ಕೆ-ಸೆಟ್ ಪರೀಕ್ಷೆ ಬರೆಯಲು ಆಗಮಿಸಿದ್ದ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಹೊರಗೆ ನೋಂದಣಿ ಸಂಖ್ಯೆ ಪರಿಶೀಲಿಸುತ್ತಿರುವುದು
ದಾವಣಗೆರೆ, ನ. 24- ನಗರದ 17 ಕೇಂದ್ರಗಳಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ನಡೆಸಲಾಗುತ್ತಿರುವ ಕರ್ನಾಟಕ ರಾಜ್ಯ ಅರ್ಹತಾ ಪರೀಕ್ಷೆ (ಕೆ-ಸೆಟ್) ಭಾನುವಾರ ಯಶಸ್ವಿಯಾಗಿ ನಡೆಯಿತು. ಪರೀಕ್ಷೆಗೆ ನೋಂದಣಿಯಾಗಿದ್ದ 7304 ಅಭ್ಯರ್ಥಿಗಳ ಪೈಕಿ 6244 ಜನರು ಪರೀಕ್ಷೆ ಬರೆದು, 1060 ಜನರು ಗೈರು ಹಾಜರಾಗಿದ್ದರು.
ಬೆಳಿಗ್ಗೆ 10 ರಿಂದ 1 ಗಂಟೆವರೆಗೂ ಪರೀಕ್ಷೆ ನಡೆಯಿತು. ಯಾವುದೇ ಅಕ್ರಮ ನಡೆಯದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿತ್ತು.