ಚೌಡಯ್ಯ, ವೇಮನರ ಆದರ್ಶಗಳು ಮಾದರಿ

ಚೌಡಯ್ಯ, ವೇಮನರ ಆದರ್ಶಗಳು ಮಾದರಿ

ಶ್ರೀ ಮಹಾಯೋಗಿ ವೇಮನ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಜಯಂತಿಯಲ್ಲಿ ಜಿಲ್ಲಾಧಿಕಾರಿ ಗಂಗಾಧರಸ್ವಾಮಿ

ದಾವಣಗೆರೆ, ಜ.21- ವೇಮನರ ತತ್ವ ಸಂದೇಶಗಳ ಜ್ಞಾನ ಮತ್ತು ಜಾಗೃತಿ ಜನರಲ್ಲಿ ಮೂಡಬೇಕು. ಶಾಂತಿ, ಸಮಾನತೆ ಹಾಗೂ ಸೌಹಾರ್ಧತೆ ಮೂಡಬೇಕೆಂದು  ಜಿಲ್ಲಾಧಿಕಾರಿ ಗಂಗಾಧರಸ್ವಾಮಿ.ಜಿ.ಎಂ  ಹೇಳಿದರು.

 ಮಂಗಳವಾರ ಜಿಲ್ಲಾಡಳಿತ ಭವನ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಜಿಲ್ಲಾ ಗಂಗಾಮತಸ್ಥರ ಸಂಘ, ಶ್ರೀಮಹಾಯೋಗಿ ವೇಮನ ಸಮಾಜ ದಾವಣಗೆರೆ ಇವರ  ಸಹ ಯೋಗದಲ್ಲಿ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ನಡೆದ ಶ್ರೀಮಹಾಯೋಗಿ ವೇಮನ ಹಾಗೂ ನಿಜಶರಣ ಅಂಬಿಗರ ಚೌಡಯ್ಯ ಜಯಂತಿ ಉದ್ಘಾಟಿಸಿ ಮಾತನಾಡಿದರು. 

ನೇರ ನಿಷ್ಟುರವಾದಿಗಳಾಗಿ ಸಮ ಸಮಾಜದ ನಿರ್ಮಾಣವನ್ನು ಪ್ರತಿಪಾದಿಸಿದ  ನಿಜಶರಣ ಅಂಬಿಗರ ಚೌಡಯ್ಯ ಹಾಗೂ  ಮಹಾಯೋಗಿ ವೇಮನರ ಆದರ್ಶಗಳು ಇಂದಿನ ಸಮಾಜಕ್ಕೆ ಮಾದರಿಯಾಗಿದೆ. ನಿಜಶರಣ ಅಂಬಿಗರ ಚೌಡಯ್ಯನವರು 12 ನೇ ಶತಮಾನದಲ್ಲಿಯೇ ಜಾತಿಯತೆ, ಮೌಢ್ಯತೆಯನ್ನು ಖಂಡಿಸಿ ತಮ್ಮ ಹೆಸರನ್ನೇ ಅಂಕಿತವನ್ನಾಗಿಟ್ಟುಕೊಂಡಿರುವ ವಿಭಿನ್ನ ವ್ಯಕ್ತಿತ್ವದ ಶ್ರೇಷ್ಠ ವಚನಕಾರರಾದ ಇವರ ತತ್ವಾದರ್ಶಗಳು ಇಂದಿನ ಸಮಾಜಕ್ಕೆ ಮಾದರಿಯಾಗಿವೆ ಎಂದರು. 

ವೇಮನರ ಮಾತುಗಳು ಬರಿಯ ಮಾತುಗಳಲ್ಲ, ಅವುಗಳು ವೇದವೇ ಆಗಿವೆ. ನಮ್ಮ ಹಿರಿಯರು ವೇಮನರ ಕುರಿತು ವೇದಾತೀತನು ವೇಮನು ಕಾಣಾ ವೇಮನ ಮಾತದು, ವೇದವು ಕಾಣಾ ಎಂದು ಹಾಡಿದ್ದಾರೆ.

ನಿಜಶರಣ ಅಂಬಿಗರ ಚೌಡಯ್ಯ, ಅಲ್ಲಮಪ್ರಭು, ಬಸವಣ್ಣರ ಕಾಲದಲ್ಲಿ ದಿಟ್ಟತನದಲ್ಲಿ ಸಮಾಜದ ಓರೆ ಕೋರೆಗಳನ್ನು ತಿದ್ದುವಲ್ಲಿ ಸಫಲರಾಗಿದ್ದಾರೆ. ಇವರ ವಚನ ಸಂಸ್ಕೃತಿಯನ್ನು ಉಳಿಸಿಕೊಳ್ಳುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.

ಮಾರುತಿ ಸಾಲಿಮಠ ಅವರು ನಿಜಶರಣ ಅಂಬಿಗರ ಚೌಡಯ್ಯನವರ ಕುರಿತು, ಸುಮತಿ ಜಯಪ್ಪ ಅವರು ಶ್ರೀ ಮಹಾಯೋಗಿ ವೇಮನವರ ಕುರಿತು ಉಪನ್ಯಾಸ ನೀಡಿದರು.

ಪಾಲಿಕೆ ಮೇಯರ್ ಕೆ. ಚಮನ್ ಸಾಬ್, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಅಪರ ಜಿಲ್ಲಾಧಿಕಾರಿ ಪಿ.ಎನ್ ಲೋಕೇಶ್, ವಕೀಲ ಎಸ್. ಪರಮೇಶ್‌, ಸಮಾಜದ ಮುಖಂಡರಾದ ಹನುಮಂತಪ್ಪ, ಮಂಜಣ್ಣ  ಹಾಗೂ ಇನ್ನಿತರರು ಉಪಸ್ಥಿತರಿದ್ದರು.

error: Content is protected !!