ಶಿವಕುಮಾರ ಸ್ವಾಮಿ ಬಡಾವಣೆಯ ಕಾಮಗಾರಿ ವೀಕ್ಷಿಸಿದ ಮೇಯರ್

ಶಿವಕುಮಾರ ಸ್ವಾಮಿ ಬಡಾವಣೆಯ ಕಾಮಗಾರಿ ವೀಕ್ಷಿಸಿದ ಮೇಯರ್

ದಾವಣಗೆರೆ, ಜ.8- ದಾವಣಗೆರೆ ಸ್ಮಾರ್ಟ್ ಸಿಟಿ ವತಿಯಿಂದ ನಗರದ ಶಿವಕುಮಾರ ಸ್ವಾಮಿ ಬಡಾವಣೆಯ 1ನೇ ಹಂತದ 2ನೇ ಮುಖ್ಯ ರಸ್ತೆಯನ್ನು ಹೆೋಸದಾಗಿ ನಿರ್ಮಿಸುವಾಗ ಕಳಪೆಯಾಗಿದೆ ಎಂಬ ದೂರಿನ ಹಿನ್ನಲೆಯಲ್ಲಿ ಮಹಾಪೌರ  ಕೆ. ಚಮನ್ ಸಾಬ್ ಅವರು ಇಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.  

ನಗರ ಯೋಜನೆ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಸವಿತಾ ಹುಲ್ಲುಮನೆ ಗಣೇಶ್ ರಸ್ತೆ ಕಾಮಗಾರಿಯನ್ನು ಪರಿಶೀಲಿಸಿ ಅಭಿವೃದ್ಧಿ ಕಾಮಗಾರಿಗಳಲ್ಲಿ  ಯಾರೂ ಸಹ ರಾಜಕೀಯ ಬೆರೆಸಬಾರದು, ವೃಥಾ ಆರೋಪ ಮಾಡಿ ಜನರ ದಾರಿ ತಪ್ಪಿಸಬಾರದು. ಜನರ ಹಿತಾಸಕ್ತಿಗಾಗಿ ನಾವೆಲ್ಲರೂ ಕಾರ್ಯನಿರ್ವಹಿಸಬೇಕೇ ವಿನಃ ಸ್ವಪ್ರತಿಷ್ಠೆ ಬರಬಾರದು ಎಂದರು. 

ಈ ಹಿಂದೆ ಇದ್ದ ಡಾಂಬರ್ ರಸ್ತೆಯ ಮೇಲೆ ವೈಟ್ ಟಾಪ್ಪಿಂಗ್ ಮಾದರಿಯಲ್ಲಿ ಕಾಂಕ್ರೀಟ್ ರಸ್ತೆಯನ್ನು ನಿರ್ಮಾಣ ಮಾಡುತ್ತಿರುವುದು ಗುಣಮಟ್ಟದಿಂದ ಕೂಡಿದೆ ಆದರೆ ಕೆಲವು ಕಡೆ ರಸ್ತೆಯಲ್ಲಿ ಒಳಚರಂಡಿ ಮ್ಯಾನ್ ಹೋಲ್‌ಗಳು ಬಂದಿರುವ ಕಾರಣ  ಬಿರುಕುಗಳು ಬಂದಿರುತ್ತವೆ. ಇಂತಹ ಕೆಲುವು ಭಾಗಗಳನ್ನು  ತುರ್ತಾಗಿ ವೈಜ್ಞಾನಿಕವಾಗಿ ಸರಿಪಡಿಸಲು ಕ್ರಮ ವಹಿಸಲು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಸೂಚಿಸಿದರು. ಜಲಸಿರಿ ಪೈಪ್ ಅಡ್ಡ ಬಂದಿದೆ ಎಂಬ ಕಾರಣ ನೀಡಿ ಮಳೆ ನೀರು ಚರಂಡಿಯ ಡೆಕ್ ಸ್ಲಾಬ್ ನಿರ್ಮಾಣ ವಿಳಂಬ ಮಾಡುವುದು ಸರಿಯಲ್ಲ. ಇದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಇನ್ನೆರೆಡು ದಿನಗಳಲ್ಲಿ ಸ್ಲಾಬ್ ಹಾಕಲು ಗುತ್ತಿಗೆದಾರನಿಗೆ ತಿಳಿಸಲಾಯಿತು.  ಅಧಿಕಾರಿಗಳು ಇದಕ್ಕೆ ಸಂಬಂಧಪಟ್ಟ ಇಲಾಖೆಯೊಂದಿಗೆ ಮಾತನಾಡಿ ಕಾಮಗಾರಿಯನ್ನು ಪೂರ್ಣಗೊಳಿಸಲು ತಿಳಿಸಿದರು. 

ಮಹಾಪೌರ ಕೆ. ಚಮನ್ ಸಾಬ್‌ ಮಾತನಾಡಿ, ರಸ್ತೆ ನಿರ್ಮಾಣ ಮತ್ತು ಪಾದಚಾರಿ ಮಾರ್ಗ ನಿರ್ಮಾಣ ಕಾಮಗಾರಿಯನ್ನು ಬೇಗ ಪೂರ್ಣಗೊಳಿಸಲು ಸ್ಮಾರ್ಟ್ ಸಿಟಿ ಅಧಿಕಾರಿಗಳಿಗೆ ಸೂಚಿಸಿದರು. 

ಈ ಸಂದರ್ಭದಲ್ಲಿ ಪಾಲಿಕೆ ಸದಸ್ಯರಾದ ಎ ನಾಗರಾಜ್ , ಮಂಜುನಾಥ್ ಗಡಿಗುಡಾಳ್, ಕೆ.ಎಂ. ವೀರೇಶ್, ಮುಖಂಡರಾದ ಗಣೇಶ್ ಹುಲ್ಲುಮನೆ ಹಾಜರಿದ್ದರು.

error: Content is protected !!