ಕರವೇ ಸಾಂಸ್ಕೃತಿಕ ವೈಭವ ಸಮಾರಂಭದಲ್ಲಿ ಪಾಲಿಕೆ ಮೇಯರ್ ಚಮನ್ ಸಾಬ್
ದಾವಣಗೆರೆ, ಡಿ. 21 – ಕನ್ನಡ ಭಾಷೆಗೆ ಅನೇಕ ರಾಜಮನೆತನಗಳು, ಸಂತರು, ವಚನಕಾರರು ಮಹತ್ತರ ಕೊಡುಗೆ ನೀಡಿದ್ದಾರೆ ಎಂದು ಮಹಾನಗರ ಪಾಲಿಕೆ ಮೇಯರ್ ಕೆ.ಚಮನ್ ಸಾಬ್ ಹೇಳಿದರು.
ಕರ್ನಾಟಕ ರಕ್ಷಣಾ ವೇದಿಕೆಯ ಪಾದಚಾರಿ ವ್ಯಾಪಾರಿ ನಗರ ಘಟಕದ ವತಿಯಿಂದ 69ನೇ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ನಗರದ ಡಾ. ಮೋದಿ ವೃತ್ತ (ಗುಂಡಿ ಸರ್ಕಲ್)ದಲ್ಲಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಸಾಂಸ್ಕೃತಿಕ ವೈಭವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡ ಭಾಷೆ ಬಹಳ ಪ್ರಾಚೀನ ಭಾಷೆ. ಬೇರೆ ರಾಜ್ಯಗಳ ಭಾಷೆಗಳಿಗೆ ಹೋಲಿಸಿದರೆ ನಮ್ಮ ಕರ್ನಾಟಕದಲ್ಲಿ ಇದೊಂದು ಹಬ್ಬವನ್ನಾಗಿ ಆಚರಿಸುತ್ತಿರುವುದು ವಿಶೇಷ ಎಂದು ಹೇಳಿದರು.
ಎರಡನೇ ಶತಮಾನದಲ್ಲಿಯೇ ಕನ್ನಡ ಭಾಷೆಯ ಬಗ್ಗೆ ಉಲ್ಲೇಖವಿದ್ದು ಕನ್ನಡ ಭಾಷೆಯನ್ನು ಬೆಳೆಸಲು ಅನೇಕ ದಾಸರು, ವಚನಕಾರರು ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ನಾವೆಲ್ಲಾ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕಿದೆ ಎಂದು ಹೇಳಿದರು.
ಮಕ್ಕಳಿಗೆ ಕನ್ನಡ ಭಾಷೆಯಲ್ಲಿ ಶಿಕ್ಷಣ ನೀಡುವುದರಿಂದ ಮಕ್ಕಳ ಭವಿಷ್ಯ ಉತ್ತಮವಾಗಿರಲಿದೆ. ಅದ್ದರಿಂದ ಕನ್ನಡ ಭಾಷೆಯಲ್ಲಿ ಶಿಕ್ಷಣ ಕೊಡಿಸಬೇಕು. ಮನೆಗಳಲ್ಲಿ ಕನ್ನಡ ಮಾತನಾಡಬೇಕು ಎಂದು ಕರೆ ನೀಡಿದರು.
ಕರವೇ ಜಿಲ್ಲಾಧ್ಯಕ್ಷ ಎಂ.ಎಸ್. ರಾಮೇಗೌಡ ಮಾತನಾಡಿ, ಕನ್ನಡ ನಾಡು, ನುಡಿಗಾಗಿ ಹೋರಾಟ ನಡೆಸಿ ಯಶಸ್ವಿಯಾದ ಸಂಘಟನೆ ಕರ್ನಾಟಕ ರಕ್ಷಣಾ ವೇದಿಕೆ ಎಂದರು.
ಎಲ್ಲಾ ಪಕ್ಷಗಳ ರಾಜಕಾರಣಿಗಳೊಂದಿಗೂ ವೇದಿಕೆ ಉತ್ತಮ ಬಾಂಧವ್ಯ ಹೊಂದಿದೆ. ಆದರೆ ನಾಡು-ನುಡಿಗೆ ಧಕ್ಕೆ ಬಂದಾಗ ಯಾವ ಪಕ್ಷವೇ ಆಗಲಿ ಹೋರಾಟ ನಡೆಸುತ್ತೇವೆ. ವರ್ಷದಲ್ಲಿ ಆರು ತಿಂಗಳು ಕೋರ್ಟು-ಕಚೇರಿಗೆ ಅಲೆಯಬೇಕಾಗಿದೆ. ಆದಾಗ್ಯೂ ಹೆದರದೆ ಹೋರಾಟ ನಡೆಸುತ್ತಿದ್ದೇವೆ ಎಂದು ಹೇಳಿದರು.
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಅಂಬರೀಶ್ ಎಸ್.ಹೆಚ್., ಎಂ.ವೈ. ಸತೀಶ್, ಮಧು ನಾಗರಾಜ್, ಹನುಮಂತರಾವ್, ಸಾಗರ್, ಜಯಲಕ್ಷ್ಮಿ ಹೆಗಡೆ, ಪರಮೇಶ್, ಡಿ.ಸಿ. ಶ್ರೀನಿವಾಸ ಚಿನ್ನಿಕಟ್ಟಿ, ಓ.ಮಹೇಶ್ವರಪ್ಪ, ಹೆಚ್.ಪಿ. ಗೋಪಾಲ್ ರಾಜ್ ಅವರುಗಳ್ನು ಸನ್ಮಾನಿಸಲಾಯಿತು.
ಪಾದಚಾರಿ ವ್ಯಾಪಾರಿ ಘಟಕದ ಅಧ್ಯಕ್ಷ ಸುರೇಶ್ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಆಯುಕ್ತರಾದ ರೇಣುಕಾ, ಸದಸ್ಯರಾದ ಸವಿತಾ ಗಣೇಶ್ ಹುಲ್ಮನಿ, ಜಿ.ಎಸ್. ಮಂಜುನಾಥ್ ಗಡಿಗುಡಾಳ್, ಕರವೇ ಜಿಲ್ಲಾ ಗೌರವಾಧ್ಯಕ್ಷ ವಾಸುದೇವ ರಾಯ್ಕರ್, ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಬಸಮ್ಮ, ಕಾಂಗ್ರೆಸ್ ಮುಖಂಡ ಗಣೇಶ್ ಹುಲ್ಲುಮನಿ, ರಾಘವೇಂದ್ರ ಎಸ್.ಕಠಾರೆ, ಗೋಪಾಲ್ ದೇವರವಮನೆ, ಎನ್.ಟಿ. ಹನುಮಂತಪ್ಪ, ಲೋಕೇಶ್, ಮಂಜುಳಾ ಮಹಾಂತೇಶ್, ಮಂಜುಳಾ ಗಣೇಶ್ ಇತರರು ಈ ಸಂದರ್ಭದಲ್ಲಿದ್ದರು.
ಜ್ಯೂನಿಯರ್ಗಳಾದ ರಾಜ್ಕುಮಾರ್, ವಿಷ್ಮುವರ್ಧನ್, ಶಂಕರ್ ನಾಗ್, ಪುನೀತ್ ರಾಜ್ ಕುಮಾರ್ ಹಾಗೂ ಕು.ಜೀವಿತಾ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.