ಸಂವಿಧಾನ ಮೂಲೆಗುಂಪು ಮಾಡುವ ಕುತಂತ್ರ ನಡೆದಿದೆ

ಸಂವಿಧಾನ  ಮೂಲೆಗುಂಪು ಮಾಡುವ ಕುತಂತ್ರ ನಡೆದಿದೆ

ಹರಪನಹಳ್ಳಿ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮದಲ್ಲಿ ಎಂ.ವಿ.ಅಂಜಿನಪ್ಪ

ಹರಪನಹಳ್ಳಿ,ಡಿ. 8 – ದೇಶದಲ್ಲಿ ಸಂವಿಧಾನವನ್ನು ಮೂಲೆ ಗುಂಪು ಮಾಡುವ ಕುತಂತ್ರ ನಡೆಯುತ್ತಿದ್ದು, ಸಂವಿಧಾನ ಉಳಿಸುವ ಕೆಲಸವನ್ನು ಎಲ್ಲರೂ ಮಾಡಬೇಕಿದೆ ಎಂದು ಹರಪನಹಳ್ಳಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಂ.ವಿ.ಅಂಜಿನಪ್ಪ ಹೇಳಿದ್ದಾರೆ.

ಪಟ್ಟಣದ ಸ.ಪ.ಪೂ ಕಾಲೇಜಿನಲ್ಲಿ ಜನದನಿ ಸಾಹಿತ್ಯ ವೇದಿಕೆ ಆಯೋಜಿಸಿದ್ದ ಬಾಬಾ ಸಾಹೇಬ್‌ ಅಂಬೇಡ್ಕರ್‌ ಅವರ ಪರಿನಿರ್ವಾಣ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ  ಅವರು ಮಾತನಾಡಿದರು.

ಬದುಕನ್ನು ಕಟ್ಟಿಕೊಳ್ಳಲು ಅಂಬೇಡ್ಕರ್‌ರವರು ಸಂವಿಧಾನ ಕೊಟ್ಟರು, ಸಂವಿಧಾನ ಜಾರಿಯಾದ ನಂತರ ನಿಜವಾದ ಸ್ವಾತಂತ್ರ್ಯ ಸಿಕ್ಕಿದೆ. ಸಂವಿಧಾನ ಇಲ್ಲದಿದ್ದರೆ ನೆಮ್ಮದಿಯಿಂದ ಬದುಕಲು ಆಗುತ್ತಿರಲಿಲ್ಲ. ಹಾಗಾಗಿ ಸಂವಿಧಾನವನ್ನು ಎಲ್ಲರೂ ಗೌರವಿಸಬೇಕು ಎಂದು ತಿಳಿಸಿದರು.

ಧಾರವಾಡದ ಪ್ರಗತಿಪರ ಚಿಂತಕ ಬಸವರಾಜ ಸೂಳಿಬಾವಿ ಮಾತನಾಡಿ, ಶಿಕ್ಷಣ ಒಂದು ವರ್ಗಕ್ಕೆ ಸೀಮಿತವಾದ ಕಾಲದಲ್ಲಿ ಎಲ್ಲರಿಗೂ ಶಿಕ್ಷಣ ಸಿಗಬೇಕು ಎಂದು ಬಲವಾಗಿ ಪ್ರತಿಪಾದಿಸಿದವರು ಡಾ.ಅಂಬೇಡ್ಕರ್.   ಸಂವಿಧಾನದ ಮುಂದೆ ಯಾರೂ ಕನಿಷ್ಠರಲ್ಲ, ಯಾರು ಶ್ರೇಷ್ಟರಲ್ಲ, ದೇಶಕ್ಕೆ ಬೇಕಾಗಿರುವುದು ಶಾಲೆಗಳೇ ಹೊರತು ದೇವಾಲಯಗಳಲ್ಲ ಎಂದ ಅಂಬೇಡ್ಕರ್‌ರವರು  ಕೇವಲ ಎಸ್ಸಿ, ಎಸ್ಟಿ ಮೀಸಲಾತಿಗಷ್ಟೇ ಸಂಬಂಧಪಟ್ಟವರಲ್ಲ ಎಂದು ತಿಳಿಸಿದರು.

ಸಾಹಿತಿ ಇಸ್ಮಾಯಿಲ್‌ ಎಲಿಗಾರ್‌ ಮಾತನಾಡಿ, ಅಂಬೇಡ್ಕರ್‌ರವರ ಜೀವನ ಹಾಗೂ ಪರಂಪರೆ ಸರ್ವರಿಗೂ ಆದರ್ಶಪ್ರಿಯವಾದದು, ಸಾಮಾಜಿಕ ಸಮಾನತೆ, ಅಸ್ಪೃಶ್ಯತೆ ನಿವಾರಣೆಗಾಗಿ ಹೋರಾಡಿದ ಮಹಾನ್‌ವ್ಯಕ್ತಿ. ಅವರು ಎಂದೆಂದಿಗೂ ಪ್ರಸ್ತುತ ಎಂದು ಹೇಳಿದರು. 

ಪ್ರಾಚಾರ್ಯ ಸಿ.ಬಿ.ವೆಂಕಟೇಶ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಸಿ.ಗಂಗಾಧರ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಇಇ ಎಲ್‌.ಕುಬೇಂದ್ರನಾಯ್ಕ, ಸಾಹಿತಿ ಸುಭದ್ರಮ್ಮ ಮಾಡ್ಲಗೇರಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವೆಂಕಟೇಶ, ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಸಂಗಪ್ಪನವರ್, ದೈಹಿಕ ಶಿಕ್ಷಣ ಪರಿವೀಕ್ಷಕ ಷಣ್ಮುಖಪ್ಪ, ರಾಜಶೇಖರ ಬಣಕಾರ, ಹುಲಿಕಟ್ಟಿ ಚಂದ್ರಪ್ಪ, ಮೈದೂರು ರಾಮಣ್ಣ, ಚಿಕ್ಕೇರಿ ಬಸಪ್ಪ, ಉಪನ್ಯಾಸಕ ಹಾಲಪ್ಪ, ಶೇಖರನಾಯ್ಕ, ಸಾಹಿತಿ ಡಿ.ರಾಮನಮಲಿ, ಎಚ್‌.ಎಂ.ಸಂತೋಷ, ಮಾಲತೇಶ ಮರಿಗೌಡ, ಬಿ.ಎಚ್‌.ಚಂದ್ರಪ್ಪ, ಅರ್ಜುನ ಪರಸಪ್ಪ, ಎಲ್‌.ಮಂಜಾನಾಯ್ಕ, ಎನ್.ಶಂಕರ್‌, ಗುಡಿಹಳ್ಳಿ ಹಾಲೇಶ, ಎನ್.ಜಿ.ಬಸವರಾಜ  ಹಾಗೂ ಇತರರು ಉಪಸ್ಥಿತರಿದ್ದರು.  

error: Content is protected !!