ಪ್ರತಿವರ್ಷ ಕನ್ನಡ ರಾಜ್ಯೋತ್ಸವ ಆಚರಿಸಲು ಹರಿಹರ ನಗರಸಭೆಗೆ ಕನ್ನಡಾಭಿಮಾನಿಗಳ ಮನವಿ
ಹರಿಹರ, ಡಿ.2- ನಗರಸಭೆ ವತಿಯಿಂದ ಪ್ರತಿವರ್ಷ ನವೆಂಬರ್ ತಿಂಗಳಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಬೇಕು ಮತ್ತು ನಗರದಲ್ಲಿ ಕನ್ನಡ ಭವನ ನಿರ್ಮಿಸಲು ನಿವೇಶನ ಒದಗಿಸುವಂತೆ ಆಗ್ರಹಿಸಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕ, ಕನ್ನಡ ಪರ ಸಂಘಟನೆಗಳು, ಪತ್ರಕರ್ತರು ಮತ್ತು ಸಾಹಿತ್ಯಾಸಕ್ತರ ನೇತೃತ್ವದಲ್ಲಿ ನಗರಸಭೆ ಅಧ್ಯಕ್ಷೆ ಮತ್ತು ಉಪಾಧ್ಯಕ್ಷರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಹದಿಮೂರನೆಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದ ಸಿ.ವಿ. ಪಾಟೀಲ್, ಮಾತನಾಡಿ, ದಾವಣಗೆರೆ ನಂತರ ಹರಿಹರ ನಗರವು ಜಿಲ್ಲೆಯಲ್ಲಿ ಎರಡನೇ ಅತಿದೊಡ್ಡ ನಗರವಾಗಿದೆ. ಕರ್ನಾಟಕದ ಸಾಂಸ್ಕೃತಿಕ ಮಜಲುಗಳನ್ನು ಹೊಂದಿರುವ ಸುಗಮ ಕೇಂದ್ರವಾಗಿ ಬೆಳೆದುಬಂದಿದೆ. ಬಹುಮುಖಿ ಆಪ್ತ ಸಂವೇದಿ ಸಾಂಸ್ಕೃತಿಕ ಸಮೃದ್ಧಿಯನ್ನು ಹೊಂದಿದ್ದು, ರಾಜ್ಯಮಟ್ಟದ ಗಮನವನ್ನು ಸೆಳೆಯುವ ಕವಿ, ಬರಹಗಾರರ ಸಾಹಿತ್ಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದುಕೊಂಡು ಬರುತ್ತಿವೆ. ಈ ನಿಟ್ಟಿನಲ್ಲಿ ಹರಿಹರ ನಗರಸಭೆ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಣೆಗೆ ಪುನಃ ಚಾಲನೆ ನೀಡಿ ಸ್ಥಳೀಯ ಕನ್ನಡ ಅಭಿಮಾನಿಗಳಿಗೆ ಪ್ರೋತ್ಸಾಹ ನೀಡುವಂತಹ ಕೆಲಸವನ್ನು ಮಾಡಬೇಕು ಎಂದರು.ಜೊತೆಗೆ ಕನ್ನಡ ಭವನ ನಿರ್ಮಿಸಲು ಸೂಕ್ತವಾದ ನಿವೇಶನವನ್ನು ಗುರುತಿಸಿ ಅದಕ್ಕೆ ಅನುದಾನ ಮಂಜೂರು ಮಾಡುವಂತೆ ಆಗ್ರಹಿಸುವುದಾಗಿ ಹೇಳಿದರು.
ನಗರಸಭೆ ಅಧ್ಯಕ್ಷರಾದ ಕವಿತಾ ಮಾರುತಿ ಹಾಗೂ ಉಪಾಧ್ಯಕ್ಷ ಜಂಬಣ್ಣ ಗುತ್ತೂರು ಮನವಿ ಸ್ವೀಕರಿಸಿ ಮಾತನಾಡಿ, ರಾಜ್ಯೋತ್ಸವ ಆಚರಣೆ ಮತ್ತು ಕನ್ನಡ ಭವನ ನಿರ್ಮಾಣ ವಿಚಾರಕ್ಕೆ ಸಂಬಂಧಿಸಿದಂತೆ ನಗರಸಭೆ ಸರ್ವ ಸದಸ್ಯರ ಜೊತೆಗೆ ಚರ್ಚಿಸಿ ಆದಷ್ಟು ಶೀಘ್ರವಾಗಿ ಸಮಸ್ಯೆಗೆ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ದೂಡಾ ಸದಸ್ಯ ಹೆಚ್.ನಿಜಗುಣ, ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಹೆಚ್.ಎಸ್. ಹೂಗಾರ್, ಕಾರ್ಮಿಕ ಮುಖಂಡ ಹೆಚ್.ಕೆ ಕೊಟ್ರಪ್ಪ, ಹಿರಿಯ ಸಾಹಿತಿ ಜೆ. ಕಲಿಂಬಾಷಾ, ಕಸಾಪ ಅಧ್ಯಕ್ಷ ಡಿ.ಎಂ. ಮಂಜುನಾಥಯ್ಯ, ಗೌರವ ಕಾರ್ಯದರ್ಶಿಗಳಾದ ಬಿ.ಬಿ. ರೇವಣ್ಣನಾಯ್ಕ್, ಎಂ. ಚಿದಾನಂದ ಕಂಚಿಕೇರಿ, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ ಶೇಖರಗೌಡ ಪಾಟೀಲ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ವಿಜಯ ಮಹಾಂತೇಶ್, ಕಾಳಿದಾಸ ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಬಿ. ರಾಜಶೇಖರ್, ಹಿರಿಯ ಸಾಹಿತಿ ಸುಬ್ರಹ್ಮಣ್ಯ ನಾಡಿಗೇರ, ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಎ.ಕೆ. ಭೂಮೇಶ್, ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ, ಗೌರವಾಧ್ಯಕ್ಷ ಎಂ. ಉಮ್ಮಣ್ಣ, ಬಿಜೆಪಿ ನಗರ ಘಟಕದ ಅಧ್ಯಕ್ಷ ಅಜಿತ್ ಸಾವಂತ್, ನಗರಸಭೆ ಸದಸ್ಯರಾದ ಕೆ.ಜಿ. ಸಿದ್ದೇಶ್, ರಜನಿಕಾಂತ್, ನಾಮನಿರ್ದೇಶನ ಸದಸ್ಯ ಸಂತೋಷ ದೊಡ್ಡಮನಿ, ನಿರ್ಮಲ ತುಂಗಭದ್ರಾ ನದಿ ಅಭಿಯಾನ ಸಂಚಾಲಕ ವೀರೇಶ್ ಅಜ್ಜಣ್ಣನವರ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿ ಜಿಗಳಿ ಪ್ರಕಾಶ್, ಕಸಾಪ ಗ್ರಾಮೀಣ ಘಟಕದ ಅಧ್ಯಕ್ಷ ದಂಡಿ ತಿಪ್ಪೇಸ್ವಾಮಿ, ಕನ್ನಡ ರಕ್ಷಣಾ ವೇದಿಕೆಯ ರಮೇಶ್ ಮಾನೆ, ಪ್ರೀತಮ್ ಬಾಬು, ಕ್ರೀಡಾಪಟು ಶಂಕರಮೂರ್ತಿ, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಈಶಪ್ಪ ಬೂದಿಹಾಳ, ಪತ್ರಕರ್ತರಾದ ಮಂಜುನಾಥ್ ಪೂಜಾರ್, ಹೆಚ್. ಮಂಜಾ ನಾಯ್ಕ್, ಸಂತೋಷ ಗುಡಿಮನಿ, ರಾಜನಹಳ್ಳಿ ಮಂಜುನಾಥ್, ಇರ್ಫಾನ್, ಎಂ.ಎನ್. ಬಸವರಾಜ್, ಲೀಲಾ ಎನ್.ಬಿ. ಸೀತಾ ಎಸ್. ನಾರಾಯಣ, ಎ.ಬಿ. ಮಂಜಮ್ಮ, ಬೇಬಿಯಮ್ಮ ಅಮರಾವತಿ ಇತರರು ಹಾಜರಿದ್ದರು.