ಅಶೋಕ ಚಿತ್ರ ಮಂದಿರದ ಬಳಿ ಪರ್ಯಾಯ ರಸ್ತೆ

ಅಶೋಕ ಚಿತ್ರ ಮಂದಿರದ ಬಳಿ ಪರ್ಯಾಯ ರಸ್ತೆ

ದಾವಣಗೆರೆ, ಜ.26- ನಗರದ ಅಶೋಕ ಚಿತ್ರ ಮಂದಿರದ ಬಳಿ ಈಗಾಗಲೇ ನಿರ್ಮಾಣವಾಗಿ ರುವ ಅವೈಜ್ಞಾನಿಕ ಕೆಳ ಸೇತುವೆ ಯಿಂದ ಸಂಚಾರಕ್ಕೆ ತೊಂದರೆ ಯಾಗಿದ್ದು, ಪರ್ಯಾಯ ರಸ್ತೆ ನಿರ್ಮಿ ಸುವುದಾಗಿ ಜಿಲ್ಲಾ ಉಸ್ತು ವಾರಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ತಿಳಿಸಿದ್ದಾರೆ.

ಇಂದಿಲ್ಲಿ ಜಿಲ್ಲಾಡಳಿತದ ಗಣರಾಜ್ಯೋತ್ಸವ ಕಾರ್ಯಕ್ರಮದ ನಂತರ ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಅವರು, ಪರ್ಯಾಯ ರಸ್ತೆ ನಿರ್ಮಾಣಕ್ಕೆ ಸುಮಾರು ಎಂಟು ಜನ ಭೂ ಮಾಲೀಕರಿಂದ ಭೂಮಿ ಖರೀದಿಸಿ, 27 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದರು.

ಜಲಸಿರಿ ಯೋಜನೆ ವಿಳಂಬ ಕುರಿತ ಮಾತನಾಡಿದ ಸಚಿವರು, ಇದು ಅತ್ಯುತ್ತಮ ಯೋಜನೆ ಯಾಗಿದ್ದು, ಹಂತ ಹಂತವಾಗಿ ಎಲ್ಲವೂ ಸರಿಯಾಗಲಿದೆ ಎಂದರು.

ಈ ಯೋಜನೆಯಡಿ ಓವರ್ ಹೆಡ್ ಟ್ಯಾಂಕ್, ಹರಿಹರದ ಬಳಿ ತುಂಗಭದ್ರಾ ನದಿ ಬ್ಯಾರೇಜ್, ಪೈಪ್ ಲೈನ್ ಸೇರಿದಂತೆ ಇನ್ನೂ ಹಲವು  ಕಾಮಗಾರಿಗಳು ನಡೆಯುತ್ತಿವೆ ಎಂದರು.

ಮಿನಿ ವಿಧಾನಸೌದ ಉದ್ಘಾಟನೆ ಆಗಿಲ್ಲ ಎಂಬ ಪ್ರಶ್ನೆಗೆ, ದಾವಣಗೆರೆ ತಹಶೀಲ್ದಾರ್ ಕಚೇರಿ ಕಟ್ಟಡದಲ್ಲಿ ಸರ್ವೇ ಇಲಾಖೆ, ಉಪ ವಿಭಾಗಾಧಿಕಾರಿ, ಸಬ್ ರಿಜಿಸ್ಟರ್ ಕಚೇರಿ ಒಂದೇ ಕಡೆ ಕಾರ್ಯ ನಿರ್ವಹಿಸುವಂತೆ ವ್ಯವಸ್ಥೆ ಕಲ್ಪಿಸಬೇಕು ಎಂಬ ಉದ್ದೇಶ ಹೊಂದಲಾಗಿದೆ. ಕಾಮಗಾರಿಗೆ 13 ಕೋಟಿ ರೂ. ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಮಾತನಾಡಿ, ಜಿಲ್ಲೆಯ ಪ್ರವಾಸಿ ತಾಣಗಳಾದ ಸೂಳೆಕೆರೆ, ಕೊಂಡುಕುರಿ, ಹರಿಹರ, ಸಂತೇಬೆನ್ನೂರು, ತೀರ್ಥರಾಮೇಶ್ವರ ಇತರೆ ಸ್ಥಳಿಗಳಿಗೆ ವಿದ್ಯಾರ್ಥಿಗಳನ್ನು ಪ್ರವಾಸಕ್ಕೆ ಕರೆದುಕೊಂಡು ಹೋಗಲು ಕ್ರಮ ಕೈಗೊಳ್ಳಲಾಗುತ್ತಿದೆ. ಮಾ.8ರ ಮಹಿಳಾ ದಿನಾಚರಣೆಯಂದು ದಿನಾಂಕ ಘೋಷಿಸಲಾಗುವುದು ಎಂದರು. ಕೇಂದ್ರ ಬಜೆಟ್‌ನಲ್ಲಿ ಕಳೆದ ವರ್ಷದ ಬೇಡಿಕೆಗಳನ್ನೇ ಈಡೇರಿಸುವಂತೆ ಕೇಳಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಹೆಚ್. ಆಂಜನೇಯ, ಪಾಲಿಕೆ ಮೇಯರ್‌ ಕೆ. ಚಮನ್ ಸಾಬ್, ಉಪ ಮೇಯರ್ ಸೋಗಿ ಶಾಂತ ಕುಮಾರ್, ದೂಡಾ ಅಧ್ಯಕ್ಷ ದಿನೇಶ್ ಕೆ.ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಂಜಪ್ಪ, ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಇತರರಿದ್ದರು.

 

error: Content is protected !!