ದಾವಣಗೆರೆ, ಜ.22- ವಯೋ ಸಹಜತೆಯಿಂದಾಗಿ ವೈದ್ಯರ ಆರೈಕೆಯಲ್ಲಿ ಬೆಂಗಳೂರಿನ ತಮ್ಮ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರು ನಿನ್ನೆ ನಗರಕ್ಕೆ ಆಗಮಿಸಿದ್ದು, ಇಂದು ಎಂದಿನಂತೆ ತಮ್ಮ ಚಟುವಟಿಕೆಗಳಲ್ಲಿ ನಿರತರಾಗಿದ್ದರು.
ಒಂದೂವರೆ ತಿಂಗಳ ಕಾಲ ವಿಶ್ರಾಂತಿ ಪಡೆದು ನಗರಕ್ಕೆ ಆಗಮಿಸುತ್ತಿದ್ದಂತೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ದರ್ಶನ ಪಡೆದ ಎಸ್ಸೆಸ್, ಚೌಕಿಪೇಟೆಯಲ್ಲಿರುವ ತಮ್ಮ ಶಾಮನೂರು ಕಲ್ಲಪ್ಪ ಅಂಡ್ ಸನ್ಸ್ಗೆ ಭೇಟಿ ನೀಡಿ ಅಂಗಡಿಯ ವ್ಯಾಪಾರದ ವಹಿವಾಟು ಗಮನಿಸಿದರು.
ಇದೇ ಸಂದರ್ಭದಲ್ಲಿ ತಮ್ಮನ್ನು ಭೇಟಿ ಮಾಡಿದ ಈ ಭಾಗದ ವ್ಯಾಪಾರಸ್ಥರು, ಕುಶಲೋಪರಿ ನಡೆಸಿದರು. ದವಸ – ಧಾನ್ಯಗಳನ್ನು ಪರಿಶೀಲಿಸಿದ ಎಸ್ಸೆಸ್, ಗುಣಮಟ್ಟದ
ಬೇಳೆ ಕಾಳುಗಳನ್ನು ಮಾರಾಟ ಮಾಡುವಂತೆ ಸೂಚಿಸಿದರು.