3ನೇ ಬಾರಿಗೆ ನಡೆಯುತ್ತಿರುವ ತೆಪ್ಪೋತ್ಸವಕ್ಕೆ 30 ಸಾವಿರ ಜನ ಭಾಗಿಯಾಗುವ ನಿರೀಕ್ಷೆ
ಮಲೇಬೆನ್ನೂರು, ನ. 26 – ಕೊಮಾರನಹಳ್ಳಿ ಗ್ರಾಮದ ಹೆಳವನ ಕಟ್ಟೆ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ದೀಪೋತ್ಸವ ಮತ್ತು ತೆಪ್ಪೋತ್ಸವ ಇದೇ ದಿನಾಂಕ 29 ರಂದು ವೈಭವದೊಂದಿಗೆ ಜರುಗಲಿದೆ ಎಂದು ಸುರೇಶ್ ಶಾಸ್ತ್ರಿ ಮತ್ತು ಐರಣಿ ಅಣ್ಣಪ್ಪ ತಿಳಿಸಿದರು.
ಕೊಮಾರನಹಳ್ಳಿಯ ಶ್ರೀ ಲಕ್ಷ್ಮಿ ರಂಗನಾಥ ಸಮುದಾಯ ಭವನದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ್ದು, ಇದೇ ದಿನಾಂಕ 29 ರ ಶುಕ್ರವಾರ ಮಧ್ಯಾಹ್ನ 12 ಗಂಟೆಯಿಂದ ತಡರಾತ್ರಿಯವರೆಗೂ ಸಮುದಾಯ ಭವನದಲ್ಲಿ ಸುಮಾರು 30 ಸಾವಿರ ಜನರಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗುವುದು.
ಅಂದು ಮಧ್ಯಾಹ್ನ 3 ಗಂಟೆಯಿಂದ ಕೊಮಾರನಹಳ್ಳಿ ಗ್ರಾಮದಿಂದ ಕೆರೆಯವರೆಗೆ ಬೃಹತ್ ಶೋಭಾಯಾತ್ರೆ ಯನ್ನು ವಿವಿಧ ಕಲಾ ತಂಡಗಳೊಂದಿಗೆ ಹಮ್ಮಿಕೊಂಡಿದ್ದು, ಸಂಜೆ 6 ಗಂಟೆಯಿಂದ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ದೀಪೋತ್ಸವ ಮತ್ತು ಕೆರೆಯಲ್ಲಿ ಶ್ರೀ ಲಕ್ಷ್ಮಿ ರಂಗನಾಥ ಸ್ವಾಮಿಯ ತೆಪ್ಪೋತ್ಸವ ನಡೆಯಲಿದೆ.
ಕೊಮಾರನಹಳ್ಳಿ ಮಲೇಬೆನ್ನೂರು, ಹರಳಹಳ್ಳಿ, ದಿಬ್ದದಹಳ್ಳಿ, ಎರೇಹಳ್ಳಿ, ಹಾಲಿವಾಣ, ಕೊಪ್ಪ, ತಿಮ್ಲಾಪುರ ಗ್ರಾಮಗಳ ಗ್ರಾಮ ದೇವತೆಗಳ ಸಮ್ಮುಖದಲ್ಲಿ ಮತ್ತು ಭಕ್ತಾಧಿಗಳ ಸಹಕಾರದೊಂದಿಗೆ 3ನೇ ಬಾರಿಗೆ ಈ ತೆಪ್ಪೋತ್ಸವ ಆಯೋಜಿಸಲಾಗಿದೆ ಎಂದು ಸುರೇಶ್ ಶಾಸ್ತ್ರಿ ಮಾಹಿತಿ ನೀಡಿದರು.
ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್, ಶಾಸಕ ಬಿ.ಪಿ. ಹರೀಶ್, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ, ಮಾಜಿ ಶಾಸಕರಾದ ಎಸ್. ರಾಮಪ್ಪ, ಹೆಚ್.ಎಸ್. ಶಿವಶಂಕರ್ ಸೇರಿದಂತೆ ಜಿಲ್ಲೆಯ ಎಲ್ಲಾ ಹಾಲಿ, ಮಾಜಿ ಶಾಸಕರಿಗೆ ಆಮಂತ್ರಣ ನೀಡಲಾಗಿದೆ ಎಂದು ಐರಣಿ ಮಹೇಶ್ವರಪ್ಪ ತಿಳಿಸಿದರು.
1951 ರಲ್ಲಿ ಶ್ರೀ ರಂಗನಾಥ ಆಶ್ರಯದಲ್ಲಿ ಶ್ರೀ ಶಂಕರಲಿಂಗ ಭಗವಾ ನರ ನೆತೃತ್ವದಲ್ಲಿ ಪ್ರಪ್ರಥಮ ಬಾರಿಗೆ ಕೆೇೆರೆ ಯಲ್ಲಿ ತೆಪ್ಪೋತ್ಸವ ಆಚರಣೆಗೆ ಮಾಡ ಲಾಗಿತ್ತೆಂದು ಹಿರಿಯರು ಹೇಳಿದ್ದಾರೆ. ನಂತರ 2009ರಲ್ಲಿ ಸರ್ವ ದೇವತೆಗಳ ಸಮ್ಮುಖದಲ್ಲಿ ಭಕ್ತರ ಸಹಕಾರದೊಂದಿಗೆ ವಿಜೃಂಭಣೆಯಿಂದ 2ನೇ ಬಾರಿಗೆ ತೆಪ್ಪೋತ್ಸವ ನಡೆೆಸಿದ್ದೆವು ಎಂದು ಗ್ರಾಮದ ರಾಮಣ್ಣ ಸ್ವಾಮಿ ಹೇಳಿದರು.
ಈ ಬಾರಿಯ ತೆಪ್ಪೋತ್ಸವಕ್ಕೆ ಬೆಂಗಳೂರು, ಮೈಸೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆಯಿದ್ದು ಎಲ್ಲಾ ಸಿದ್ಧತೆಗಳನ್ನು ಪೂರ್ಣಗೊಳಿಸದ್ದೇವೆ. ಕೆರೆಯಲ್ಲಿ ದೀಪ ಸೇವೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಗ್ರಾಮದ ಮಡಿವಾಳರ ಬಸವರಾಜ್ ತಿಳಿಸಿದರು.
ಕೆರೆಯಲ್ಲಿ ನೀರಿನ ಮಟ್ಟ ಹೆಚ್ಚಾಗಿರುವುದರಿಂದ ತೆಪ್ಪೋತ್ಸವದ ವೇಳೆ ಯಾರು ಕೆರೆಗೆ ಇಳಿಯಬಾರದೆಂದು ಐರಣಿ ಅಣ್ಣಪ್ಪ ಮನವಿ ಮಾಡಿದರು.
ಶೋಭಾಯಾತ್ರೆ ವೇಳೆ ಮತ್ತು ತೆಪ್ಪೋತ್ಸವದ ವೇಳೆ ಶಿವಮೊಗ್ಗ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ಬದಲಿ ಮಾರ್ಗದಲ್ಲಿ ಮಾಡುವಂತೆ ಪಿಎಸ್ಐ ಪ್ರಭು ಕೆಳಗಿನಮನೆ ಅವರಿಗೆ ಮನವಿ ಮಾಡಲಾಗಿದೆ ಎಂದು ಗ್ರಾಮದ ಎಸ್.ಎಂ.ಮಂಜುನಾಥ್ ತಿಳಿಸಿದರು.
ಸಿ. ರಂಗನಾಥ್, ನವೀನ್ ಪಾಟೀಲ್, ದಾನಪ್ಳ ಅರುಣ್, ಜಿ. ರಂಗಪ್ಪ, ದಿಬ್ಬದಹಳ್ಳಿ ಓಂಕಾರಪ್ಪ, ಐರಣಿ ಮೂರ್ತಿ, ಧರ್ಮರಾವ್, ಎಸ್.ಹೆಚ್. ಹಾಲೇಶ್, ಯು. ನಾಗಣ್ಣ, ಎಂ.ಎಂ. ಗೌಡ್ರು, ಎ.ವಿ. ವೀರೇಶ್, ಧನರಾಜ್, ಎ. ನಾಗರಾಜ್, ಎನ್., ಮಂಜುನಾಥ, ಯು. ಅಣ್ಣಪ್ಪ ಸೇರಿದಂತೆ ಕೊಮಾರನಹಳ್ಳಿ ಗ್ರಾಮಸ್ಥರು ಸುದ್ದಿಗೋಷ್ಟಿಯಲ್ಲಿದ್ದರು.
ಬೋಟ್ ವ್ಯವಸ್ಥೆ ತೆಪ್ಪೋತ್ಸವದ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆ ಕೊಮಾರನಹಳ್ಳಿ ಕೆರೆಗೆ ಬೇಟಿ ನೀಡಿದ್ದ ಪ್ರವಾಸೋಧ್ಯಮ ಇಲಾಖೆಯ ಕಾವ್ಯ ಅವರು ತೆಪ್ಪೋತ್ಸವದ ಬಗ್ಗೆ ಮಾಹಿತಿ ಪಡೆದುಕೊಂಡು ಸಿದ್ಧತೆ ಪರಿಶೀಲಿಸಿದರು.
ತೆಪ್ಪೋತ್ಸವದ ದಿನ ಪ್ರವಾಸೋದ್ಯಮ ಇಲಾಖೆಯಿಂದ ಬೋಟ್ ಸೌಲಭ್ಯ ಕಲ್ಪಿಸಲಾಗುವುದೆಂದು ತಿಳಿಸಿದರು.