ತಮ್ಮ ಬರವಣಿಗೆಯಿಂದ ಜನರ ಬದುಕು ಕಟ್ಟಿಕೊಟ್ಟವರು ವಚನಕಾರರು

ತಮ್ಮ ಬರವಣಿಗೆಯಿಂದ ಜನರ  ಬದುಕು ಕಟ್ಟಿಕೊಟ್ಟವರು ವಚನಕಾರರು

ಹೊನ್ನಾಳಿಯ ಕಸಾಪ ಕಾರ್ಯಕ್ರಮದಲ್ಲಿ ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಎಂ.ಆರ್. ಲೋಕೇಶ್

ಹೊನ್ನಾಳಿ, ನ. 21 – ಜನರು ಬದುಕು ಕಟ್ಟಿಕೊಳ್ಳಲು ಬರೆದವರು ವಚನಕಾರರು. ಈ ದೃಷ್ಟಿಯಿಂದಾಗಿ ಜನರಿಗೆ ಹತ್ತಿರವಾಗಿರು ವವರು. ಸರಳತೆಯ ವಚನ ಧರ್ಮ ವಿಶ್ವ ಸಾಹಿತ್ಯಕ್ಕೆ ಕೊಡುಗೆ ನೀಡುವ ಮೂಲಕ ನಿಜವಾದ ಧರ್ಮವಾಗಿ ಪ್ರಭಾವ ಬೀರಿದೆ ಎಂದು ಶರಣ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಎಂ.ಆರ್. ಲೋಕೇಶ್ ಹೇಳಿದರು.

ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು, ವಿಜಯ ಪದವಿ ಪೂರ್ವ ಕಾಲೇಜುಗಳ ಆಶ್ರಯದಲ್ಲಿ ನಡೆದ ’ವಚನ ಸಾಹಿತ್ಯದಲ್ಲಿ ವೈಚಾರಿಕತೆ’ ಎಂಬ ವಿಷಯವಾಗಿ ಉಪನ್ಯಾಸ ವನ್ನು ಉದ್ದೇಶಿಸಿ ಅವರು ಮಾತನಾಡಿದರು. 

ವಚನಕಾರರು ಮೌಲ್ಯವನ್ನು ವಿರೋಧಿಸಿದ್ದು, ಬದುಕಿನ ಅರಿವು-ತಿಳುವಳಿಕೆ ಮೂಡಿಸುವ ಪ್ರಯತ್ನ ಮಾಡಿರುವರು. ಅತ್ಯಾಚಾರ-ಭ್ರಷ್ಟಾಚಾರದಂತಹ ಅನಿಷ್ಟಗಳು ಸಂದರ್ಭದಲ್ಲಿ ತಾಂಡವ ಆಡುತ್ತಿರುವ ಪ್ರಸ್ತುತ ದಿನಗಳಲ್ಲಿ ಸಜ್ಜನರ ಬದುಕು ಹಲವಾರು ಪ್ರಶ್ನೆಗಳ ಎದುರಾಗುವಂತೆ ಮಾಡಿವೆ ಎಂಬುದಾಗಿ ವಿವರಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಬಿ.ಎಂ. ಸದಾಶಿವಪ್ಪ ಮಾತನಾಡಿ, ತಾವು ಜಿಲ್ಲಾ ಕಸಾಪ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಜಿಲ್ಲೆಯಲ್ಲಿ 43 ದತ್ತಿಗಳಿದ್ದವು. ಜಿಲ್ಲಾಧ್ಯಕ್ಷರಾದ ನಂತರದ ದಿನಗಳಲ್ಲಿ 170ಕ್ಕೆ ಹೆಚ್ಚು ದತ್ತಿಗಳನ್ನಾಗಿ ಮಾಡಲಾಗಿತ್ತು. ರಾಜ್ಯದ ಎಲ್ಲಾ ಜಿಲ್ಲೆಗಳಿಗಿಂತ ದಾವಣಗೆರೆಯು ದತ್ತಿಯನ್ನು ಸ್ಥಾಪಿಸುವಲ್ಲಿ ಅಗ್ರಸ್ಥಾನದಲ್ಲಿದೆ. ಜಿಲ್ಲಾಧ್ಯಕ್ಷರಾಗಿದ್ದ ಅವಧಿಯಲ್ಲಿ ಬಹಳ ಯಶಸ್ವಿಯಾಗಿ ಜಿಲ್ಲಾ ಸಮ್ಮೇಳನ ಹೊನ್ನಾಳಿ ತಾಲ್ಲೂಕು ಪರಿಷತ್ತು ಮಾಡಿದ್ದನ್ನು ಸ್ಮರಿಸಿದರು.

ತಾಲ್ಲೂಕು ಕಸಾಪ ಅಧ್ಯಕ್ಷ ಮುರಿಗೆಪ್ಪಗೌಡ ಮಾತನಾಡಿ, ರಾಜ್ಯ ಕಸಾಪ ಅಧ್ಯಕ್ಷರಾಗಿರುವ ಮಹೇಶ್ ಜೋಷಿ ನೇತೃತ್ವದಲ್ಲಿ ಒಂದು ಕೋಟಿ ಸದಸ್ಯರ ನಿರೀಕ್ಷೆ ಹೊಂದಿದ್ದು. 109 ವರ್ಷಗಳು ಗತಿಸಿರುವ ಪರಿಷತ್ತು ಈಗಾಗಲೇ 4 ಲಕ್ಷ ಸದಸ್ಯತ್ವ ದಾಟಿದೆ. ನಾಡಿನ ಜನರಲ್ಲಿ ದತ್ತಿಗಳ ಮೂಲಕ ಸಾಹಿತ್ಯಕ್ಕೆ ಹೆಚ್ಚು ಒಲವು ಮೂಡಿಸುವಂತೆ ಮಾಡಲಾಗುತ್ತಿದೆ ಎಂದರು.

ದತ್ತಿದಾನಿ ದಾವಣಗೆರೆ ಶಾಂತರಾಜ್ ಮಾತನಾಡಿ, ಕಾಯಕ ನಿಷ್ಠೆ ಹಾಗೂ ದಾಸೋಹದ ನಿಷ್ಠೆಯಿಂದಾಗಿ ಮಾಗನೂರ್ ಬಸಪ್ಪನವರು ಶತಮಾನದ ಜಿಲ್ಲಾ ಶ್ರೇಷ್ಠ ವ್ಯಕ್ತಿಯಾಗಿದ್ದಾರೆ ಎಂದರು. 

ಕೋಟಿಹಾಳ್ ಬಸಮ್ಮ ಹಂಪೋಳ್ ಶಿವಪ್ಪ, ಮಾಗನೂರು ಬಸಪ್ಪ, ಕುಂಕೋದ್ ಚನ್ನಬಸಮ್ಮ, ಕತ್ತಿಗೆ ನಾಗಮ್ಮ, ನಾಗಪ್ಪ, ಬಸವರಾಜಪ್ಪ ಹೆಸರಿನ ಮೂರು ದತ್ತಿಗಳು ನಡೆದವು.

ಸಭೆಯ ಅಧ್ಯಕ್ಷತೆಯನ್ನು ಚಿಗುರು ಸಂಸ್ಥೆಯ ನಿರ್ದೇಶಕ ಸುನಿಲ್ ಕುಮಾರ್ ವಹಿಸಿದ್ದರು. ಉದ್ಘಾಟನೆಯನ್ನು ಜಿಲ್ಲಾ ನಿವೃತ್ತ ಕಾರ್ಯ ಪಾಲಕ ಎಚ್. ಎಸ್. ಬಸವರಾಜಪ್ಪ ನೆರವೇರಿಸಿದರು.

ನಾಗರಾಜ್ ನಾಯಕ್ ಚಿಗುರು ಸಂಸ್ಥೆಯ ದೇವರಾಜ್ ಕಸಾಪ ಮಾಜಿ ಅಧ್ಯಕ್ಷ ರೇವಣಪ್ಪ ಇನ್ನಿತರರಿದ್ದರು. ಎಂ. ಚಿನ್ಮಯ್  ಪಾಟೀಲ್ ಪ್ರಾರ್ಥಿಸಿ, ಕೆ. ಶೇಖರಪ್ಪ ಸ್ವಾಗತಿಸಿ, ಶಾರದಾ ಕಣಗೊಟಗಿ   ನಿರೂಪಿಸಿ ಕತ್ತಿಗಿ ನಾಗರಾಜ ವಂದಿಸಿದರು.

error: Content is protected !!