ಹರಿಹರ, ಡಿ. 18 – ತಾಲ್ಲೂಕಿನ ಶಿವನಹಳ್ಳಿ ಗ್ರಾಮದಲ್ಲಿರುವ ದಕ್ಷಿಣ ಕೇದಾರ ವೈರಾಗ್ಯ ಧಾಮದಲ್ಲಿ ಇದೇ ದಿನಾಂಕ 21 ಮತ್ತು 22 ರಂದು ದಾಸೋಹ ಭವನ, ಭಕ್ತ ಭವನ ಹಾಗೂ ಸಭಾ ಭವನಗಳ ಲೋಕಾರ್ಪಣೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಸಮಾರಂಭದ ಹಿನ್ನೆಲೆಯಲ್ಲಿ ಕೇದಾರ ಪೀಠದ ಭೀಮಾ ಶಂಕರಲಿಂಗ ಜಗದ್ಗುರುಗಳ ಸಂಗೀತಯುಕ್ತ ಇಷ್ಟಲಿಂಗ ಮಹಾಪೂಜೆ ಹಾಗೂ ಪರಂಪರೆ ರಕ್ಷಣಾ ಧರ್ಮ ಸಮಾರಂಭ ಮತ್ತು ಶಿವ ಪಂಚಾಕ್ಷರಿ ಮಹಾಮಂತ್ರ ಬರೆದ ಸುಮಾರು 12000ಕ್ಕೂ ಅಧಿಕ ಭಕ್ತರ ಸಮಾವೇಶವನ್ನು ಸಹ ಆಯೋಜಿಸಲಾಗಿದೆ.
ಕಾರ್ಯಕ್ರಮದ ಅಂಗವಾಗಿ ಇದೇ ದಿನಾಂಕ 21ರ ಶನಿವಾರ ಬೆಳಗ್ಗೆ 7ಗಂಟೆಗೆ ಷಂಶೀಪುರ ಗ್ರಾಮದಿಂದ ಮಠದ ಭಕ್ತರು ವೀರಭದ್ರಸ್ವಾಮಿಯ ಗುಗ್ಗಳ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಗುಗ್ಗಳವು ಗ್ರಾಮದ ವಿವಿಧ ದೇವಸ್ಥಾನಗಳಿಗೆ ಹೋಗಿ ನಂತರ ವೈರಾಗ್ಯ ಧಾಮದಲ್ಲಿ ಅಂತ್ಯಗೊಳ್ಳಲಿದೆ. ಮಧ್ಯಾಹ್ನ 3.30 ಗಂಟೆಗೆ ಕೇದಾರ ಪೀಠದ ಭೀಮಾ ಶಂಕರಲಿಂಗ ಜಗದ್ಗುರುಗಳು ವೈರಾಗ್ಯ ಧಾಮಕ್ಕೆ ಆಗಮಿಸಿ ವಾಸ್ತವ್ಯ ಮಾಡುವರು.
ದಿನಾಂಕ 22ರ ಭಾನುವಾರ ಬೆಳಿಗ್ಗೆ 7.30 ರಿಂದ ಮಹಾಸಂಕಲ್ಪ, 8.30 ರಿಂದ ರುದ್ರಾಭಿಷೇಕ, 9 ರಿಂದ ಸಂಗೀತಯುಕ್ತ ಆರತಿಗಳ ಪೂಜೆ, ಮಧ್ಯಾಹ್ನ 12.30 ಕ್ಕೆ ಧರ್ಮ ಸಮಾರಂಭ ನೆರವೇರಲಿದೆ.
ಶಿವ ಪಂಚಾಕ್ಷರಿ ಮಂತ್ರ ಬರೆದವರ ಮಹಾ ಸಂಗಮದ ಕಾರ್ಯಕ್ರಮಕ್ಕೆ ಸರ್ವರೂ ಪಾಲ್ಗೊಂ ಡು ಜಗದ್ಗುರುಗಳ ಆಶೀರ್ವಾದ ಪಡೆಯಲು ಕಣ್ವಕುಪ್ಪಿ ಗವಿಮಠದ ಡಾ. ನಾಲ್ವಡಿ ಶಾಂತ ಲಿಂಗ ಶಿವಾಚಾರ್ಯ ಶ್ರೀಗಳು ತಿಳಿಸಿದ್ದಾರೆ.