ದಾವಣಗೆರೆ, ಜ. 12- ಸ್ವಾಮಿ ವಿವೇಕಾನಂದರ ಹುಟ್ಟುಹಬ್ಬದ `ರಾಷ್ಟ್ರೀಯ ಯುವ ದಿನಾಚರಣೆ’ ಅಂಗವಾಗಿ ನಗರದಲ್ಲಿ ಭಾನುವಾರ 5 ಕಿಲೋ ಮೀಟರ್ ಸಾಮೂಹಿಕ ಮ್ಯಾರಥಾನ್ ಆಯೋಜಿಸಲಾಗಿತ್ತು. ನಗರದ ಜಯದೇವ ವೃತ್ತದಿಂದ ಓಟ ಪ್ರಾರಂಭಿಸಿ ಎಂ.ಸಿ.ಸಿ. ಎ ಬ್ಲಾಕ್‌ನ ರಾಮಕೃಷ್ಣ ಮಿಷನ್‌ನಲ್ಲಿ ಕೊನೆಗೊಂಡಿತು. ರಾಮಕೃಷ್ಣ ಮಿಷನ್ ಕಾರ್ಯದರ್ಶಿ ಸ್ವಾಮಿ ತ್ಯಾಗೀಶ್ವರಾನಂದ ಅವರು ಓಟಕ್ಕೆ ಚಾಲನೆ ನೀಡಿದರು. ಇದೇ ವೇಳೆ ವಿವೇಕಾನಂದರ ವೇಷಧಾರಿ ಮಕ್ಕಳಿಗೆ ಪುರಸ್ಕರಿಸಲಾಯಿತು.
January 13, 2025