ರಾಜ್ಯಮಟ್ಟದ ಟೆನ್ನಿಸ್ ಪಂದ್ಯಾವಳಿಗೆ ಚಾಲನೆ

ರಾಜ್ಯಮಟ್ಟದ ಟೆನ್ನಿಸ್ ಪಂದ್ಯಾವಳಿಗೆ ಚಾಲನೆ

ದಾವಣಗೆರೆ, ಡಿ.13- ಜಿಲ್ಲಾ ಟೆನ್ನಿಸ್ ಅಸೋಸಿಯೇಷನ್ ವತಿಯಿಂದ ನಗರದ ಟೆನ್ನಿಸ್ ಕ್ರೀಡಾಂಗಣದಲ್ಲಿ ರಾಜ್ಯ ಮಟ್ಟದ ಆಹ್ವಾನಿತ ಟೆನ್ನಿಸ್ ಪಂದ್ಯಾವಳಿಗಳು ಶುಕ್ರವಾರ ಪ್ರಾರಂಭವಾದವು. ಒಟ್ಟು ಮೂರು ದಿನಗಳ ಕಾಲ ಕ್ರೀಡಾಕೂಟ ನಡೆಯಲಿದೆ.

ಪಂದ್ಯಾವಳಿಗಳಲ್ಲಿ ಕರ್ನಾಟಕ, ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳ ಸುಮಾರು 350ಕ್ಕೂ ಅಧಿಕ ಟೆನ್ನಿಸ್ ಕ್ರೀಡಾಪಟುಗಳು ಭಾಗವಹಿಸಿದ್ದರು. ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಪಾಲಿಕೆ ಮೇಯರ್‌ ಕೆ. ಚಮನ್‌ ಸಾಬ್‌ ಅವರು, ನಗರದ ಟೆನ್ನಿಸ್ ಕ್ರೀಡಾಂಗಣವನ್ನು 40 ವರ್ಷಗಳಿಂದ ನೋಡುತ್ತಿದ್ದೇನೆ‌. ಈ ಕ್ರೀಡಾಂಗಣವನ್ನು ಒಳಾಂಗಣ ಕ್ರೀಡಾಂಗಣದ ರೀತಿ ಅಭಿವೃದ್ಧಿ ಪಡಿಸಲಾಗುವುದು ಎಂದರು.

ಟೆನ್ನಿಸ್ ಅಸೋಸಿಯೇಷನ್ ವತಿಯಿಂದ ಮನವಿ‌ ಕೊಟ್ಟರೆ, ಟೆನ್ನಿಸ್ ಕ್ರೀಡಾಂಗಣದಲ್ಲಿ ಜಿಮ್ ವ್ಯವಸ್ಥೆ, ವೀಕ್ಷಕರು ಕುಳಿತುಕೊಳ್ಳಲು ಆಸನ ವ್ಯವಸ್ಥೆ ಸೇರಿದಂತೆ ಎಲ್ಲಾ ರೀತಿಯಲ್ಲಿ ಅಭಿವೃದ್ಧಿಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಈ ವೇಳೆ ನಿವೃತ್ತ ಡಿವೈಎಸ್ಪಿ ಕೆ.ಪಿ ಚಂದ್ರಪ್ಪ, ಡಾ. ರಜನಿ, ನಿವೃತ್ತ ಅಭಿಯಂತರ ಬಿ.ಕೆ ನಿಂಗಪ್ಪ, ಟೂರ್ನಿಮೆಂಟ್ ಚೇರ್ಮನ್ ಐ.ಎಂ. ಅನಿಕ್ ಮತ್ತು ಕ್ರೀಡಾಪಟುಗಳು ಇದ್ದರು.

error: Content is protected !!