ದಾವಣಗೆರೆ: ಐಎಸ್ಐ ಗುರುತಿನ ಹೆಲ್ಮೆಟ್ ಕಡ್ಡಾಯ ಗೊಳಿಸಿದ ಹಿನ್ನೆಲೆಯಲ್ಲಿ ನಗರದ ವಿವಿಧ ಅಂಗಡಿ ಹಾಗೂ ರಸ್ತೆಬದಿಗಳಲ್ಲಿ ಪೂರ್ಣ ಹೆಲ್ಮೆಟ್ ಖರೀದಿಗೆ ಜನ ಮುಂದಾಗಿದ್ದರು. ಭಾನುವಾರವಾಗಿದ್ದರಿಂದ ನಗರದಲ್ಲಿ ಶೋರೂಂಗಳು ಹಾಗೂ ಕೆಲವು ಅಂಗಡಿಗಳಲ್ಲಿ ಹೆಲ್ಮೆಟ್ ಲಭ್ಯವಿರಲಿಲ್ಲ. ಈ ಕಾರಣಕ್ಕಾಗಿ ಜನರಿಗೆ ಫುಟ್ಪಾತ್ ಅಂಗಡಿಗಳಲ್ಲಿ ಖರೀದಿ ಅನಿವಾರ್ಯವಾಗಿತ್ತು. ಪೊಲೀಸ್ ಇಲಾಖೆ ಬೇಸಿಗೆ ಆರಂಭದಲ್ಲಿಯೇ ಪೂರ್ಣ ಹೆಲ್ಮೆಟ್ ಕಡ್ಡಾಯವಾಗಿರುವುದಕ್ಕೆ ಹಾಗೂ ಸೋಮವಾರವೇ ಗಡುವು ನೀಡಿರುವುದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ಷೇಪವೂ ವ್ಯಕ್ತವಾಯಿತು.
ಐಎಸ್ಐ ಮಾರ್ಕ್ ಇದೆಯಾ?
