ಸಮಾಜದಲ್ಲಿ ಸಂಘ – ಸಂಸ್ಥೆಗಳ ಸೇವೆ ಶ್ಲ್ಯಾಘನೀಯ

ಸಮಾಜದಲ್ಲಿ ಸಂಘ – ಸಂಸ್ಥೆಗಳ ಸೇವೆ ಶ್ಲ್ಯಾಘನೀಯ

ಹರಪನಹಳ್ಳಿ : ಜೆಸಿಐ ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಲೇಪಾಕ್ಷಪ್ಪ

ಹರಪನಹಳ್ಳಿ, ಜ. 10 – ಸಮಾಜದಲ್ಲಿ ದೀನ-ದಲಿತರು, ಶ್ರಮಿಕರು, ಅಶಕ್ತರು ಇದ್ದು, ಅನೇಕರಿಗೆ ವಿವಿಧ ರೀತಿಯ ಸಹಾಯ ಹಸ್ತ ಬೇಕಾಗಿರುತ್ತದೆ. ಅದಕ್ಕಾಗಿ ಜೆಸಿಐ ನಂತಹ ಸಂಘ-ಸಂಸ್ಥೆಗಳು ಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್. ಲೇಪಾಕ್ಷಪ್ಪ ಹೇಳಿದರು. 

ಪಟ್ಟಣ ಸಮೀಪದ ಕಾಯಕದಳ್ಳಿ ಮಯೂರಿ ಫಾರ್ಮ ಹೌಸ್‌ನಲ್ಲಿ ಜರುಗಿದ 2025ರ ಜೆಸಿಐ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಅನೇಕ ಸಂದರ್ಭಗಳಲ್ಲಿ ವಿವಿಧ ಸಂಘ-ಸಂಸ್ಥೆಗಳು ಸಮಾಜಕ್ಕೆ ನೆರವು ನೀಡುವುದನ್ನು ನೋಡುತ್ತೇವೆ. ಈ ನಿಟ್ಟಿನಲ್ಲಿ ಸ್ಥಳೀಯ ಜೆಸಿಐ ಸಂಸ್ಥೆಯು ಸಹ ವಿದ್ಯಾರ್ಥಿಗಳು ಯುವಜನರಿಗೆ ತರಬೇತಿಯನ್ನು ಕೊಡುವುದರ ಜೊತೆಗೆ ನಾಯಕರನ್ನೂ ತಯಾರು ಮಾಡಲಿ ಎಂದು ಆಶಯ ವ್ಯಕ್ತಪಡಿಸಿದರು.

ಜೆಸಿಐ ವಲಯಾಧ್ಯಕ್ಷ ಗೌರೀಶ್ ಭಾರ್ಗವ್ ಮಾತನಾಡಿ, ಜೆಸಿಐ ಸಂಸ್ಥೆಯು ಮಾತನಾಡುವ ಕಲೆ, ಸಂಘಟನೆ ವ್ಯವಹಾರಿಕ ಜಾಣ್ಮೆ, ಧೈರ್ಯ  ಮುಂತಾದವುಗಳನ್ನು ಕಲಿಸಿಕೊಡುವ ಯುವಜನತೆಯನ್ನು ಅಭಿವೃದ್ದಿಯತ್ತ ಕೊಂಡೊಯ್ಯುವ ಸಂಸ್ಥೆಯಾಗಿದೆ. ಈ ನಿಟ್ಟಿನಲ್ಲಿ ಹರಪನಹಳ್ಳಿ ಘಟಕವು ತನ್ನ 25 ವರ್ಷಗಳ ಸೇವೆಯಲ್ಲಿ ಜನೋಪಯೋಗಿ ಕೆಲಸವನ್ನೂ ಮಾಡುತ್ತಾ ಬಂದಿದೆ ಎಂದರು.

ಡಾ. ಪ್ರಿಯಾಂಕ ರವಿ  ಅಧಿಕಾರ್ ಅವರು ಮಾತನಾಡಿ, ತಮ್ಮ ಅವಧಿಯಲ್ಲಿ ವಿದ್ಯಾರ್ಥಿಗಳು ಯುವಜನರಿಗೆ ತರಬೇತಿ, ರಕ್ತದಾನ ಶಿಬಿರ, ಗಿಡ ನೆಡುವ ಕಾರ್ಯಕ್ರಮ, ಸ್ವಚ್ಫತಾ ಕಾರ್ಯಕ್ರಮ ಗಳನ್ನು ಹಿರಿಯ ಜೆಸಿಐಗಳ ಸಹಕಾರ ಹಾಗೂ ಪದಾಧಿಕಾರಿಗಳ ಸಹಕಾರದಿಂದ ಮಾಡಲು ಸಾಧ್ಯವಾಯಿತು ಎಂದರು.

ವಲಯ ಉಪಾಧ್ಯಕ್ಷ ಆರ್. ವಿನೀತ್, ಪೂರ್ವ ವಲಯಾಧ್ಯಕ್ಷ ಶಿವಕುಮಾರ್, ಜೇಸಿ ಪರಶುರಾಂ ಚಲವಾದಿ ಮಾತನಾಡಿದರು. ಹರಪನಹಳ್ಳಿ ಜೆಸಿಐ ಸ್ಫೂರ್ತಿ ಘಟಕದ ನೂತನ ಅಧ್ಯಕ್ಷರಾಗಿ ಬಿ.ಸಿ. ವಿಕಾಸ್, ಕಾರ್ಯದರ್ಶಿಯಾಗಿ ಅಮೃತಾ ಪ್ರಶಾಂತ್ ಅಧಿಕಾರ ವಹಿಸಿಕೊಂಡರು. 

ಸಮಾರಂಭದಲ್ಲಿ ಪೂರ್ವಾಧ್ಯಕ್ಷ ರವಿಶಂಕರ್, ಕೆ. ಪ್ರಭಾಕರ, ಅಧಿಕಾರ್ ರವೀಂದ್ರ, ಟಿ.ಎಂ.ವೀರೇಶ್, ಕುಬೇಂದ್ರ ನಾಯ್ಕ, ಮಲ್ಲಿಕಾರ್ಜುನ, ಎಂ. ಅಂಬಣ್ಣ, ಹೇಮಣ್ಣ ಮೋರಿಗೇರಿ, ಸಿ. ಪರಶುರಾಂ, ಜೇಸಿಐಗಳಾದ ನಂದಿನಿ ಮಂಜುನಾಥ್, ದಾನೇಶ್ವರಿ ಸಂದೇಶ್, ಸ್ವಪ್ನ ಮಲ್ಲಿಕಾರ್ಜುನ್, ಅಕ್ಷತಾ ರವಿಶಂಕರ್, ಸ್ವರೂಪ ಬಸವರಾಜ್, ಶರತ್ ಚಂದ್ರ, ಚೇತನ್ ಎನ್.ಕೆ.ಸಂತೋಷ್, ವೀರನಗೌಡ್ರು, ಶಂಬುಲಿಂಗನಗೌಡ್, ಅಮೃತ ಮಂಜುನಾಥ್   ಮುಂತಾದವರು ಭಾಗವಹಿಸಿದ್ದರು.

error: Content is protected !!