ಕಸ ಮುಕ್ತ ನಗರವನ್ನಾಗಿಸಲು ಕ್ರಿಯಾಯೋಜನೆ ತಯಾರಿಸುವಂತೆ ಸಂಸದೆ ಡಾ. ಪ್ರಭಾ ನಿರ್ದೇಶನ

ಕಸ ಮುಕ್ತ ನಗರವನ್ನಾಗಿಸಲು ಕ್ರಿಯಾಯೋಜನೆ  ತಯಾರಿಸುವಂತೆ ಸಂಸದೆ ಡಾ. ಪ್ರಭಾ ನಿರ್ದೇಶನ

ಜೆ.ಎಚ್. ಪಟೇಲ್ ಬಡಾವಣೆಯಲ್ಲಿ  ಸ್ವಚ್ಛ ಗೃಹ ಕಲಿಕಾ ಕೇಂದ್ರದ ಉದ್ಘಾಟನೆ

ದಾವಣಗೆರೆ, ಜ. 9-  ದಾವಣಗೆ ರೆಯನ್ನು ಕಸ ಮುಕ್ತ ನಗರವನ್ನಾಗಿಸುವ ಸಂಬಂಧ ಕ್ರಿಯಾಯೋಜನೆ ತಯಾರಿಸು ವಂತೆ ಲೋಕಸಭಾ ಸದಸ್ಯರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಮಹಾನಗರ ಪಾಲಿಕೆಗೆ ನಿರ್ದೇಶನ ನೀಡಿದರು.

ಇಲ್ಲಿನ ಜೆ.ಎಚ್. ಪಟೇಲ್ ಬಡಾವಣೆ ಯಲ್ಲಿ ನೂತನವಾಗಿ ನಿರ್ಮಾಣಗೊಂಡಿ ರುವ ಸ್ವಚ್ಛ ಗೃಹ ಕಲಿಕಾ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.  

ದಾವಣಗೆರೆಯಲ್ಲಿ ನಿರ್ಮಾಣ ಗೊಂಡಿರುವ ಈ ಕೇಂದ್ರ ದೇಶದಲ್ಲಿಯೇ ಮೂರನೇಯದಾಗಿದೆ. ಆಂಧ್ರಪ್ರದೇಶ ಹಾಗೂ ಬೆಂಗಳೂರಿನ ನಂತರ ದಾವಣ ಗೆರೆಯಲ್ಲಿ ನಿರ್ಮಾಣವಾಗಿರುವುದು ಹೆಗ್ಗಳಿಕೆ ಯಾಗಿದೆ ಎಂದು ಅವರು ಹೇಳಿದರು.

ಧೂಳು ಮುಕ್ತ ನಗರ ನಿರ್ಮಾಣ ನಿಟ್ಟಿನಲ್ಲಿ ಈಗಾಗಲೇ ಎಲ್ಲೆಡೆ ಸಿಮೆಂಟ್ ರಸ್ತೆಗಳಾಗಿವೆ. ಇನ್ನು ಕಸ ಸಂಗ್ರಹ ಹಾಗೂ ವಿಲೇವಾರಿ ತುಂಬಾ ಚೆನ್ನಾಗಿ ಆಗುತ್ತಿದೆ. ಇದರ ಜೊತೆಗೆ ಕಸವನ್ನು ರಸ ಮಾಡುವ ಪ್ರಕ್ರಿಯೆ ಆರಂಭವಾಗಿದೆ. ಆವರಗೊಳ್ಳ ದಲ್ಲಿ 200 ಟಿಪಿಡಿ ಸಾಮರ್ಥ್ಯದ ಕಸ ವಿಲೇವಾರಿ ಘಟಕ ನಿರ್ಮಾಣ ಮಾಡ ಲಾಗಿದ್ದು, ಇಲ್ಲಿ ಗೊಬ್ಬರ ತಯಾರು ಮಾಡಿ ರೈತರಿಗೆ ಕೊಡುವ ಸಿದ್ಧತೆ ನಡೆಯುತ್ತಿದೆ ಎಂದು ಸಂಸದರು ತಿಳಿಸಿದರು.

ಮನೆ, ಸಂಘ – ಸಂಸ್ಥೆಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ವಿಲೇವಾರಿಗೆ ಮಾರ್ಗಸೂಚಿ ತಯಾರಿಸಬೇಕು. ಪ್ರತಿ ಮನೆಯಲ್ಲಿ ಗೊಬ್ಬರ ತಯಾರು ಮಾಡಬೇಕು. ಹೀಗೆ ತಯಾರಿಸಿದ ಗೊಬ್ಬರ ಕೈತೋಟಕ್ಕೆ ಬಳಕೆ ಆಗಬೇಕು. ಸ್ವಯಂ ಸೇವಕರು, ಹೋಟೆಲ್ ಮಾಲೀಕರನ್ನು ಕರೆಯಿಸಿ ತ್ಯಾಜ್ಯದಿಂದ ಗೊಬ್ಬರ ತಯಾರು ಮಾಡುವ ಕುರಿತು ತರಬೇತಿ ನೀಡಬೇಕು ಎಂದು ಅವರು ಸಲಹೆ ನೀಡಿದರು.

ಈ ಕೇಂದ್ರ ಪ್ರವಾಸಿ ತಾಣವಾಗುವುದು ಬೇಡ. ಇದನ್ನು ತರಬೇತಿಗೆ ಬಳಕೆ ಮಾಡ ಬೇಕು. ಸಂಘ – ಸಂಸ್ಥೆಗಳ ಪದಾಧಿಕಾರಿ ಗಳು, ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ತರಬೇತಿ ನೀಡಬೇಕು. ಇಲ್ಲಿ ಹಲವು ವಿಧದ ಗೊಬ್ಬರ ತಯಾರಿಕಾ ಘಟಕಗಳಿವೆ. ಆಸಕ್ತರು ತಮ್ಮ ಅಗತ್ಯಕ್ಕೆ ಅನು ಗುಣವಾಗಿ ಘಟಕ ಪಡೆಯಬಹುದು. ಇಬ್ಬರು ತರಬೇತಿ ನೀಡುವ ಸಿಬ್ಬಂದಿಯನ್ನು ಇಲ್ಲಿ ನಿಯೋಜಿಸಬೇಕು ಎಂದು ಸೂಚಿಸಿದರು.

ನಗರದಲ್ಲಿ ನಿತ್ಯ 190 ಟನ್ ಕಸ ಸಂಗ್ರಹವಾಗುತ್ತಿದೆ. ಈ ಪೈಕಿ 90 ಟನ್ ಹಸಿ ಕಸ ಸಿಗುತ್ತಿದೆ. ಇದು ಭೂಮಿ ಸೇರುತ್ತಿದ್ದು, ಇದನ್ನು ಗೊಬ್ಬರ ಮಾಡಲು ಸಾಕಷ್ಟು ಅವಕಾಶ ಇದೆ. ಈ ಅವಕಾಶವನ್ನು ಪ್ರತಿಯೊಬ್ಬರೂ ಸರಿಯಾಗಿ ಉಪಯೋ ಗಿಸಿಕೊಂಡರೆ ಸ್ವಚ್ಛ ನಗರಗಳ ಪಟ್ಟಿಯಲ್ಲಿ ದಾವಣಗೆರೆ 5ರೊಳಗೆ ಸ್ಥಾನ ಪಡೆಯ ಬಹುದಾಗಿದೆ. ಇದೀಗ ದಾವಣಗೆರೆ ನಗರ ಸ್ವಚ್ಛತೆಯಲ್ಲಿ ದೇಶದಲ್ಲಿ 169 ಮತ್ತು ರಾಜ್ಯದಲ್ಲಿ 4 ನೇ ಸ್ಥಾನ ಇದೆ. ಖಾಲಿ ನಿವೇಶನದಲ್ಲಿ ಕಸ ಹಾಕುವುದು ತಪ್ಪಬೇಕು. ಕಸ ವಿಲೇವಾರಿಗೆ ಎಲ್ಲರೂ ಕೈಜೋಡಿಸಬೇಕು ಎಂದು ಡಾ. ಪ್ರಭಾ ಅವರು ಕೇಳಿಕೊಂಡರು.

ಮಹಾನಗರ ಪಾಲಿಕೆ ಮಹಾಪೌರರಾದ ಕೆ.ಚಮನ್ ಸಾಬ್ ಮಾತನಾಡಿ, ದಾವಣಗೆರೆಯ ಲ್ಯಾಂಡ್‌ ಮಾರ್ಕ್‌ಗಳಲ್ಲಿ ಸ್ವಚ್ಛ ಕಲಿಕಾ ಕೇಂದ್ರವೂ ಒಂದು. ಜಿಲ್ಲಾ ಉಸ್ತುವಾರಿ ಸಚಿವ ಶಾಮನೂರು ಮಲ್ಲಿಕಾರ್ಜುನ್ ಅವರ ಪ್ರೋತ್ಸಾಹದಿಂದ ಇದು ಕಾರ್ಯರೂಪಕ್ಕೆ ಬಂದಿದೆ. ನಗರಾಭಿವೃದ್ಧಿಯ ಪರಿಣಾಮ ಇಂದು ಭೂಮಿ ಬೆಲೆ ಏರಿಕೆ ಆಗಿದೆ. ಆಶ್ರಯ ಮನೆಗಳ ಕ್ರಾಂತಿ ಆಗಿದೆ. ಕುಡಿಯುವ ನೀರಿಗೆ ಬ್ಯಾರೇಜ್ ನಿರ್ಮಾಣ ಆಗಿದೆ. ಶಾಮನೂರು ಶಿವಶಂಕರಪ್ಪ ಹಾಗೂ ಎಸ್‌ಎಸ್.ಮಲ್ಲಿಕಾರ್ಜುನ್ ಅವರ ದೂರದೃಷ್ಟಿ ಅಭಿವೃದ್ಧಿಗೆ ಪೂರಕವಾಗಿದೆ. ಇದರೊಟ್ಟಿಗೆ ದಾವಣಗೆರೆ ಲೋಕಸಭಾ ಕ್ಷೇತ್ರದ ಸಮಸ್ಯೆಗಳು ಇಪ್ಪತ್ತು ವರ್ಷಗಳಿಂದ ಇದ್ದವು. ಪ್ರಭಾ ಮಲ್ಲಿಕಾರ್ಜುನ್ ಅವರು ಈ ಬಗ್ಗೆ ಲೋಕಸಭೆಯಲ್ಲಿ ಧ್ವನಿ ಎತ್ತುತ್ತಿದ್ದಾರೆ ಎಂದು ಹೇಳಿದರು.

ನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ಮಾತನಾಡಿ, ಆಜಾದ್, ಬಾಷಾ ನಗರ ಸೇರಿ ಹಲವೆಡೆ ಕಸ ನಿರ್ವಹಣೆ ಸರಿಯಾಗಿ ಆಗುತ್ತಿಲ್ಲ. ಇಂಥಹ ಬಡಾವಣೆಗಳನ್ನು ಗಮನದಲ್ಲಿ ಇಟ್ಟುಕೊಂಡು ಸ್ಥಳೀಯ ಪಾಲಿಕೆ ಸದಸ್ಯರ ಸಹಕಾರದಿಂದ ಇಡೀ ನಗರವನ್ನು ಸಂಪೂರ್ಣ ಸ್ವಚ್ಛ ಮಾಡುವ ಚಿಂತನೆ ಇಟ್ಟುಕೊಳ್ಳಲಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಮೇಯರ್ ಸೋಗಿ ಶಾಂತಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಸವಿತಾ ಗಣೇಶ್ ಹುಲ್ಮನಿ, ಶ್ರೀಮತಿ ಆಶಾ, ಸುಧಾ ಮಂಜುನಾಥ್ ಇಟ್ಟಿಗುಡಿ, ಸದಸ್ಯರುಗಳಾದ ಗಡಿಗುಡಾಳ್ ಮಂಜುನಾಥ್, ಎಲ್.ಎಂ.ಸಾಗರ್, ಪಾಲಿಕೆ ನಾಮನಿರ್ದೇಶನ ಸದಸ್ಯ ಕಲ್ಲಳ್ಳಿ ರುದ್ರೇಶ್ ಇತರರು ಉಪಸ್ಥಿತರಿದ್ದರು.

error: Content is protected !!