ದಾವಣಗೆರೆ, ಜ. 21- ಜಿಲ್ಲಾ ಸಹಕಾರ ಒಕ್ಕೂಟದ ಅಧ್ಯಕ್ಷರಾಗಿ ಮಲೇಬೆನ್ನೂರಿನ ಸಿರಿಗೆರೆ ರಾಜಣ್ಣ ಮತ್ತು ಉಪಾಧ್ಯಕ್ಷರಾಗಿ ಹೊನ್ನಾಳಿ ತಾಲ್ಲೂಕು ಬೆನಕನಹಳ್ಳಿಯ ಶ್ರೀಮತಿ ಮಂಜುಳಾ ಹೆಚ್.ಜಿ. ಗಣೇಶ್ ಅವರು ಮಂಗಳವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ದಾವಣಗೆರೆ-ಹರಿಹರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿನ ಸಮುದಾಯ ಭವನದಲ್ಲಿರುವ ಸಹಕಾರ ಒಕ್ಕೂಟದ ಕಛೇರಿಯಲ್ಲಿ ಈ ಆಯ್ಕೆ ಪ್ರಕ್ರಿಯೆ ನಡೆಯಿತು. ಸಹಕಾರ ಸಂಘಗಳ ಸಹಾಯಕ ನಿಬಂಧಕರಾದ ಶ್ರೀಮತಿ ಮಂಜುಳಾ ಅವರು ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಸೂಚನೆ ಮೇರೆಗೆ ಒಕ್ಕೂಟದ ನಿರ್ದೇಶಕರಾದ ಜೆ.ಆರ್. ಷಣ್ಮುಖಪ್ಪ, ಆರ್.ಜಿ. ಶ್ರೀನಿವಾಸಮೂರ್ತಿ, ಹೆಚ್.ಆರ್. ಸಿದ್ದೇಶ್, ಕೆ.ಜಿ. ಸುರೇಶ್, ಎಸ್. ದೀಪಕ್ ಪಟೇಲ್, ಕೆಂಚನಹಳ್ಳಿ ಮಹೇಶ್, ಕೆಂಗಲಹಳ್ಳಿ ಷಣ್ಮುಖಪ್ಪ, ಎಸ್.ಜಿ. ಸತೀಶ್, ಎಂ.ಜಿ. ಷಣ್ಮುಖಪ್ಪ, ಶ್ರೀಮತಿ ನಿರ್ಮಲ ಎನ್.ವಿ. ಸುಭಾಷ್ ಚಂದ್ರ, ಇ. ಬಸವರಾಜ್ ಈ ವೇಳೆ ಹಾಜರಿದ್ದು, ನೂತನ ಅಧ್ಯಕ್ಷ-ಉಪಾಧ್ಯಕ್ಷರನ್ನು ಅವಿರೋಧವಾಗಿ ಆಯ್ಕೆ ಮಾಡಿದರು. ಒಕ್ಕೂಟದ ಪದನಿಮಿತ್ತ ನಿರ್ದೇಶಕರೂ ಆದ ಸಹಕಾರ ಸಂಘಗಳ ಉಪನಿಬಂಧಕರಾದ ಟಿ. ಮಧು ಶ್ರೀನಿವಾಸ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಲಪ್ಪ ಕೋಡಿಹಳ್ಳಿ, ವ್ಯವಸ್ಥಾಪಕ ಕೆ.ಎಂ. ಜಗದೀಶ್, ಜಿಲ್ಲಾ ಸಹಕಾರ ಶಿಕ್ಷಕ ಕೆ.ಹೆಚ್. ಸಂತೋಷ್‌ಕುಮಾರ್, ಕಛೇರಿಯ
ವಿ. ರಂಗನಾಥ್, ಕೆ.ಆರ್. ಸ್ವಾಮಿ ಈ ವೇಳೆ ಹಾಜರಿದ್ದರು.