ಹೆದರಿಸಿ, ನಿಂದಿಸಿ ಸಾಲ ವಸೂಲಿ ಸಲ್ಲ

ಹೆದರಿಸಿ, ನಿಂದಿಸಿ ಸಾಲ ವಸೂಲಿ ಸಲ್ಲ
  • 2 ಲಕ್ಷ ರೂ. ವರೆಗೆ ಮಾತ್ರ ಸಾಲ ನೀಡಲು ಅವಕಾಶ
  • ಗರಿಷ್ಠ ಶೇ.18ಕ್ಕಿಂತ ಹೆಚ್ಚು ಬಡ್ಡಿ ವಸೂಲಿ ಮಾಡುವಂತಿಲ್ಲ
  • ನೀಡಿದ ಸಾಲ ಬಾಕಿ ವಸೂಲಿ ವೇಳೆ ಕೆವೈಸಿ ಕೇಳುವಂತಿಲ್ಲ
  • ಬೆ.9 ರಿಂದ ಸಂಜೆ 6ರ ವರೆಗೆ ಮಾತ್ರ ಸಾಲ ವಸೂಲಿ 
  • ರೌಡಿಗಳನ್ನು ಬಿಟ್ಟು ದಬ್ಬಾಳಿಕೆ ಮಾಡುವಂತಿಲ್ಲ

ಮೈಕ್ರೋ ಫೈನಾನ್ಸ್‌ ಮುಖ್ಯಸ್ಥರಿಗೆ ಡಿಸಿ ಗಂಗಾಧರ ಸ್ವಾಮಿ ಎಚ್ಚರಿಕೆ

ದಾವಣಗೆರೆ, ಜ.30-ಗೂಂಡಾಗ ಳಿಂದ ಜನರನ್ನು ಹೆದರಿಸಿ, ನಿಂದಿಸಿ ಸಾಲ ವಸೂಲಾತಿಗೆ ಮುಂದಾದರೆ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಮೈಕ್ರೋ ಫೈನಾನ್ಸ್‌ ಮುಖ್ಯಸ್ಥರಿಗೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಕಿರು ಹಣಕಾಸು ಸಂಸ್ಥೆಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಸಾಲ ವಿತರಣೆ ಮತ್ತು ಮರುಪಾವತಿ ಪ್ರಕ್ರಿಯೆಗಳಲ್ಲಿ ಕೈಗೊಳ್ಳುವ ಕ್ರಮಗಳ ಕುರಿತು ಸಲಹೆ ಮತ್ತು ಸೂಚನೆಗಳ ಕುರಿತು ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿದರು. 

ಗುರುವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಕಿರು ಹಣಕಾಸು ಸಂಸ್ಥೆಗಳು, ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಸಾಲ ವಿತರಣೆ ಮತ್ತು ಮರುಪಾವತಿ ಪ್ರಕ್ರಿಯೆಗಳಲ್ಲಿ ಕೈಗೊಳ್ಳುವ ಕ್ರಮಗಳ ಕುರಿತು ಸಲಹೆ ಮತ್ತು ಸೂಚನೆಗಳ ಕುರಿತು ಆಯೋಜಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತಾನಾಡಿದರು. 

ಮೈಕ್ರೋ ಫೈನಾನ್ಸ್ ಕಂಪನಿಗಳು ನ್ಯಾಯಬದ್ಧವಾಗಿ ವ್ಯವಹರಿಸಬೇಕು. ಒಂದು ವೇಳೆ ಜನರಿಗೆ  ಕಿರುಕುಳ ನೀಡಿದ ದೂರು ಬಂದರೆ ಪೊಲೀಸರು ಕೂಡಲೇ  ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿದರು. ಸಾಲವನ್ನು ನೀಡುವಾಗ ಸಾಲ ಪಡೆಯುವ ವ್ಯಕ್ತಿಯ ಮತ್ತು ಕುಟುಂಬದ ಒಟ್ಟು ವಾರ್ಷಿಕ ಆದಾಯವನ್ನು ಪರಿ ಗಣಿಸಬೇಕು. ಮಾಸಿಕ ಒಟ್ಟು ಆದಾ ಯದ ಶೇ.50 ರಷ್ಟು ಮೊತ್ತವನ್ನು ಮಾತ್ರ ಸಾಲ ಮರುಪಾವತಿ ಸಾಮರ್ಥ್ಯ ಎಂದು ಪರಿಗಣಿಸಬೇಕು ಎಂದರು. 

ಜನರಿಗೆ ಅವರ ಅಗತ್ಯಕ್ಕಿಂತ ಹೆಚ್ಚಾಗಿ ಸಾಲವನ್ನು ನೀಡಿ, ಸಾಲ ಮರುಪಾವತಿಲು ನಿಮ್ಮ ಚೌಕಟ್ಟನ್ನು ಮೀರಿ ಅವರಿಗೆ ತೊಂದರೆ ನೀಡುತ್ತಿದ್ದೀರಿ. ಇದರ ಬಗ್ಗೆ ಪ್ರಕರಣ ದಾಖಲು ಮಾಡಲಾಗುವುದು. ಗ್ರಾಮೀಣ ಭಾಗದ ಜನರಿಗೆ ಸಾಲದ ಅವಶ್ಯಕತೆ ತುಂಬಾ ಇರುವುದರಿಂದ ಆರ್.ಬಿ.ಐ ನಿಯಮಾನುಸಾರ ಸಾಲ ನೀಡಿ, ಅವರ ಅಗತ್ಯಕ್ಕೆ ತಕ್ಕಂತೆ ಸಾಲ ನೀಡಬೇಕು ಎಂದರು.

ಸಾರ್ವಜನಿಕರಿಗೆ ನಿಮ್ಮ ಫೈನಾನ್ಸ್ ಕಂಪನಿಯ ಬಡ್ಡಿ ಎಷ್ಟು ಅಂತ ತಿಳಿಸಿ, ಮೈಕ್ರೋ ಫೈನಾನ್ಸ್  2 ಲಕ್ಷ ರೂ. ವರೆಗೆ ಮಾತ್ರ ಸಾಲ ನೀಡಲು ಅವಕಾಶವಿದೆ. ಸಾಲ ನೀಡುವ ಸಂಧರ್ಭದಲ್ಲಿ ಅರ್ಜಿ ಹಾಗೂ ಷರತ್ತುಗಳು ಕನ್ನಡದಲ್ಲಿರಬೇಕು ಎಂದರು.

ಸಾಲ ಮತ್ತು ಬಾಕಿ ವಸೂಲಾತಿ ಸಂದರ್ಭದಲ್ಲಿ ಸಾಲ ಪಡೆದ ವ್ಯಕ್ತಿಯ ಕುಟುಂಬದ ಯಾವ ವ್ಯಕ್ತಿಗಳನ್ನು ಕೆವೈಸಿ ಕೇಳುವಂತಿಲ್ಲ. ಬಾಕಿ ಪಾವತಿ ಮಾಡಿ ಎಂದು ಒತ್ತಾಯಿಸುವಂತಿಲ್ಲ. ಅತ್ಯಂತ ಕಡಿಮೆ ಮೊತ್ತದ ಸಾಲವಾದರೂ ವಿಮೆ ಮಾಡಿಸಬೇಕು. ಸಾಲ ಪಡೆದ ವ್ಯಕ್ತಿಯು ಮೃತಪಟ್ಟಲ್ಲಿ ವಿಮೆಯ ಮೂಲಕ ಸಾಲದ ಮೊತ್ತವನ್ನು ಪಡೆಯಬೇಕು. ಬಡ್ಡಿ ದರ ಗರಿಷ್ಠ ಶೇ. 18 ರಷ್ಟು ಮಾತ್ರ. ಇದಕ್ಕಿಂತ ಹೆಚ್ಚಿನ ಬಡ್ಡಿದರ ವಸೂಲಿ ಮಾಡುವಂತಿಲ್ಲ ಎಂದರು.

ವಸೂಲಿ ಸಿಬ್ಬಂದಿ ಬೆದರಿಕೆ ಹಾಕಬಾರದು, ಬೈಗುಳ-ಅವಾಚ್ಯ ಶಬ್ದಗಳ ಬಳಕೆ ಮಾಡಬಾರದು.  ಸಾಲ ಪಡೆದವರಿಗೆ ಪದೇ ಪದೇ ಕರೆ ಮಾಡಬಾರದು. ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯ ಒಳಗೆ ಮಾತ್ರ ಕರೆ ಮಾಡಬೇಕು. ಸಾಲ ಪಡೆದ ವ್ಯಕ್ತಿಯ ಕುಟುಂಬದವರು, ಸಂಬಂಧಿಕರು, ಸ್ನೇಹಿತರು ಮತ್ತು ಸಹದ್ಯೋಗಿಗಳಿಗೆ ಕರೆ ಮಾಡುವಂತಿಲ್ಲ.

ಸಾಲ ಪಡೆದವರ ಹೆಸರು ಮತ್ತು ವಿವರಗಳನ್ನು ಯಾವುದೇ ಕಾರಣಕ್ಕೂ ಸಾರ್ವಜನಿಕವಾಗಿ ಪ್ರದರ್ಶಿಸುವಂತಿಲ್ಲ.  ಸಾಲ ಪಡೆದ ಕುಟುಂಬದವರ ಮೇಲೆ ಹಲ್ಲೆ ನಡೆಸುವಂತಿಲ್ಲ. ಯಾವುದೇ ರೀತಿಯ ಕಿರುಕುಳ ನೀಡುವಂತಿಲ್ಲ. ತಡವಾಗಿ ಕಂತು ಪಾವತಿಸಿದ್ದಾರೆ ಎಂಬ ಕಾರಣಕ್ಕೆ ಅವರಿಗೆ ಬಡ್ಡಿ ಹಾಕುವಂತಿಲ್ಲ. ಸಾಲ ವಸೂಲಿಗೆ ರೌಡಿಗಳನ್ನು ಬಿಟ್ಟು ದಬ್ಬಾಳಿಕೆ ಮಾಡುವಂತಿಲ್ಲ. ಆರ್.ಬಿ.ಐ ನಿಯಾಮಾನುಸಾರ ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾಪ್ರಶಾಂತ್ ಮಾತನಾಡಿ,  ಕಿರು ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕೇತರ ಹಣಕಾಸು ಸಂಸ್ಥೆಗಳು ಸಾಲ ವಿತರಣೆ ಮತ್ತು ಮರಪಾವತಿಯಲ್ಲಿ ಗ್ರಾಹಕರನ್ನು ಹಾಗೂ ಸಿಬ್ಬಂದಿಗಳನ್ನು ಗೌರವದಿಂದ ನೋಡಿಕೊಳ್ಳಬೇಕು ಎಂದರು.

ಕಂತು ಕಟ್ಟಲು ತಪ್ಪಿದ ಗ್ರಾಹಕರೊಂದಿಗೆ ವ್ಯವಹರಿಸಲು ಆರ್.ಬಿ.ಐ ನಿರ್ದೇಶಗಳನ್ನು ಪಾಲಿಸಬೇಕು. ಸಾಲಗಾರರ ಮನೆಯಲ್ಲಿ ಮೃತ್ಯು ಸಂಭವಿಸಿದಾಗ, ಅನಾರೋಗ್ಯದ ಸಂದರ್ಭದಲ್ಲಿ ಸಾಲ ಮಸೂಲಾತಿ ಮಾಡಬಾರದು ಎಂದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಸಿದ್ದಾರ್ಥ ಆಚಾರ್ಯ, ಡಿವೈಎಸ್‌ಪಿ ಬಸವರಾಜ, ಚನ್ನಗಿರಿ ಉಪವಿಭಾಗದ ಎಎಸ್ಪಿ ಶ್ಯಾಮ ಉಪಸ್ಥಿತರಿದ್ದರು.

error: Content is protected !!