ಬೆಂಬಲ ಬೆಲೆಯಲ್ಲಿ ರಾಗಿ, ಬಿಳಿಜೋಳ ಖರೀದಿ, ರಾಗಿ ಖರೀದಿಗೆ 5 ಕೇಂದ್ರಗಳು

ಬೆಂಬಲ ಬೆಲೆಯಲ್ಲಿ ರಾಗಿ, ಬಿಳಿಜೋಳ ಖರೀದಿ, ರಾಗಿ ಖರೀದಿಗೆ 5 ಕೇಂದ್ರಗಳು

ದಾವಣಗೆರೆ, ಡಿ. 4 –  ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಎಫ್.ಎ.ಕ್ಯೂ ಗುಣಮಟ್ಟದ ರಾಗಿ ಮತ್ತು ಜೋಳದ ಉತ್ಪನ್ನವನ್ನು ಖರೀದಿಸಲು ಜಿಲ್ಲೆಯ 5 ಕಡೆ ಖರೀದಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ. ಜಿ.ಎಂ. ಗಂಗಾಧರಸ್ವಾಮಿ ತಿಳಿಸಿದ್ದಾರೆ.

ಮಂಗಳವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಗಿ ಖರೀದಿ ಕೇಂದ್ರಗಳನ್ನು ದಾವಣಗೆರೆ, ಹರಿಹರ, ಹೊನ್ನಾಳಿ, ಜಗಳೂರು ಮತ್ತು ಚನ್ನಗಿರಿ ತಾಲ್ಲೂಕು ಎಪಿಎಂಸಿ ಆವರಣದಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, ರಾಗಿ ಮತ್ತು ಜೋಳ ಮತ್ತು ಮಾಲ್ಡಂಡಿ ಜೋಳ ಖರೀದಿಸಲಾಗುತ್ತದೆ.

ಪ್ರತಿ ರೈತರಿಂದ ರಾಗಿಯನ್ನು ಎಕರೆಗೆ 1 ಕ್ವಿಂಟಾಲ್‍ನಂತೆ ಗರಿಷ್ಠ 20 ಕ್ವಿಂಟಾಲ್ ರಾಗಿಯನ್ನು ಕ್ವಿಂಟಾಲ್‍ಗೆ ರೂ.4290 ರಂತೆ ಮತ್ತು ಬಿಳಿ ಜೋಳ ಉತ್ಪನ್ನವನ್ನು ಪ್ರತಿ ಎಕರೆಗೆ 10 ಪ್ರತಿ ಎಕರೆಗೆ 10 ಕ್ವಿಂಟಾಲ್‍ನಂತೆ ಪ್ರತಿ ಗರಿಷ್ಠ 150 ಕ್ವಿಂಟಾಲ್‍ನಷ್ಟು ಬಿಳಿಜೋಳ ಹೈಬ್ರೀಡ್ ಕ್ವಿಂಟಾಲ್‍ಗೆ ರೂ.3371 ರಂತೆ ಹಾಗೂ ಬಿಳಿಜೋಳ ಮಾಲ್ದಂಡಿ ಜೋಳವನ್ನು ಕ್ವಿಂಟಾಲ್‍ಗೆ ರೂ.3421 ಗಳಂತೆ ಎಫ್.ಎ.ಕ್ಯೂ ಗುಣಮಟ್ಟದ ಉತ್ಪನ್ನ  ಖರೀದಿಸಲಾಗುವುದು. ಜೋಳವನ್ನು ಜಿಲ್ಲೆಯಲ್ಲಿ ಹೆಚ್ಚು ಬೆಳೆಯಲಾಗುತ್ತಿಲ್ಲವಾದ್ದರಿಂದ ಖರೀದಿ ಕೇಂದ್ರಗಳನ್ನು ಇದಕ್ಕಾಗಿ ತೆರೆದಿರುವುದಿಲ್ಲ.

ರೈತರಿಂದ ರಾಗಿ ಖರೀದಿಸಲು ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮವನ್ನು ಖರೀದಿ ಏಜೆನ್ಸಿಯನ್ನಾಗಿ ನೇಮಕ ಮಾಡಲಾಗಿದೆ. ರಾಗಿ ಖರೀದಿಗೆ ಈಗಾಗಲೇ ರೈತರಿಂದ ನೋಂದಣಿಯನ್ನು ಪ್ರಾರಂಭಿಸಲಾಗಿದ್ದು 2025 ರ ಜನವರಿ 1 ರಿಂದ ಮಾರ್ಚ್ 31 ರ ವರೆಗೆ ಖರೀದಿ ಕೇಂದ್ರಗಳಲ್ಲಿ ರಾಗಿ ಖರೀದಿ ಮಾಡಲಾಗುತ್ತದೆ. ರೈತರು ಬೆಳೆ ನಮೂದಿನೊಂದಿಗೆ ಎಫ್‍ಐಡಿಯೊಂದಿಗೆ ನೋಂದಣಿ ಮಾಡಿಸಲು ತಿಳಿಸಿದ್ದಾರೆ. 

error: Content is protected !!