ಪಾಲಿಕೆ ವ್ಯಾಪ್ತಿಯ ದುರಸ್ತಿ ಕಾಮಗಾರಿ ಪರಿಶೀಲಿಸಿದ ಸವಿತಾ ಹುಲ್ಮನಿ ಗಣೇಶ್‌

ಪಾಲಿಕೆ ವ್ಯಾಪ್ತಿಯ ದುರಸ್ತಿ ಕಾಮಗಾರಿ ಪರಿಶೀಲಿಸಿದ ಸವಿತಾ ಹುಲ್ಮನಿ ಗಣೇಶ್‌

ದಾವಣಗೆರೆ, ಜ. 20 – ಮಹಾನಗರ ಪಾಲಿಕೆಯ ವಿವಿಧ ವಾರ್ಡ್‌ಗಳ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ದುರಸ್ತಿಪಡಿಸುವ ಕಾಮಗಾರಿಗಳನ್ನು ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಸವಿತಾ ಹುಲ್ಮನಿ ಗಣೇಶ್ ಭೇಟಿ ನೀಡಿ, ಪ್ರಗತಿ  ಪರಿಶೀಲಿಸಿದರು. 

ಪಾಲಿಕೆ ವ್ಯಾಪ್ತಿಯ 45 ವಾರ್ಡ್‌ಗಳಲ್ಲಿನ ಗುಂಡಿ ದುರಸ್ತಿಗೊಳಿಸಲು 4 ಕಾಮಗಾರಿಗಳನ್ನು  ಟೆಂಡರ್ ನೀಡಿದ್ದು, ದುರಸ್ತಿ ಕಾಮಗಾರಿ ನಡೆಯುತ್ತಿರುವ ವಿವಿಧ ವಾರ್ಡ್‌ಗಳಲ್ಲಿ ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚಿಸುವ ಕಾಮಗಾರಿಗಳನ್ನು ಕೈಗೊಂಡಿರುವ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟ ಮತ್ತು ಪ್ರಗತಿ ಪರಿಶೀಲನೆಯನ್ನು ನಡೆಸಲಾಯಿತು. 

ನಗರದ ವಿವಿಧ ವಾರ್ಡ್‌ಗಳಲ್ಲಿ ಅಡ್ಡ ರಸ್ತೆಗಳು ಮುಖ್ಯ ರಸ್ತೆಗೆ ಸಂಪರ್ಕಿಸುವ ಅಪ್ರೋಚ್‌ ಗಳಲ್ಲಿ ಟಾರ್ ಹಾಕುವ  ಕಾಮಗಾರಿ ಪರಿಶೀಲನೆ ನಡೆಸಿದರು. ಪ್ರತಿ ವಾರ್ಡ್‌ವಾರು ಗುಂಡಿ ಬಿದ್ದಿರುವ ರಸ್ತೆಗಳ ಪಟ್ಟಿಯ ಪ್ರಕಾರ 10 ದಿನಗಳಲ್ಲಿ  ಪಟ್ಟಿ ಮಾಡಿರುವ ಎಲ್ಲಾ ಗುಂಡಿಗಳನ್ನು ಮುಚ್ಚಿ ಸಲೂ ಅಗತ್ಯವಿರುವ ಮಾನವ ಸಂಪನ್ಮೂಲ ಮತ್ತು ಯಂತ್ರೋಪಕರಣ     ಗಳೊಂದಿಗೆ ಈಗ ನಡೆಸುತ್ತಿರುವ ಕಾಮಗಾರಿಯ ವೇಗವನ್ನು ಮೂರು ಪಟ್ಟು ಹೆಚ್ಚಿಸಿ ತ್ವರಿತವಾಗಿ ಕಾರ್ಯನಿರ್ವಹಿಸಲು ಗುತ್ತಿಗೆದಾರರಿಗೆ ಸೂಚಿಸಿದರು ಮತ್ತು ಮಹಾನಗರ ಪಾಲಿಕೆ ತಾಂತ್ರಿಕ ಅಭಿಯಂತರರಿಗೆ ಕೂಡಲೇ ಗುಣಮಟ್ಟದೊಂದಿಗೆ  ತ್ವರಿತಗತಿಯಲ್ಲಿ ದುರಸ್ತಿ ಕಾಮಗಾರಿ ಪೂರೈಸಿ, ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗುವಂತೆ ಕ್ರಮಕೈಗೊಳ್ಳಲು ಆದೇಶಿಸಿದರು. ಈ ಸಂದರ್ಭದಲ್ಲಿ ಸಾರ್ವಜನಿಕರಾದ ಜೆ.ಪಿ. ಮನೋಜ್, ಸುನೀತ, ರೇವಣಸಿದ್ದನಗೌಡ, ಕೆ. ನಂದಗೋಪಾಲ್, ಆರ್. ಆನಂದ್, ಶಂಕರಮೂರ್ತಿ, ಬಸವರಾಜಪ್ಪ ಹಾಜರಿದ್ದರು.

error: Content is protected !!