ಜಗಳೂರು: ಸಂವಿಧಾನ ದಿನಾಚರಣೆಯಲ್ಲಿ ನ್ಯಾ.ಆರ್.ಚೇತನ್ ಅಭಿಮತ
ಜಗಳೂರು, ನ.26- ದೇಶದ ಏಕತೆಗೆ ಸಂವಿಧಾನವೇ ಮೂಲ ಆಧಾರವಾಗಿದ್ದು ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ಪ್ರತಿ ಯೊಬ್ಬರೂ ಗೌರವಿಸಬೇಕು ಎಂದು ಎಂದು ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶರಾದ ಆರ್.ಚೇತನ್ ಅಭಿಪ್ರಾಯ ವ್ಯಕ್ತಪಡಿಸಿದರು.
ಪಟ್ಟಣದ ಕೋರ್ಟ್ ಸಭಾಂ ಗಣದಲ್ಲಿ ತಾಲೂಕು ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಸಂವಿಧಾನ ದಿನಾಚರಣೆ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.
ಸಂವಿಧಾನದ ಅವಕಾಶಗಳು ಜಾತ್ಯಾತೀತ, ಧರ್ಮಾತೀತವಾಗಿವೆ. ಸಂವಿಧಾನದ ಆಶಯ ಮತ್ತು ಹಕ್ಕುಗಳಿಗೆ ದಕ್ಕೆ ಉಂಟಾದರೆ ಹೈಕೋರ್ಟ್, ಸುಪ್ರೀಂಕೋರ್ಟ್ ಮೆಟ್ಟಿಲೇರಲು ಮುಕ್ತ ಅವಕಾಶವಿದೆ ಎಂದು ಹೇಳಿದರು.
ವಕೀಲರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಬಸವರಾಜ್ ಮರೇನಹಳ್ಳಿ ಮಾತನಾಡಿ, ಪ್ರತಿ ಯೊಬ್ಬರೂ ಸಂವಿಧಾನದ ಮಹತ್ವ ಅರಿಯಬೇಕು.ಸಂವಿಧಾನದ ರಕ್ಷಣೆಗೆ ವಕೀಲರು ಪ್ರತಿಬಿಂಬವಾ ಗಿದ್ದಾರೆ. ಧರ್ಮಗ್ರಂಥಗಳ ಮೇಲಿನ ವ್ಯಾಮೋಹ, ಪ್ರಜ್ಞೆಯು ಶ್ರೇಷ್ಠ ಗ್ರಂಥ ಸಂವಿಧಾನದ ಮೇಲೆ ಮೈಗೂಡಿಸಿ ಕೊಳ್ಳಬೇಕು ಎಂದು ತಿಳಿಸಿದರು.
ವಕೀಲ ಕರಿಬಸಯ್ಯ ಮಾತ ನಾಡಿ, ಅಂಬೇಡ್ಕರ್ ಮತ್ತು ಬಸವಣ್ಣನವರನ್ನು ಜಾತ್ಯತೀತ ನಿಲುವಿನಲ್ಲಿ ಮನಗಂಡು, ಅವರು ರಚಿಸಿದ ಸಂವಿಧಾನ ಮತ್ತು ವಚನಗಳನ್ನು ಅಭ್ಯಾಸಿಸಿದರೆ ನಿಜಕ್ಕೂ ಆಶಯಗಳು ಅರ್ಥವಾಗುತ್ತವೆ. ಭ್ರಾತೃತ್ವ ಎಲ್ಲಾವರ್ಗದವರಿಗೂ ಅನ್ವಯವಾಗುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸರ್ಕಾರಿ ಸಹಾಯಕ ಅಭಿಯೋಜಕ ಮಂ ಜುನಾಥ್, ವಕೀಲರಾದ ರುದ್ರೇಶ್, ಕುಂಬಾರ, ಹನುಮಂತಪ್ಪ, ಕರಿಬಸಯ್ಯ, ತಿಪ್ಪೇಸ್ವಾಮಿ, ಬಸವ ರಾಜಪ್ಪ, ನಾಗೇಶ್, ಪಾಟೀಲ್, ವಕೀಲರ ಸಂಘದ ಪದಾಧಿಕಾರಿಗಳು ಇದ್ದರು.