ಬದಲಾಗುವ ಕಾಯ್ದೆಗಳ ಬಗ್ಗೆ ಅರಿವಿರಲಿ

ಬದಲಾಗುವ ಕಾಯ್ದೆಗಳ ಬಗ್ಗೆ ಅರಿವಿರಲಿ

ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳ ತರಬೇತಿ ಶಿಬಿರದಲ್ಲಿ ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತದ ಅಧ್ಯಕ್ಷ ಸಿರಿಗೆರೆ ರಾಜಣ್ಣ

ದಾವಣಗೆರೆ, ಡಿ.18- ಸರ್ಕಾರ ಬದಲಾದಂತೆ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸಂಬಂಧಿಸಿದ ಕಾಯ್ದೆಗಳೂ ಬದಲಾಗುತ್ತವೆ. ಇವುಗಳ ಅರಿವು ಸಂಘಗಳ ಕಾರ್ಯದರ್ಶಿಗಳಿಗೆ ಅಗತ್ಯ ಎಂದು ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತದ ಅಧ್ಯಕ್ಷ ಸಿರಿಗೆರೆ ರಾಜಣ್ಣ ಹೇಳಿದರು.

ರಾಜ್ಯ  ಸಹಕಾರ ಮಹಾಮಂಡಳ ನಿಯಮಿತ, ಸಹಕಾರ ಇಲಾಖೆ, ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತ, ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಒಕ್ಕೂಟ ಹಾಗೂ ಉತ್ಪಾದಕರ ಸಂಘಗಳ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ನಗರದ ಜನತಾ ಬಜಾರ್ ಸಭಾಂಗಣದಲ್ಲಿ   ಹಮ್ಮಿಕೊಳ್ಳಲಾಗಿದ್ದ ದಾವಣಗೆರೆ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳಿಗೆ ಒಂದು ದಿನದ ವಿಶೇಷ ತರಬೇತಿ ಶಿಬಿರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಹಕಾರ ಸಂಘದ ಬೈಲಾವನ್ನು ಪ್ರತಿ ಕಾರ್ಯದರ್ಶಿಗಳೂ ಓದಿಕೊಂಡು ತಿಳಿದಿರಬೇಕು. ಆಗಾಗ್ಗೆ ಕಾಯ್ದೆಯಲ್ಲಿನ ಬದಲಾವಣೆಗಳ ಬಗ್ಗೆಯೂ ಅರಿವಿರಬೇಕು ಎಂದವರು ಹೇಳಿದರು.

ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸಹಕಾರ ಇಲಾಖೆಯ ನಿವೃತ್ತ ಸಹಾಯಕ ನಿಬಂಧಕ ಲಿಯಾಖತ್ ಅಲಿ ಮಾತನಾಡಿ, ದೇಶದಲ್ಲಿ ಅನೇಕ ಸರ್ಕಾರಿ ಕಚೇರಿಗಳು, ಸಂಘ-ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತವೆ. ಆದರೆ ಒಂದೂ ದಿನ ರಜೆ ಇಲ್ಲದೆ ಕಾರ್ಯ ನಿರ್ವಹಿಸುವುದು ಹಾಲು ಉತ್ಪಾದಕರ ಸಹ ಕಾರ ಸಂಘಗಳು ಮಾತ್ರ ಎಂದು ಹೇಳಿದರು.

ಕಾಯ್ದೆಗಳು ಶಾಸನ ಸಭೆಯಲ್ಲಿ ಅನುಮೋದನೆಗೊಂಡರೆ, ನಿಯಮಗಳನ್ನು ಸರ್ಕಾರ ರೂಪಿಸುತ್ತದೆ. ಉಪ ವಿಯಮಗಳು ಇಲಾಖಾ ಮಟ್ಟದಲ್ಲಿ ಅನುಮೋದನೆ ಗೊಳ್ಳು ತ್ತವೆ. ಇವುಗಳ ಬಗ್ಗೆ ಗ್ರಾಮ ಮಟ್ಟದಲ್ಲಿ ತಿಳಿಸುವ ಕೆಲಸ ಒಕ್ಕೂಟದ್ದು ಎಂದರು.

ಒಕ್ಕೂಟದ ನಿರ್ದೇಶಕ ಜಗದೀಶಪ್ಪ ಬಣಕಾರ್ ಮಾತನಾಡಿ, ಸಹಕಾರ ಸಂಘದ ಲ್ಲಾಗುವ ಕಾಯ್ದೆಗಳ ಬದಲಾವಣೆ ಸೇರಿದಂತೆ ವಿಚಾರಗಳ ಬಗ್ಗೆ ಆಗಾಗ್ಗೆ ತಿಳಿಯಬೇಕು. ಅದಕ್ಕಾಗಿ ಇಂತಹ ಶಿಬಿರಗಳ ಸದು ಪಯೋಗ ಪಡಿಸಿಕೊಳ್ಳಬೇಕು ಎಂದರು.

ಒಕ್ಕೂಟದ ನಿರ್ದೇಶಕ ಹೆಚ್.ಕೆ. ಬಸಪ್ಪ, ಬಿ.ಜಿ. ಬಸವರಾಜಪ್ಪ, ಸಹಕಾರ  ಸಂಘಗಳ ಸಹಾಯಕ ನಿಬಂಧಕರರಾದ ಎಸ್. ಮಂಜುಳ, ಒಕ್ಕೂಟದ ಉಪ ವ್ಯವಸ್ಥಾಪಕ ಡಾ.ಎ.ಸಿ. ಸೂರಜ್ ಕುಮಾರ್, ವಿಸ್ತರಣಾಧಿಕಾರಿ ಹೆಚ್.ಎಂ. ಮಂಜುನಾಥ್, ದೀಪಾ ನಾಡರ್, ಜಿಲ್ಲಾ ಸಹಕಾರ ಒಕ್ಕೂಟದ ನಿರ್ದೇಶಕರುಗಳಾದ ಆರ್.ಜಿ. ಶ್ರೀನಿವಾಸಮೂರ್ತಿ, ಕೆ.ಜಿ. ಸುರೇಶ್ ಇತರರು ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಲಪ್ಪ ಕೋಡಿಹಳ್ಳಿ ಸ್ವಾಗತಿಸಿದರು. ಜಿಲ್ಲಾ ಸಹಕಾರ ಶಿಕ್ಷಕ ಕೆ.ಹೆಚ್. ಸಂತೋಷ್ ಕುಮಾರ್ ನಿರೂಪಿಸಿದರು. ವ್ಯವಸ್ಥಾಪಕ ಕೆ.ಎಂ. ಜಗದೀಶ್ ಇದ್ದರು. 

error: Content is protected !!