`ನಮ್ಮ ಭೂಮಿ-ನಮ್ಮ ಹಕ್ಕು’ ಜಾಗೃತಿ ಆಂದೋಲನ, ಮಠಾಧೀಶರ ಬೆಂಬಲ
ಮಹಾನಗರ ಪಾಲಿಕೆ ಮುಂಭಾಗ ಪ್ರತಿಭಟನೆ
ದಾವಣಗೆರೆ, ನ.22- ವಕ್ಫ್ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿರುದ್ಧ `ನಮ್ಮ ಭೂಮಿ-ನಮ್ಮ ಹಕ್ಕು’ ಘೋಷವಾಕ್ಯದೊಂದಿಗೆ ಮಹಾನಗರ ಪಾಲಿಕೆ ಮುಂಭಾಗ ಜಿಲ್ಲಾ ಬಿಜೆಪಿ ವತಿಯಿಂದ ಜನ ಜಾಗೃತಿ ಆಂದೋಲನ ಹಾಗೂ ಧರಣಿ ನಡೆಸಲಾಯಿತು.
ಚಿತ್ರದುರ್ಗ ಸೇವಾಲಾಲ್ ಮಠದ ಶ್ರೀ ಸಂತ ಸೇವಾಲಾಲ್ ಸ್ವಾಮೀಜಿ ಮಾತನಾಡಿ, ದೇಶದ ಮೇಲೆ ಹಲವಾರು ದಾಳಿಗಳಾಗಿ ಸಂಪತ್ತನ್ನು ಲೂಟಿ ಮಾಡಿದ್ದನ್ನು ಇತಿಹಾಸದಲ್ಲಿ ಓದುತ್ತಿದ್ದೇವೆ. ಈಗ ವಕ್ಫ್ ಮೂಲಕ ಅಂತಹದ್ದೇ ದಾಳಿ ನಡೆಯುತ್ತಿದೆ. ನಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೋರಾಟ ನಡೆಸಬೇಕಾದ ಪರಿಸ್ಥಿತಿ ಬಂದೊದಗಿದೆ ಎಂದರು.
ರೈತರಿಗೆ ಮೇಲಿಂದ ಮೇಲೆ ಅನ್ಯಾಯವಾಗು ತ್ತಿದೆ. ಸರ್ಕಾರ ನ್ಯಾಯ ಒದಗಿಸುತ್ತದೆ ಎಂಬ ವಿಶ್ವಾಸವಿಲ್ಲವಾಗಿದೆ. ಕಾಂಗ್ರೆಸ್ ಸರ್ಕಾರ ಜಾತಿ ಹಾಗೂ ಧರ್ಮಗಳ ಮಧ್ಯೆ ಮನಸ್ತಾಪ ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು.
ಕೇವಲ ರೈತರ ಜಮೀನುಗಳಷ್ಟೇ ಅಲ್ಲ. ಮಠಗಳ ಜಾಗವನ್ನೂ ಬಿಡುತ್ತಿಲ್ಲ. ಮಠಗಳ ಆಸ್ತಿಗಳ ಮೇಲೆ ವಕ್ಫ್ ಕಣ್ಣು ಬಿದ್ದಿದೆ. ಹೀಗಾಗಿ ಮಠಾಧೀಶರೂ ಸಹ ರೈತರೊಂದಿಗೆ ಹೋರಾಟ ನಡೆಸುತ್ತಿದ್ದಾರೆ. ಈ ಹೋರಾಟ ಕೇವಲ ತಾಲ್ಲೂಕು, ಜಿಲ್ಲಾ ಕೇಂದ್ರಗಳಿಗೆ ಸೀಮಿತವಾಗದೇ ನಾಡಿನಾದ್ಯಂತ ನಡೆಯಬೇಕಿದೆ ಎಂದರು.
ಪ್ರತಿಭಟನೆ ನೇತೃತ್ವ ವಹಿಸಿದ್ದ ಮಾಜಿ ಸಚಿವ ಎಸ್.ಎ. ರವೀಂದ್ರನಾಥ್ ಮಾತನಾಡಿ, ವಕ್ಫ್ ವಿರುದ್ಧ ಪಕ್ಷದ ಹಿರಿಯರು ಏನು ಕರೆ ಕೊಡ್ತಾರೆ. ಅದರಂತೆ ನಾವೆಲ್ಲಾ ಹೋರಾಟ ಮಾಡೋಣ ಎಂದು ಹೇಳಿದರು.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ನಾವು ಹಿಂದೂಗಳು ಪಕ್ಷಾತೀತವಾಗಿ, ಜಾತ್ಯತೀತವಾಗಿ ಒಂದಾಗಬೇಕಿದೆ. ಸ್ವಾಸ್ಥ್ಯಕ್ಕಾಗಿ, ರಾಜಕಾರಣಕ್ಕಾಗಿ ಅಲ್ಲ, ಸನಾತನ ಧರ್ಮಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಆದರೆ ಇವರು 500 ವರ್ಷಗಳ ಹಿಂದೆ ಬ ಂದು ನಮ್ಮ ದೇಶ ಲೂಟಿ ಮಾಡಲು ಹೊರಟಿದ್ದಾರೆ. ಇವರಿಗೆ ತಕ್ಕ ಪಾಠ ಕಲಿಸಬೇಕಿದೆ ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ ಮಾತನಾಡಿ, ದೇಶದಲ್ಲಿ 18 ಲಕ್ಷ ಎಕರೆ ಪ್ರದೇಶ ಮಿಲಿಟರಿಗೆ ಸೇರಿದ್ದರೆ, 12 ಲಕ್ಷ ಎಕರೆ ಪ್ರದೇಶ ರೈಲ್ವೇ ಇಲಾಖೆಗೆ ಸೇರಿದೆ. 8 ಲಕ್ಷ ಎಕರೆ ಪ್ರದೇಶ ವಕ್ಫ್ ಆಸ್ತಿಯಾಗಿದೆ. ಹೀಗಿದ್ದಾಗ ಇವರೆಲ್ಲಾ ಅಲ್ಪಸಂಖ್ಯಾತ ರಾಗಲು ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು.
ಬಿಜೆಪಿ ಮುಖಂಡ ಸತೀಶ್ ಕೊಳೇನಹಳ್ಳಿ ಮಾತನಾಡಿ, ಪಿ.ಜೆ.ಬಡಾವಣೆಯಲ್ಲಿನ ಆಸ್ತಿ ವಕ್ಫ್ಗೆ ಸೇರಿದ್ದು ಎಂಬ ವಿಷಯ ತಿಳಿದರೂ, ಅಲ್ಲಿನ ಜನರ ಸಮಸ್ಯೆ ಆಲಿಸಿ ಪರಿಹಾರ ನೀಡದೆ, ಜನರ ಆಕ್ರೋ ಶಕ್ಕೆ ತುತ್ತಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ಪಾಕಿಸ್ತಾನ, ಕಾಶ್ಮೀರ, ಬಾಂಗ್ಲಾದಲ್ಲಿ ಆರಂಭವಾದ ಲ್ಯಾಂಡ್ ಜಿಹಾದ್ ಇಂದು ರಾಜ್ಯಕ್ಕೆ ಅದರಲ್ಲೂ ದಾವಣಗೆರೆಗೂ ಬಂದಿದೆ. ಭಾರತವನ್ನು ಇಸ್ಲಾಮೀಕರಣ ಮಾಡುವ ಕನಸಿನ ಮೊದಲ ಮೆಟ್ಟಿಲು ಇದು ಎಂದರೆ ತಪ್ಪಾಗಲಾರದು ಎಂದರು.
ಈ ವೇಳೆ ಚನ್ನಗಿರಿ ಹೆಚ್.ಎಸ್.ವಿಜಯ್ ಕುಮಾರ್ ಅವರ 3 ಎಕರೆ ಜಮೀನು ವಕ್ಫ್ ಆಸ್ತಿ ಎಂದು ಪಹಣಿಯಲ್ಲಿ ಬದಲಾಗಿರುವುದು ಸೇರಿದಂತೆ, ಮೂವರು ರೈತರು ಅಹವಾಲು ಸಲ್ಲಿಸಿದರು.
ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಪುಣ್ಯಕೋಟಿ ಮಠದ ಬಾಲಯೋಗಿ ಶ್ರೀ ಜಗದೀಶ್ವರ ಸ್ವಾಮೀಜಿ ಆಗಮಿಸಿ, ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಹೆಚ್. ಶಿವಯೋಗಿಸ್ವಾಮಿ, ಮಾಜಿ ಶಾಸಕ ಎಂ.ಬಸವರಾಜ ನಾಯ್ಕ, ಜಿಲ್ಲಾಧ್ಯಕ್ಷ ಎನ್. ರಾಜಶೇಖರ್, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಪಕ್ಷದ ಪ್ರಮುಖರಾದ ಗಾಯತ್ರಿ ಸಿದ್ದೇಶ್ವರ, ಜಯಮ್ಮ, ಅನಿಲ್ ಕುಮಾರ್ ನಾಯಕ್, ಐರಣಿ ಅಣ್ಣೇಶ್, ಪ್ರಸನ್ನ ಕುಮಾರ್, ಶಿವಾನಂದ, ಶಿವಪ್ರಕಾಶ್, ಎಸ್.ಟಿ ವೀರೇಶ್, ಕೆ. ಎಂ. ವೀರೇಶ್, ರೇಣುಕಾ ಶ್ರೀನಿವಾಸ್, ಸುರೇಶ್ ಗಂಡಗಾಳೆ, ಎಲ್.ಎನ್. ಕಲ್ಲೇಶ್, ಬಿ.ಎಸ್. ಜಗದೀಶ್, ಹೆಚ್.ಎನ್. ಶಿವಕುಮಾರ್, ಮುರುಗೇಶ್ ಆರಾಧ್ಯ, ಶಿವರಾಜ್ ಪಾಟೀಲ್, ಮಂಜಾ ನಾಯಕ್, ಬಿ.ಟಿ. ಸಿದ್ದಪ್ಪ, ಶಾಂತರಾಜ್ ಪಟೇಲ್, ಸುರೇಶ್, ಜಯಣ್ಣ, ಜ್ಯೋತಿ ಸಿದ್ದೇಶ್, ಕೆ.ಜಿ. ಕಲ್ಲಪ್ಪ, ವಿಶ್ವಾಸ್ ಹೆಚ್.ಪಿ., ಎನ್.ಎಚ್. ಹಾಲೇಶ್, ಕೊಟ್ರೇಶ್ ಗೌಡ, ರಾಜು ನಿಲಗುಂದ, ನವೀನ್, ಕಿಶೋರ್, ಮಂಜು, ಪ್ರವೀಣ್, ಗುರು ಸೋಗಿ, ಮಂಜಣ್ಣ, ಶಾಮನೂರು ರಾಜು, ಓಂಕಾರಪ್ಪ, ಮಹೇಂದ್ರ , ರಾಜು, ಭಾಗ್ಯ ಪಿಸಾಳೆ, ನೀತು, ಸವಿತಾ ಇತರರಿದ್ದರು.