ಶಿಕ್ಷಣ ಸಂಸ್ಥೆಗಳಿಗೆ ಸಿದ್ದಗಂಗಾ ಮಠದ ಕಾರ್ಯ ಪ್ರೇರಣೆ

ಶಿಕ್ಷಣ ಸಂಸ್ಥೆಗಳಿಗೆ ಸಿದ್ದಗಂಗಾ ಮಠದ ಕಾರ್ಯ ಪ್ರೇರಣೆ

ಹರಿಹರದಲ್ಲಿ ಡಾ.ಶಿವಕುಮಾರ ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಶಾಸಕ ಬಿ.ಪಿ.ಹರೀಶ್   

ಹರಿಹರ,ಜ.29- ತ್ರಿವಿಧ ದಾಸೋಹಿ, ಕರ್ನಾಟಕ ರತ್ನ ಡಾ. ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳ ಪುಣ್ಯಸ್ಮರಣೆಯ ಆಚರಣೆ ಸಮಾಜಕ್ಕೆ ಆದರ್ಶಪ್ರಾಯವಾಗಿದೆ ಎಂದು ಶಾಸಕ ಬಿ.ಪಿ.ಹರೀಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಹಳೇ ಪಿ.ಬಿ ರಸ್ತೆಯ ಮುರುಘ ರಾಜೇಂದ್ರ ಕಾಂಪ್ಲೆಕ್ಸ್‌ನಲ್ಲಿ ನೀಲಗುಂದ
ಶೋಭಾ ಜಗದೀಶ್ ಕುಟುಂಬ, ಬಿಜೆಪಿ ವೀರಣ್ಣ ಹೋಟೆಲ್ ಮತ್ತು ಸ್ನೇಹ ಬಳಗದಿಂದ ಆಯೋಜಿಸಿದ್ದ  ಶ್ರೀ  ಶಿವಕುಮಾರ ಸ್ವಾಮೀಜಿಯವರ ಆರನೇ ವರ್ಷದ ಹಾಗು ಮುರುಘರಾಜೇಂದ್ರ ಜಯದೇವ ಜಗದ್ಗುರುಗಳ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಉಭಯ ಶ್ರೀಗಳ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು  ಮಾತನಾಡಿದರು.

ಸಿದ್ದಗಂಗಾ ಮಠದಲ್ಲಿ ಲಕ್ಷಾಂತರ ಮಕ್ಕಳು ಉಚಿತವಾಗಿ ಶಿಕ್ಷಣ ಪಡೆದು ವೈದ್ಯಕೀಯ, ಇಂಜಿನಿಯರಿಂಗ್,  ಐಎಎಸ್, ಐಪಿಎಸ್ ಹಾಗೂ ಇತರೆ ಇಲಾಖೆಗಳಲ್ಲಿ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವುದರಿಂದ ಇಲ್ಲಿನ ಮಠವು ವಿಶ್ವಮಟ್ಟದಲ್ಲಿ ಹೆಸರನ್ನು ಗಳಿಸುವಂತಾಗಿ   ಶಿಕ್ಷಣ ಸಂಸ್ಥೆಗಳಿಗೆ ಪ್ರೇರಣಾದಾಯಕವಾಗಿದೆ ಎಂದರು.

ಮಾಜಿ ಶಾಸಕ ಹೆಚ್. ಎಸ್. ಶಿವಶಂಕರ್ ಮಾತನಾಡಿ, ಸಮಾಜದಲ್ಲಿನ ಜನರು ನೆಮ್ಮದಿ ಮತ್ತು ಶಾಂತಿಯುತ ಬದುಕನ್ನು ಕಟ್ಟಿಕೊಳ್ಳಲು ಶಿಕ್ಷಣ, ಸಂಸ್ಕಾರ, ಸಂಸೃತಿ,  ಅಧ್ಯಾತ್ಮಿಕತೆಯ ಒಲವು ಹೆಚ್ಚಿನ ಪ್ರಮಾಣದಲ್ಲಿ ಇದ್ದರೆ ಬದುಕನ್ನು ಶಾಂತಿಯುತವಾಗಿ ಮತ್ತು ನೆಮ್ಮದಿಯಿಂದ ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ. ಅದನ್ನು ಅರಿತುಕೊಂಡು ತುಮಕೂರಿನ ಸಿದ್ದಗಂಗಾ ಮಠದ ಶ್ರೀಗಳು ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿ ಆ ಮೂಲಕ ಅನೇಕ ಬಡಜನತೆಗೆ ಉಚಿತ ಊಟ, ವಸತಿ ಸೇರಿದಂತೆ, ಅನೇಕ ಸೌಲಭ್ಯಗಳನ್ನು ಒದಗಿಸುವಂತಹ ಕೊಡುಗೆಯನ್ನು ನೀಡಿದ್ದಾರೆ ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಚಿತ್ರದುರ್ಗ ಮುರುಘಾ ಮಠದ ಡಾ. ಶಿವಮೂರ್ತಿ ಸ್ವಾಮೀಜಿ, ಶ್ರೀ ಡಾ.ಬಸವಪ್ರಭು ಸ್ವಾಮೀಜಿ, ಮಾಸೂರು ತಿಪ್ಪಾಯಿಕೊಪ್ಪ ಜಂಗಮ ಕ್ಷೇತ್ರ ಮಠದ   ಮಹಾಂತ  ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಈ ಸಂದರ್ಭದಲ್ಲಿ ನಿವೃತ್ತ ವೈದ್ಯ ಡಾ.ಜಗನ್ನಾಥ್, ಡಾ ವಿಶ್ವನಾಥ್,  ಜಿಪಂ ಮಾಜಿ ಸದಸ್ಯೆ ಗೌರಮ್ಮ ಅರುಣ್ ಕುಮಾರ್ ಪೂಜಾರ್,  ರಾಣೇಬೆನ್ನೂರಿನ ಭಾರತಿ ಜಂಬಗಿ, ಬಿಜೆಪಿ ಮುಖಂಡ ಚಂದ್ರಶೇಖರ್ ಪೂಜಾರ್, ಸುರೇಶ್ ಚಂದಪೂರ್, ಹೆಚ್. ನಿಜಗುಣ, ಜಿ.ಕೆ. ಪಂಚಾಕ್ಷರಿ, ಅಡಕಿ ಕುಮಾರ್,  ಜಗದೀಶ್ ನೀಲಗುಂದ, ಶೋಭ ಜಗದೀಶ್ ನೀಲಗುಂದ,  ಅಜಿತ್ ಸಾವಂತ್, ಕರಿಬಸಪ್ಪ ಕಂಚಿಕೇರಿ, ಅರುಣ್ ಕುಮಾರ್, ಗಿರೀಶ್, ಶಿವಯೋಗಿ ಕಂಚಿಕೇರಿ, ಕೆ.ಬಿ. ಪ್ರಕಾಶ್, ಸಂಜೀವ, ಚನ್ನೇಶ್ ರಾಣೇಬೆನ್ನೂರು, ದಿಟೂರು ಕರಿಬಸಪ್ಪ, ರಾಜು ಹುಲಿಗಿನಹೊಳೆ,   ಸುರೇಶ್ ಚಂದಪೂರ್ ಅಡಕಿ ಕುಮಾರ್,  ವೀರೇಶ್, ಗಿರೀಶ್, ಕುಮಾರ್, ಉಲ್ಲಾಸ್, ಷಣ್ಮುಖ, ಜಗದೀಶ್ ಪೂಜಾರ್ ಹಾಗೂ ಬಿಜೆಪಿ ವೀರಣ್ಣ ಹೋಟೆಲ್ ಸ್ನೇಹ ಬಳಗದವರು,  ಸೇರಿದಂತೆ ಇತರರು ಹಾಜರಿದ್ದರು. 

ಕಾಂತರಾಜ್ ಸಂಗಡಿಗರಿಂದ ವಚನ ಗೀತೆಗಳ ಗಾಯನ   ನಡೆಯಿತು. ಆಗಮಿಸಿದ ಭಕ್ತರಿಗೆಲ್ಲ  ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು

error: Content is protected !!