ಸೌಹಾರ್ದ ಸಹಕಾರಿಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾಗಿ ಎಸ್.ಟಿ. ವೀರೇಶ್ ಆಯ್ಕೆ

ಸೌಹಾರ್ದ ಸಹಕಾರಿಗಳ ಒಕ್ಕೂಟದ ಜಿಲ್ಲಾಧ್ಯಕ್ಷರಾಗಿ ಎಸ್.ಟಿ. ವೀರೇಶ್ ಆಯ್ಕೆ

ದಾವಣಗೆರೆ, ಜ.9- ಜಿಲ್ಲಾ ಸೌಹಾರ್ದ ಸಹಕಾರಿ ಗಳ ಒಕ್ಕೂಟದ ಅಧ್ಯಕ್ಷರಾಗಿ ಮಾಜಿ ಮೇಯರ್ ಎಸ್.ಟಿ. ವೀರೇಶ್ ಹಾಗೂ ಉಪಾಧ್ಯಕ್ಷರಾಗಿ ರುದ್ರೇಗೌಡರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.  ಅಧ್ಯಕ್ಷರಾಗಿ ಆಯ್ಕೆಯಾದ ವೀರೇಶ್ ಮಾತನಾಡಿ, ಜಿಲ್ಲಾ ಸೌಹಾರ್ದ ಸಹಕಾರಿಗಳ ಒಕ್ಕೂಟಕ್ಕೆ ತನ್ನದೇ ಆದ ಮಹತ್ವ ಮತ್ತು ಹಿನ್ನೆಲೆ ಇದೆ. ಸಹಕಾರಿಗಳ ಹಿತ ಕಾಪಾಡಲು ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ. ಯಾರಿಗೂ ಚ್ಯುತಿ ಬರದಂತೆ ಕೆಲಸ ಮಾಡುತ್ತೇನೆ ಎಂದು ಹೇಳಿದರು. 

ಸಹಕಾರ ಕ್ಷೇತ್ರದ ವ್ಯಾಪ್ತಿ ದೊಡ್ಡದು. ಸಹಕಾರಿಗಳ ಹಿತ ಕಾಪಾಡಬೇಕಾದ ಅವಶ್ಯಕತೆ ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಹಕಾರ ಕ್ಷೇತ್ರಕ್ಕೆ ನೆರವು ನೀಡುತ್ತಿವೆ. ಇದು ಸದ್ಭಳಕೆಯಾಗಬೇಕು. ಈ ನಿಟ್ಟಿನಲ್ಲಿ ಅಧ್ಯಕ್ಷನಾಗಿ ಉತ್ತಮ ಕೆಲಸ ಮಾಡಲು, ಸಹಕಾರಿಗಳ ಬದುಕು ಹಸನಾಗಿಸಲು ದುಡಿಯುತ್ತೇನೆ. ನನ್ನ ಮೇಲೆ ಇಟ್ಟಿರುವ ವಿಶ್ವಾಸ ಉಳಿಸಿಕೊಳ್ಳುತ್ತೇನೆ ಎಂದು ವೀರೇಶ್ ತಿಳಿಸಿದರು.

ಈ ವೇಳೆ ಸಹಕಾರಿ ಭಾರತಿ ರಾಜ್ಯಾಧ್ಯಕ್ಷ ಮಾಗನೂರು ಪ್ರಭುದೇವ, ಕರಾವಳಿ ಸಹಕಾರಿ ಅಧ್ಯಕ್ಷ ಉಮೇಶ್ ಶೆಟ್ರು, ಮನಿ ಪ್ಲ್ಯಾಂಟ್ ಸೌಹಾರ್ದ ಸಹಕಾರಿಯ ನಾಗರಾಜ್, ಜಿಎಂ ಸೌಹಾರ್ದ ಸಹಕಾರಿಯ ಎ.ಸಿ. ಬಸವರಾಜ್, ಸನ್ಮತಿ ಸಹಕಾರಿಯ ಪಾಲಾಕ್ಷಪ್ಪ, ಆಂಜನೇಯ ಸೌಹಾರ್ದ ಸಹಕಾರಿಯ ಚಂದ್ರಶೇಖರ್, ದಾನಮ್ಮ ಸೌಹಾರ್ದ ಸಹಕಾರಿಯ ರಾಜು ಮತ್ತಿತರರು ಇದ್ದರು.

error: Content is protected !!