ದಾವಣಗೆರೆ, ಜ. 16- ನಗರದ ನಮನ ಅಕಾಡೆಮಿಯ ವಿದ್ಯಾರ್ಥಿಗಳು ಇದೇ ದಿನಾಂಕ 19ರಂದು ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯಲಿರುವ 47ನೇ ಅಂತರರಾಷ್ಟ್ರೀಯ ಉತ್ಸವದಲ್ಲಿ ಕನ್ನಡದ ಕಂಪನ್ನು ಪಸರಿಸುವ ನೃತ್ಯ ಪ್ರದರ್ಶಿಸಲಿದ್ದಾರೆ.
ಗುರುಗಳಾದ ವಿದುಷಿ ಶ್ರೀಮತಿ ಮಾಧವಿ ಡಿ.ಕೆ. ಹಾಗೂ ಶಿಷ್ಯಂದಿರಾದ ಬಿ.ಎಸ್. ಯಶಸ್ವಿನಿ, ದೀಕ್ಷ ಯು. ಬೆಳ್ಳೂಡಿ, ಅಮೂಲ್ಯ ಯು. ಬೆಳ್ಳೂಡಿ, ಕೆ.ಎಸ್. ಸಿಂಚನ, ಬಿ.ಎಸ್. ಸಾನ್ವಿ, ಪ್ರಜ್ಞ ಶ್ರೀಮಠ, ಆದ್ಯತಾ ಎಂ. ಕುಲಕರ್ಣಿ, ಎನ್.ಪಿ. ಪ್ರನ್ವಿತ, ಎಂ. ಮಂದಿರ, ಜಿ.ವಿ. ಪ್ರಣತಿ, ಹೆಚ್.ಎಂ. ರಕ್ಷ, ಎಂ. ಪೂರ್ವಿಕ, ವಿ. ಸ್ಪೂರ್ತಿ ಸಾಯಿ, ಜಿ.ಬಿ. ಕಾವ್ಯ ಅವರು ಭಾಗವಹಿಸಲಿದ್ದು, ಈ ಉತ್ಸವದಲ್ಲಿ ಬೇರೆ ಬೇರೆ ದೇಶದ ತಂಡಗಳು ಭಾಗವಹಿಸಲಿವೆ.
ನಮನ ಅಕಾಡೆಮಿಯ ಕಲಾವಿದರ ತಂಡ ಹಾಗೂ ಪೋಷಕರು ನಾಳೆ ದಿನಾಂಕ 17ರಂದು ಬೆಂಗಳೂರಿನಿಂದ ತಮ್ಮ ಪ್ರಯಾಣ ಪ್ರಾರಂಭಿಸಲಿದ್ದಾರೆ.