ಆಕರ್ಷಕ ಪಥ ಸಂಚಲನ : ಬಹುಮಾನ

ಆಕರ್ಷಕ ಪಥ ಸಂಚಲನ : ಬಹುಮಾನ

ದಾವಣಗೆರೆ, ಜ.26- ಜಿಲ್ಲಾಡಳಿತದಿಂದ ಭಾನುವಾರ ದಾವಣಗೆರೆಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದ ಪಥ ಸಂಚಲನದಲ್ಲಿ 29 ತಂಡಗಳು ಪಾಲ್ಗೊಂಡಿದ್ದವು, ಪೊಲೀಸ್ ಅಧಿಕಾರಿ ಹೆಚ್.ಬಿ. ಸೋಮಶೇಖರಪ್ಪ ಪಥಸಂಚಲನದ ನೇತೃತ್ವ ವಹಿಸಿದ್ದರು.  ಯುನಿಫಾರಂ ವಿಭಾಗದಲ್ಲಿ ಡಿಎಆರ್ ಪ್ರಥಮ, ಅಗ್ನಿಶಾಮಕ ದಳ ದ್ವಿತೀಯ, ಕಾಲೇಜು ವಿಭಾಗ ಎನ್‌ಸಿಸಿ ಡಿ.ಆರ್.ಎಂ. ವಿಜ್ಞಾನ ಕಾಲೇಜು ಪ್ರಥಮ, ಎ.ಆರ್.ಜಿ ಕಾಲೇಜು ದ್ವಿತೀಯ, ಜಿ.ಎಂ.ಐ.ಟಿ ಕಾಲೇಜು ತೃತೀಯ. ವಿಶೇಷ ವಿಭಾಗ: ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ತಂಡ  ಪ್ರಥಮ, ಸರ್ಟಿಫೈಡ್ ಸ್ಕೂಲ್ ದ್ವಿತೀಯ, ಮೌನೇಶ್ವರಿ ಕಿವುಡ ಮತ್ತು ಮೂಗರ ಶಾಲೆ ತೃತೀಯ, ಪ್ರೌಢಶಾಲಾ ವಿಭಾಗ: ಸೇಂಟ್ ಜಾನ್ಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಪ್ರಥಮ, ರಾಷ್ಟ್ರೋತ್ಥಾನ ಸ್ಕೂಲ್ ದ್ವಿತೀಯ, ಪಿಎಸ್‌ಎಸ್‌ಇಎಂಆರ್ ಶಾಲೆ ತೃತೀಯ. ಪ್ರಾಥಮಿಕ ವಿಭಾಗ  : ಪೊಲೀಸ್ ಪಬ್ಲಿಕ್ ಶಾಲೆ ಪ್ರಥಮ, ಜೈನ್ ಪಬ್ಲಿಕ್ ಶಾಲೆ ದ್ವಿತೀಯ, ಎಸ್‌ಎಸ್‌ಎನ್‌ಪಿಎಸ್ ಶಾಲೆ ತೃತೀಯ ಸ್ಥಾನ ಪಡೆದವು.

error: Content is protected !!