ನಮ್ಮ ದೇಶದ ಆಹಾರ ವೈವಿಧ್ಯತೆ ಹಾಗೂ ಸಾಂಪ್ರದಾಯಕವಾಗಿದೆ

ನಮ್ಮ ದೇಶದ ಆಹಾರ ವೈವಿಧ್ಯತೆ ಹಾಗೂ ಸಾಂಪ್ರದಾಯಕವಾಗಿದೆ

ಭದ್ರಾ ಕಾಲೇಜಿನ ಆಹಾರ ಮೇಳ ಭದ್ರಾ ಫುಡ್ ಫೆಸ್ಟ್ ಕಾರ್ಯಕ್ರಮದಲ್ಲಿ ಹೆಚ್.ಬಿ.ಎಂ.

ದಾವಣಗೆರೆ, ಜ. 8- ಆಹಾರ ಮೇಳ ಕಾರ್ಯಕ್ರಮಗಳಿಂದ ‘ಜೈ ಜವಾನ್, ಜೈ ಕಿಸಾನ್’ ಎನ್ನುವ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಮಾತು ಸಾರ್ಥಕವಾಗಿದೆ. ಆಹಾರ ಉದ್ಯಮದಲ್ಲಿ ಭಾರತ ಆರನೇ ಸ್ಥಾನದಲ್ಲಿದೆ ಮತ್ತು ಭಾರತದಲ್ಲಿ ಶೇ. 60 ಜಿ ಡಿ ಪಿ ಆಹಾರ ಉತ್ಪಾದನೆಯಿಂದಲೇ ಬರುತ್ತದೆ ಎಂದು ಹೇಳಿ, ತಾವು ಸಾಕಷ್ಟು ರಾಷ್ಟ್ರಗಳಲ್ಲಿ ಪ್ರವಾಸ ಮಾಡಿದ್ದರೂ ನಮ್ಮ ದೇಶದ ಆಹಾರ ಸಾಂಪ್ರದಾಯಕವಾಗಿದೆ ಹಾಗೂ ನಮ್ಮಲ್ಲಿ ಬಹಳಷ್ಟು ಆಹಾರ ವೈವಿಧ್ಯತೆ ಇದೆ ಎಂದು ಹಿರಿಯ ಪತ್ರಕರ್ತ ಹೆಚ್.ಬಿ. ಮಂಜುನಾಥ್ ತಿಳಿಸಿದರು.

ನಗರದ ಬಾಪೂಜಿ ಬ್ಯಾಂಕ್ ಸಮುದಾಯ ಭವನದ ಆವರಣದಲ್ಲಿ ನಿನ್ನೆ ನಡೆದ ನಗರದ ಭದ್ರಾ ಪದವಿ ಹಾಗೂ ಸ್ನಾತಕೋತ್ತರ ಕಾಲೇಜಿನ ಆಹಾರ ಮೇಳ ಭದ್ರಾ ಫುಡ್ ಫೆಸ್ಟ್ – 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ನಾವು ತಿನ್ನುವ ಬೇಕರಿ ಪದಾರ್ಥಗಳು ನಮ್ಮ ಭಾರತೀಯ ಅಯ್ಯಂಗಾರ್ ಅವರಿಂದ ಬ್ರಿಟಿಷರಿಗೆ ಪರಿಚಯವಾಗಿ ಇಂದು ವಿಶ್ವ ಪ್ರಸಿದ್ಧಿಯಾಗಿವೆ.  ನಮ್ಮಲ್ಲಿ ಸಿರಿಧಾನ್ಯ ತಿನ್ನುವರು ಇದ್ದಾರೆ, ಜಂಕ್ ಫುಡ್ ತಿನ್ನುವರು ಇದ್ದಾರೆ. ಆದರೆ ನಾವು ಮಧ್ಯಮದಲ್ಲಿದ್ದು, ಅವುಗಳ ಹದವನ್ನು ಅರಿತು ಆಹಾರ ತಿನ್ನಬೇಕು. ಆಹಾರ ಪರಬ್ರಹ್ಮವಾಗಿದೆ. ಹಾಗಾಗಿ ಆಹಾರ ಯಾವಾಗಲೂ ಶುದ್ಧವಾಗಿ ಹಾಗೂ ಸಾಂಪ್ರದಾಯಕವಾಗಿರಬೇಕು ಎಂದು ಅವರು ಹೇಳಿದರು.

ಭದ್ರಾ ಕಾಲೇಜಿನ ಆಹಾರ ಮೇಳಕ್ಕೆ ತನ್ನದೇ ಆದ ವೈಶಿಷ್ಟ್ಯತೆಯಿದೆ. ದಾವಣಗೆರೆ ನಗರ ಹಾಗೂ ಸುತ್ತ ಮತ್ತಲಿನ ಪ್ರದೇಶವು ಇಂದು ಭತ್ತವನ್ನು ಬೆಳೆದು ನಾಡಿಗೆ ಅನ್ನವನ್ನು ಕೊಡುವ ಭದ್ರಾ ನದಿಯ ಹೆಸರನ್ನೇ ಕಾಲೇಜಿಗೆ ಹೆಸರಿಸಿಕೊಂಡಿರು ವುದು ಹರ್ಷದಾಯಕ ವಿಷಯವಾಗಿದೆ ಎಂದು ಹೇಳಿ ಮನೆ ಯಲ್ಲಿ ತಾಯಂದಿರಿಗೆ ಅಡುಗೆಯಲ್ಲಿ ಸಹಾಯ ಮಾಡಿ, ಆಹಾರವನ್ನು ಪ್ರೀತಿ ಯಿಂದ ಬಡಿಸಿ ಎಂದು ಅವರು ಹಿತ ನುಡಿದರು. 

ಪ್ರೊ. ಡಿ. ಬಾಬು ಮಾತನಾಡಿ, ಆಹಾರವು ನಮ್ಮ ಜೀವನದ ಒಂದು ಭಾಗವಾಗಿದೆ. ಸಿರಿಧಾನ್ಯಗಳು ಇಂದಿನ ಯುವಜನತೆಯ ಸದೃಢತೆಗೆ ಅವಶ್ಯಕವಾಗಿವೆ. ಇಂದು ವಾಣಿಜ್ಯ ಬೆಳೆಗಳನ್ನು ಬೆಳೆಯುತ್ತಿದ್ದು, ಆಹಾರ ಧಾನ್ಯಗಳ ಬೆಲೆ ಹೆಚ್ಚಾಗಿದೆ. ಈ ಕಾರಣ 2023 ಅನ್ನು ಸಿರಿಧಾನ್ಯಗಳ ವರ್ಷ ಎಂದು ಭಾರತ ಸರ್ಕಾರವು ಘೋಷಿಸಿದೆ. ಈ ತರಹದ ಆಹಾರ ಮೇಳಗಳು, ಸಿರಿಧಾನ್ಯ ಹಬ್ಬಗಳು ನಮ್ಮ ರೈತರನ್ನು ಪ್ರೋತ್ಸಾಹಿಸುತ್ತವೆ. ಇಂತಹ ಕಾರ್ಯಕ್ರಮಗಳು ನನಗೆ ಸಂತೋಷವನ್ನು ತಂದಿದೆ ಎಂದರು. 

ಶ್ರೀ ರಾಘವೇಂದ್ರ ಶ್ಯಾವಿಗೆ ಹೋಟೆಲ್ ಮಾಲೀಕರಾದ ಶ್ರೀಮತಿ ಸುಜಾತ ವಿಶ್ವನಾಥ್ ಶ್ರೇಷ್ಠಿ,  ಪ್ರೊ. ಸಿ. ಹೆಚ್. ಮುರಿಗೇಂದ್ರಪ್ಪ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ಟಿ ಮುರುಗೇಶ್,  ಮೇಳದಲ್ಲಿದ್ದ ವಿದ್ಯಾರ್ಥಿಗಳನ್ನು ಉದ್ದೇಶಿಸಿ, ಯುವಜನತೆಗೆ ವ್ಯವಾಹಾರಿಕ ಜ್ಞಾನ ನಿರ್ವಹಣೆಯ ಕುರಿತು ಅನುಭವ ಹಾಗೂ ಪರಿಣಿತಿಯು ಅವಶ್ಯಕತೆ ಇದೆ. ಹೋಟೆಲ್ ಮ್ಯಾನೇಜ್‍ಮೆಂಟ್ ನಂತಹ ಕೋರ್ಸ್‍ಗಳಲ್ಲಿ ಹೆಚ್ಚಿನ ಉದ್ಯೋಗಾವ ಕಾಶಗಳು ಇವೆ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಕಾರ್ಯಕ್ರಮದಲ್ಲಿ ಡಿ ಚಂದ್ರಪ್ಪ, ಎಂ.ಸಂಕೇತ್ ಉಪಸ್ಥಿತರಿದ್ದರು. ಶ್ರೀಮತಿ ಎಂ.ವಿ. ಸುಮ ಮತ್ತು ಸಿ. ಕೊಟ್ರೇಶ್ ಪರಿಚಯಿಸಿದರು. ಕು ಪ್ರಜ್ವಲ್ ವಿದ್ಯಾರ್ಥಿ  ನಿರೂಪಿಸಿದರು. ಶ್ರೀಮತಿ ಎಂ.ಕೆ. ಪೂರ್ಣಿಮಾ ಸ್ವಾಗತಿಸಿದರು.  ರೂಪ ಅಂಬರ್‍ಕರ್ ವಂದಿಸಿದರು.

error: Content is protected !!