ಆಟೋಗಳಿಗೆ ಮೀಟರ್ ಕಡ್ಡಾಯ, ಒಂದು ತಿಂಗಳು ಗಡುವು; ಮೀರಿದರೆ 5 ಸಾವಿರ ದಂಡ

ಆಟೋಗಳಿಗೆ ಮೀಟರ್ ಕಡ್ಡಾಯ, ಒಂದು ತಿಂಗಳು ಗಡುವು; ಮೀರಿದರೆ 5 ಸಾವಿರ ದಂಡ

ದಾವಣಗೆರೆ, ಡಿ.12- ನಗರದಲ್ಲಿ ಆಟೋಗಳಿಗೆ ಮೀಟರ್ ಅಳವಡಿಕೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಹಲವು ವರ್ಷಗ ಳಿಂದ ಮೀಟರ್ ಅಳವಡಿಕೆ ಬಗ್ಗೆ ಜಿಲ್ಲಾಡಳಿತ ತಿಳಿಹೇಳು ತ್ತಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಇದೀಗ ಜಿಲ್ಲಾಧಿಕಾರಿ, ಎಸ್ಪಿ, ಆರ್​ಟಿಒ ಇಲಾಖೆ ಸಮ್ಮುಖದಲ್ಲಿ ಸಭೆ ನಡೆಸಿ ಆಟೋಗಳಿಗೆ ಮೀಟರ್ ಅಳವಡಿಸುವಂತೆ ಆದೇಶಿಸಲಾಗಿದೆ.

ದಾವಣಗೆರೆಯಲ್ಲಿ ಸುಮಾರು 10 ಸಾವಿರ ಆಟೋಗಳಿವೆ. ಎಲ್ಲಾ ಆಟೋಗಳಿಗೆ ಮೀಟರ್ ಅಳವಡಿಸಬೇಕೆಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಆದೇಶಿಸಿದ್ದಾರೆ.
ಇದಕ್ಕೆ ಎಸ್ಪಿ ಉಮಾ ಪ್ರಶಾಂತ್ ಅವರೂ ಕೂಡ ಧ್ವನಿಗೂಡಿಸಿ ಮೀಟರ್ ಅಳವಡಿಕೆಗೆ ಒಂದು ತಿಂಗಳ ಕಾಲ ಗಡುವು ಕೊಟ್ಟಿದ್ದಾರೆ.

ಆಟೋಗಳಿಗೆ ಮೀಟರ್ ಕಡ್ಡಾಯ ಕುರಿತು ಜಿಲ್ಲಾ ಸಶಸ್ತ್ರ ಮೀಸಲು ಪಡೆ ಮೈದಾನದಲ್ಲಿ ನಿನ್ನೆ ಆಟೋ ಮಾಲೀಕರ ಮತ್ತು ಚಾಲಕರ ಸಭೆ ಕರೆಯಲಾಗಿತ್ತು. ಜಿಲ್ಲಾಧಿಕಾರಿ, ಎಸ್ಪಿ, ಮಹಾನಗರ ಪಾಲಿಕೆ ಆಯುಕ್ತರಾದ ಶ್ರೀಮತಿ ರೇಣುಕಾ ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಆಟೋಗಳಿಗೆ ಮೀಟರ್ ಕಡ್ಡಾಯ ನಿಯಮ ಜಾರಿ ಮಾಡಲಾ ಯಿತು. ಇದಲ್ಲದೇ ಪಾಲಿಕೆ ವ್ಯಾಪ್ತಿ ಯಲ್ಲಿ ಆಟೋಗಳು ಮೀಟರ್ ಅಳವ ಡಿಸಿಕೊಂಡು ಪ್ರಯಾಣಿ ಕರಿಗೆ ಸೇವೆ ನೀಡಬೇಕು, ಮೀಟರ್ ಆಧಾರದ ಮೇಲೆ ಬಾಡಿಗೆ ನಿಗದಿ ಮಾಡಬೇಕು, ನಿಯಮ ಮೀರಿದರೆ ಆಟೋ ಮಾಲೀಕ ನಿಗೆ 5 ಸಾವಿರ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.

ಜಿಲ್ಲೆಯಾದ್ಯಂತ 10 ಸಾವಿರ ಆಟೋಗಳಿದ್ದರೆ, ನಗರ ಪ್ರದೇಶದಲ್ಲಿ ಆಟೋಗಳ ಸಂಖ್ಯೆ ಹೆಚ್ಚಾಗಿದೆ. ಅಲ್ಲದೇ ನಗರದಲ್ಲಿ 50ಕ್ಕೂ ಅಧಿಕ ಆಟೋ ನಿಲ್ದಾಣ ಗಳಿವೆ. ಮೀಟರ್ ಜೊತೆಗೆ ಸುಸ್ಥಿತಿ ಪ್ರಮಾಣ ಪತ್ರ ಸೇರಿ ಆಟೋ ಮಾಲೀಕರು, ಚಾಲಕರು ಅಗತ್ಯ ನಿಯಮಗಳನ್ನು ಪಾಲನೆ ಮಾಡಬೇಕು. ಇಲ್ಲದಿದ್ದರೆ ದಂಡ ನಿಶ್ಚಿತ ಎಂದು ಎಚ್ಚರಿಸಲಾಗಿದೆ.

ಎಸ್ಪಿ ಉಮಾ ಪ್ರಶಾಂತ್ ಪ್ರತಿಕ್ರಿಯಿಸಿ, ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಆಟೋ ಚಾಲಕರ, ಮಾಲೀಕರ ಸಭೆ ನಡೆಸಿದ್ದೇವೆ. ಯಾರು ಮೀಟರ್ ಉಪಯೋಗಿಸುವುದಿಲ್ಲ ಎಂಬ ಬಗ್ಗೆ ಆರ್​ಟಿಒ ನಿಂದ ಪರಿಶೀಲನೆ ನಡೆಸಿದ್ದು, ಆಟೋ ಚಾಲಕರಿಗೆ ಮೀಟರ್ ಅಳವಡಿಸಲು ಹೇಳಿದ್ದೇವೆ. ಅವರು ಕಾಲಾವಕಾಶ ಕೇಳಿದ್ದಾರೆ. ಒಂದು ತಿಂಗಳ ಗಡುವು ಸಹ ಕೊಡಲಾಗಿದೆ. ಇನ್ಮುಂದೆ ಮೀಟರ್ ಅಳವಡಿಕೆ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.

error: Content is protected !!