ಎಸ್ಪಿ ಉಮಾ ಪ್ರಶಾಂತ್‌ ಸೇರಿ 65 ಐಪಿಎಸ್ ಅಧಿಕಾರಿಗಳಿಗೆ ಪದೋನ್ನತಿ

ಎಸ್ಪಿ ಉಮಾ ಪ್ರಶಾಂತ್‌ ಸೇರಿ  65 ಐಪಿಎಸ್ ಅಧಿಕಾರಿಗಳಿಗೆ ಪದೋನ್ನತಿ

ಬೆಂಗಳೂರು, ಡಿ.31- ಕರ್ನಾಟಕ ರಾಜ್ಯ ಸರ್ಕಾರವು ಹೊಸ ವರ್ಷದ ಮುನ್ನಾ ದಿನವೇ ರಾಜ್ಯದ ಐಪಿಎಸ್ ಅಧಿಕಾರಿಗಳಿಗೆ ಪದೋನ್ನತಿ ನೀಡಿ ಇಂದು ಆದೇಶ ಹೊರಡಿಸಿದೆ.

ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ್, ಹುಬ್ಬಳ್ಳಿ – ಧಾರವಾಡ ಪೊಲೀಸ್ ಆಯುಕ್ತ ಎನ್.ಶಿವಕುಮಾರ್, ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾ ಶಂಕರ ಗುಳೇದ, ಬೆಳಗಾವಿ
ಲೋಕಾಯುಕ್ತ ಎಸ್ಪಿ ಹನುಮಂತರಾಯ, ನೇಮಕಾತಿ ವಿಭಾಗದ ಎಸ್.ಪಿ. ಧರ್ಮೇಂದ್ರ ಕುಮಾರ್ ಮೀನಾ, ಜೆ.ಸಂಗೀತಾ ಸೇರಿದಂತೆ, ಒಟ್ಟು 65 ಐಪಿಎಸ್ ಅಧಿಕಾರಿಗೆ ಪದೋನ್ನತಿ ನೀಡಿದೆ. ಜೊತೆಗೆ, ಪದೋನ್ನತಿ ಹೊಂದಿರುವ ಬಹುತೇಕ ಐಪಿಎಸ್ ಅಧಿಕಾರಿಗಳಿಗೆ ಈಗಿರುವ ಸ್ಥಳದಲ್ಲೇ ಮುಂದುವರೆಸಿ ಸರ್ಕಾರ ಆದೇಶಿಸಿದೆ.

error: Content is protected !!