ದಾವಣಗೆರೆ, ಜ. 24 – ನಗರದ ಪ್ರತಿಷ್ಠಿತ ಕೋ-ಆಪರೇಟಿವ್ ಸೊಸೈಟಿಗಳ ಲ್ಲೊಂದಾದ ಶ್ರೀ ಶ್ರೀಶೈಲ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಆಡಳಿತ ಮಂಡಳಿಗೆ ಇಂದು ನಡೆದ ಚುನಾವಣೆಯಲ್ಲಿ ಸಂಘದ ಹಾಲಿ ಅಧ್ಯಕ್ಷ ಆರ್. ವೆಂಕಟರೆಡ್ಡಿ ಹಾಗೂ ಹಾಲಿ ಉಪಾಧ್ಯಕ್ಷ ವಿ. ಪ್ರಕಾಶ್ ಅವರುಗಳ ನೇತೃತ್ವದ ಗುಂಪಿಗೆ ಭರ್ಜರಿ ಜಯ ಲಭಿಸಿದೆ.
ಆರ್. ವೆಂಕಟರೆಡ್ಡಿ ಮತ್ತು ವಿ. ಪ್ರಕಾಶ್ ಅವರಲ್ಲದೇ, ಸಂಘದ ಹಾಲಿ ನಿರ್ದೇಶಕರುಗಳಾದ ಕೆ.ಬಿ. ನಾಗರಾಜ್, ಬಿಜ್ಜಂ ವೆಂಕಟೇಶ್ವರ ರೆಡ್ಡಿ, ಬಿ. ವೆಂಕಟೇಶ್ವರ ರೆಡ್ಡಿ, ಬಿ. ಯೋಗಿರೆಡ್ಡಿ ಅವರುಗಳು ಪುನರಾಯ್ಕೆಯಾಗಿದ್ದು, ಇದೇ ತಂಡದಿಂದ ಇದೇ ಪ್ರಥಮ ಬಾರಿಗೆ ಸ್ಪರ್ಧೆ ಮಾಡಿದ್ದ ಡಿ. ಬ್ರಹ್ಮಾನಂದ ರೆಡ್ಡಿ ಮತ್ತು ಎನ್. ಆನಂದ್ ಜಯ ಗಳಿಸಿದ್ದಾರೆ.
ಪ್ರತ್ಯೇಕವಾಗಿ ಸ್ಪರ್ಧೆ ಮಾಡಿದ್ದ ಎಸ್. ಮಧುಕೃಷ್ಣ ಮತ್ತು ಬಿ.ಸಿ. ಶಿವಲಿಂಗಪ್ಪ ಪರಾಭವಗೊಂಡಿದ್ದಾರೆ. ಸಂಘದ ಆಡಳಿತ ಮಂಡ ಳಿಯ ಒಟ್ಟು 13 ಸ್ಥಾನಗಳಲ್ಲಿ ಐವರು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದಂತೆ ಎಂಟು ಸ್ಥಾನಗಳಿಗೆ ಸಂಘದ ಕಚೇರಿ ಆವರಣದಲ್ಲಿ ಇಂದು ಚುನಾವಣೆ ನಡೆಯಿತು.
ಸಂಘದ ಹಾಲಿ ನಿರ್ದೇಶಕರುಗಳಾಗಿದ್ದ ಮೇಕಾ ಮುರುಳಿಕೃಷ್ಣ, ಶ್ರೀಮತಿ ಎ. ಶ್ರೀದೇವಿ ತಿಮ್ಮಾರೆಡ್ಡಿ, ಶ್ರೀಮತಿ ವೈ. ಸರೋಜ, ಟಿ.ಹೆಚ್. ರಾಜಶೇಖರ್ ಮತ್ತು ಜೆ.ಆರ್. ರಾಜಾನಾಯಕ ಅವರುಗಳು ಅವಿರೋಧವಾಗಿ ಪುನರಾಯ್ಕೆಯಾಗಿದ್ದಾರೆ.
ದಾವಣಗೆರೆ ಉಪ ವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕರ ಕಚೇರಿಯ ಶ್ರೀಮತಿ ಎಸ್. ಮಂಜುಳಾ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ಸಂಘದ ಮುಖ್ಯ ಕಾರ್ಯನಿರ್ವಾಹಕ ರಾಮನಾರಾಯಣ ರೆಡ್ಡಿ, ವ್ಯವಸ್ಥಾಪಕ ಕೆ. ರಾಘವೇಂದ್ರ ರಾವ್ ಚುನಾವಣಾಧಿಕಾರಿಗಳಿಗೆ ಸಹಕಾರ ನೀಡಿದರು.