇತಿ ಮತ್ತು ಉದ್ಯೋಗ ವಿಭಾಗದ ನಿರ್ದೇಶಕ ಟಿ.ಆರ್. ತೇಜಸ್ವಿ ಕಟ್ಟಿಮನಿ, ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ.ಎಸ್. ಓಂಕಾರಪ್ಪ ಇತರರು ಇದ್ದರು.

error: Content is protected !!