ಎಸ್ಸೆಸ್‌ ಶತಾಯುಷಿಯಾಗಲಿ : ಸಿದ್ದೇಶ್ವರ

ಎಸ್ಸೆಸ್‌ ಶತಾಯುಷಿಯಾಗಲಿ : ಸಿದ್ದೇಶ್ವರ

ಬೆಂಗಳೂರು, ಜ. 6 –  ಮಣಿಪಾಲ್‌ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳು ತ್ತಿರುವ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರೂ ಆದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಅವರನ್ನು ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು ಇಂದು ಭೇಟಿ ಮಾಡಿ ಆರೋಗ್ಯ  ಕುಲಶೋಪರಿ ವಿಚಾರಿಸಿದರು. ಎಸ್ಸೆಸ್‌ ಶತಾಯುಷಿಗಳಾಗಲಿ ಹಾಗೂ ಇನ್ನಷ್ಟು ಕಾಲ ಸಮಾಜವನ್ನು ಮುನ್ನಡೆಸುವ ಶಕ್ತಿಯನ್ನು  ಭಗವಂತ ಅವರಿಗೆ ಕರುಣಿಸಲಿ ಎಂದು ಸಿದ್ದೇಶ್ವರ ಆಶಯ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ದೂಡಾ ಮಾಜಿ ಅಧ್ಯಕ್ಷ ದೇವರಮನೆ ಶಿವಕುಮಾರ್‌, ಅಕ್ಕಿ ವರ್ತಕ ಜಯಪ್ರಕಾಶ ಮಾಗಿ, ವೀರಶೈವ ಸಮಾಜದ ಮುಖಂಡ ದೇವರಮನೆ ಶಿವರಾಜ್ ಇದ್ದರು.

error: Content is protected !!