ಇಂದು ಸದ್ಭಾವನಾ ಶಾಂತಿಯಾತ್ರೆ
ದಾವಣಗೆರೆ, ಫೆ.25- ಮಹಾಶಿವರಾತ್ರಿ ಪ್ರಯುಕ್ತ ಅಂತರರಾಷ್ಟ್ರೀಯ ಅಧ್ಯಾತ್ಮಿಕ ಸೇವಾ ಸಂಸ್ಥೆ ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ವತಿಯಿಂದ 108 ಜ್ಯೋತಿರ್ಲಿಂಗಗಳ ಮೋಟಾರ್ ಬೈಕ್ ರ್ಯಾಲಿಯನ್ನು ಇಂದು ನಗರದಲ್ಲಿ ನಡೆಸಲಾಯಿತು.
ಶಿವರಾತ್ರಿಯಲ್ಲಿನ `ರಾತ್ರಿ’ ಎಂಬ ಪದವು ಅಜ್ಞಾನದ ಅಂಧಕಾರ ಮತ್ತು ಅಧರ್ಮದಿಂದ ತುಂಬಿದ ಕತ್ತಲನ್ನು ಸೂಚಿಸುತ್ತದೆ. ವರ್ತಮಾನ ಸಮಯದಲ್ಲಿ ನೈತಿಕ, ಮಾನವೀಯ ಹಾಗೂ ಅಧ್ಯಾತ್ಮಿಕ ಮೌಲ್ಯಗಳ ಘೋರ ಅವಹೇಳನವಾಗುತ್ತಿದೆ. ಮನಸ್ಸು ವಿಕಾರಗಳಿಂದ ದೂಷಿತವಾಗಿದ್ದು, ಇದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ದೆಸೆಯಲ್ಲಿ ಬ್ರಹ್ಮಾಕುಮಾರೀಸ್ ಸಂಸ್ಥೆಯು ಹಮ್ಮಿಕೊಂಡಿರುವ ಶಿವರಾತ್ರಿ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ನಿಟ್ಟಿನಲ್ಲಿ ಈ ರಾಲಿಯನ್ನು ಆಯೋಜಿಸಲಾಗಿತ್ತು.
ಶ್ರೀ ಡಿ. ದೇವರಾಜ ಅರಸು ಬಡಾವಣೆ `ಬಿ’ ಬ್ಲಾಕ್ನಲ್ಲಿರುವ ಬ್ರಹ್ಮಾಕುಮಾರೀಸ್ ಸಂಸ್ಥೆಯ ಶಿವಧ್ಯಾನ ಮಂದಿರ ಆವರಣದಿಂದ ಆರಂಭಗೊಂಡ ರಾಲಿಯು ನಗರಾದ್ಯಂತ ಸಂಚರಿಸಿತು. ಬಸವ ನಗರ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ನಂಜುಂಡು ಸ್ವಾಮಿ ಅವರು ರಾಲಿಯನ್ನು ಉದ್ಘಾಟಿಸಿದರು.
ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ನೇತೃತ್ವದಲ್ಲಿ ಏರ್ಪಾಡಾಗಿದ್ದ ರಾಲಿಯ ಮುಂದಾಳತ್ವವನ್ನು ರಾಜಯೋಗ ಶಿಕ್ಷಕರುಗಳಾದ ಬ್ರಹ್ಮಾಕುಮಾರಿ ಶೋಭಾಜಿ, ಬ್ರಹ್ಮಾಕುಮಾರಿ ಶಾಂತಾಜಿ ಮತ್ತಿತರರು ವಹಿಸಿದ್ದರು.
ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕರಾದ ರಾಜಯೋಗಿನಿ ಬ್ರಹ್ಮಾಕುಮಾರಿ ಲೀಲಾಜಿ ನೇತೃತ್ವದಲ್ಲಿ ಏರ್ಪಾಡಾಗಿದ್ದ ರಾಲಿಯ ಮುಂದಾಳತ್ವವನ್ನು ರಾಜಯೋಗ ಶಿಕ್ಷಕರುಗಳಾದ ಬ್ರಹ್ಮಾಕುಮಾರಿ ಶೋಭಾಜಿ, ಬ್ರಹ್ಮಾಕುಮಾರಿ ಶಾಂತಾಜಿ ಮತ್ತಿತರರು ವಹಿಸಿದ್ದರು.
ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ : ಶ್ರೀ ಡಿ. ದೇವರಾಜ ಅರಸು ಬಡಾವಣೆ `ಬಿ’ ಬ್ಲಾಕ್ನಲ್ಲಿರುವ ಬ್ರಹ್ಮಾ ಕುಮಾರೀಸ್ ಸಂಸ್ಥೆಯ ಶಿವಧ್ಯಾನ ಮಂದಿರದಲ್ಲಿ ದ್ವಾದಶ ಜ್ಯೋತಿರ್ಲಿಂಗಗಳ ದರ್ಶನ ಕಾರ್ಯಕ್ರಮವನ್ನು ಈಗಾಗಲೇ ಆರಂಭಿಸಲಾಗಿದ್ದು, ಇದೇ ದಿನಾಂಕ
28 ರವರೆಗೆ ಪ್ರತಿದಿನ ಬೆಳಿಗ್ಗೆ 10 ರಿಂದ ರಾತ್ರಿ 8 ರವರೆಗೆ ಸಾರ್ವಜನಿಕರು ಉಚಿತವಾಗಿ ವೀಕ್ಷಿಸಬಹುದು.
ಇಂದು ವಿಶ್ವ ಸದ್ಭಾವನಾ ಶಾಂತಿಯಾತ್ರೆ : ಶಿವರಾತ್ರಿಯಂದು 108 ಶಿವಲಿಂಗಗಳೊಂದಿಗೆ ವಿಶ್ವ ಸದ್ಭಾವನಾ ಶಾಂತಿಯಾತ್ರೆ ಏರ್ಪಡಾಗಿದೆ. ಅಂದು ಸಂಜೆ 4 ಗಂಟೆಗೆ ಮೋತಿ ವೀರಪ್ಪ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಮೈದಾನದಿಂದ ಆರಂಭ ಗೊಳ್ಳುವ ಸದ್ಭಾವನಾ ಶಾಂತಿಯಾತ್ರೆಯು ರಾಜಬೀದಿಗಳಲ್ಲಿ ಸಂಚರಿಸಲಿದೆ. ನಂತರ ಸಂಜೆ 6.30ಕ್ಕೆ ಶಿವಧ್ಯಾನ ಮಂದಿರದಲ್ಲಿ ಶಿವ ಧ್ವಜಾರೋಹಣ ಮತ್ತು ಶಿವಧ್ಯಾನ ಕಾರ್ಯಕ್ರಮಗಳು ನಡೆಯಲಿವೆ ಎಂದು ಲೀಲಾಜಿ ತಿಳಿಸಿದ್ದಾರೆ.
ರಾಜಯೋಗ ಶಿಬಿರ : ಶಿವರಾತ್ರಿ ಪ್ರಯುಕ್ತ ಇದೇ ದಿನಾಂಕ 27ರಿಂದ ಮಾರ್ಚ್ 1ರವರೆಗೆ ಮೂರು ದಿನಗಳ ಕಾಲ ರಾಜಯೋಗ ಶಿಬಿರವನ್ನು ಆಯೋಜಿಸ ಲಾಗಿದ್ದು, ಶಿವಧ್ಯಾನ ಮಂದಿರ ಮತ್ತು ಪಿ.ಜೆ. ಬಡಾವಣೆ 8ನೇ ಮುಖ್ಯರಸ್ತೆ – ಬ್ರಹ್ಮಾ ಕುಮಾರೀಸ್ ರಸ್ತೆಯಲ್ಲಿರುವ ಬ್ರಹ್ಮಾಕುಮಾ ರೀಸ್ ಸಂಸ್ಥೆಯಲ್ಲಿ ಪ್ರತಿದಿನ ಬೆಳಿಗ್ಗೆ 7.30 ರಿಂದ 8.30, ಸಂಜೆ 7 ರಿಂದ 8ರವರೆಗೆ ಒಂದು ಗಂಟೆ ಕಾಲ ಶಿಬಿರ ನಡೆಯಲಿದೆ.